Viral: ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಘಾತಕಾರಿ ದೃಶ್ಯ ವೈರಲ್‌

ಜೇಬಿನಲ್ಲಿಟ್ಟಿದ್ದ ಮೊಬೈಲ್‌ ಸ್ಪೋಟಗೊಂಡಂಹ, ಚಾರ್ಜ್‌ಗೆ ಇಟ್ಟಿದ್ದ ಫೋನ್‌ ಸ್ಫೋಟಗೊಂಡ, ಸೆಲ್‌ ಫೋನ್‌ ಸ್ಫೋಟಗೊಂಡ, ಮಾತನಾಡುತ್ತಿರುವಾಗಲೇ ಫೋನ್‌ ಬ್ಲಾಸ್ಟ್‌ ಆದ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಮಹಿಳೆಗೆ ಹಲವಾರು ಗಾಯಗಳಾಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral: ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಘಾತಕಾರಿ ದೃಶ್ಯ ವೈರಲ್‌
ವೈರಲ್​ ವಿಡಿಯೋ
Edited By:

Updated on: Feb 14, 2025 | 3:38 PM

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುವುದು ತೀರಾ ಸಾಮಾನ್ಯವಾಗಿಬಿಟ್ಟಂತಿದೆ. ಅದೆಷ್ಟೋ ಬಾರಿ ಮಾತನಾಡುವಾಗ, ಜಾರ್ಜ್‌ ಮಾಡುವಾಗ ಮೊಬೈಲ್‌ ಸ್ಫೋಟಗೊಂಡ, ಪ್ಯಾಂಟ್‌ ಜೇಬಿನಲ್ಲಿಟ್ಟಿದ ಮೊಬೈಲ್‌ ಫೋನ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಫೋನ್‌ ಬ್ಲಾಸ್ಟ್‌ ಆಗಿ ಪ್ರಾಣವೇ ಹೋಗಿರುವಂತ ಉದಾಹರಣೆಯೂ ಇದೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಮಹಿಳೆಗೆ ಹಲವಾರು ಗಾಯಗಳಾಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಬ್ರೆಜಿಲ್‌ನ ಅನಾಪೊಲಿಸ್‌ ಎಂಬಲ್ಲಿ ನಡೆದಿದ್ದು, ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಮಹಿಳೆಯ ಸ್ಫೋಟಗೊಂಡಿದೆ. ಹೌದು ಮಹಿಳೆಯೊಬ್ಬರು ತಮ್ಮ ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಇಟ್ಟಿದ್ದ ಮೊಬೈಲ್‌ ಫೋನ್‌ ಏಕಾಏಕಿ ಸ್ಫೋಟಗೊಂಡಿದೆ. ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದ್ದು, ಮಹಿಳೆಯ ಪತಿ ಬೆಂಕಿ ನಂದಿಸಲು ಹಹಸಾಹಸ ಪಟ್ಟಿದ್ದಾರೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸುಟ್ಟು ಗಾಯಗಳಿಗೆ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ. ಒಂದು ವರ್ಷ ಹಳೆಯ ಮೊಟೊರೊಲಾ ಮೋಟೋ E32 ಫೋನ್‌ ಸ್ಫೋಟಗೊಂಡಿದ್ದು, ಈ ಭಯಾನಕ ದೃಶ್ಯ ಸೂಪರ್‌ ಮಾರ್ಕೆಟ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Bubblebathgirl ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಮಹಿಳೆಯೊಬ್ಬರು ದಿನಸಿ ಸಾಮಾಗ್ರಿಗಳನ್ನು ಖರೀಸುತ್ತಿದ್ದ ವೇಳೆ ಅವರ ಪ್ಯಾಂಟ್‌ ಹಿಂಬದಿ ಜೇಬಿನಲ್ಲಿದ್ದ ಮೊಬೈಲ್‌ ಫೋನ್‌ ಏಕಾಏಕಿ ಬ್ಲಾಸ್ಟ್‌ ಆದ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಮೊಬೈಲ್‌ ಸ್ಫೋಟಗೊಂಡು ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಉರಿ ತಡೆಯಲಾರದೆ ಮಹಿಳೆ ಓಡಿ ಹೋಗಿದ್ದಾರೆ.

ಇದನ್ನೂ ಓದಿ: ಶಿವಲಿಂಗದ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು; ವಿಡಿಯೋ ವೈರಲ್‌

ಫೆಬ್ರವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 11 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ಯಾಂಟ್‌ ಜೇಬಿನಲ್ಲಿ ಯಾವತ್ತೂ ಮೊಬೈಲ್‌ ಇಟ್ಟುಕೊಳ್ಳಬೇಡಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ನಿಜಕ್ಕೂ ಭಯಾನಕಾವಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಭಯಾನಕ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ