Viral Video: ಅಮೆರಿಕದ ಶಾಲೆಗಳಿಗಾಗಿ ಬುಲೆಟ್​ ಪ್ರೂಫ್​ ಕೊಠಡಿ; ನೆಟ್ಟಿಗರ ವಿಷಾದ

|

Updated on: Jun 30, 2023 | 3:58 PM

Bullet Proof Room : ಇದೊಂದು ಡ್ರೈ ಎರೇಸ್​ ಬೋರ್ಡ್​ನಂತೆ ಕಾಣುತ್ತದೆ, ಹಿಡಿದೆಳೆದರೆ ಸೆಕೆಂಡುಗಳಲ್ಲೇ ಬುಲೆಟ್​ ಪ್ರೂಫ್​ ಕೊಠಡಿಯಾಗುತ್ತದೆ. ಇದರ ಬೆಲೆ 6 ಮಿಲಿಯನ್. ಸುರಕ್ಷೆಗಾಗಿ ಉಪಾಯವೇನೋ ಸರಿ, ಆದರೆ ಮಕ್ಳಳ ಸಹಜ ಬದುಕು?

Viral Video: ಅಮೆರಿಕದ ಶಾಲೆಗಳಿಗಾಗಿ ಬುಲೆಟ್​ ಪ್ರೂಫ್​ ಕೊಠಡಿ; ನೆಟ್ಟಿಗರ ವಿಷಾದ
ಅಮೆರಿಕದ ಶಾಲೆಯಲ್ಲಿ ಬುಲೆಟ್​ ಪ್ರೂಫ್ ಕೊಠಡಿ ಮಾದರಿ
Follow us on

America: ಜನವರಿಯಲ್ಲಿ ಅಮೆರಿಕದಲ್ಲಿ 23 ದಿನಗಳಲ್ಲಿ 36 ಸಾಮೂಹಿಕ ಗುಂಡಿನ ದಾಳಿ ನಡೆದಿವೆ. ಕಳೆದ ವರ್ಷ 6 ತಿಂಗಳಲ್ಲಿ 306 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. ಹೀಗೆ ಅಮೆರಿಕದಲ್ಲಿ ಸತತವಾಗಿ ನಡೆಯುವ ಸಾಮೂಹಿಕ ಗುಂಡಿನ ದಾಳಿಗೆ ಅಲ್ಲಿಯ ಜನರಷ್ಟೇ ಏಕೆ ಜಗತ್ತಿನ ಜನರೂ ತತ್ತರಿಸುತ್ತಿರುತ್ತಾರೆ. ಜೊತೆಗೆ ಶಾಲಾ ಮಕ್ಕಳ ಶೂಟ್​ಔಟ್​ ಪ್ರಕರಣಗಳೇನು (Shootout Incidents) ಕಡಿಮೆ ಇಲ್ಲ. ಹಾಗಾಗಿಯೇ ಅಲ್ಲಿಯ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯಪಡುವಂಥ ಪರಿಸ್ಥಿತಿಯೂ ಆಗಾಗ ಉಂಟಾಗುತ್ತಿರುತ್ತದೆ. ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕದ ಶಾಲೆಗಳಿಗಾಗಿ ಬುಲೆಟ್​ ಪ್ರೂಫ್​ ಕೊಠಡಿಯನ್ನು ರೂಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಅನ್ನು ಸುಮಾರು 6.2 ಮಿಲಿಯನ್​ ಜನರು ನೋಡಿದ್ದಾರೆ. ಹೀಗೊಂದು ಐಡಿಯಾ ಮಾಡಿದ್ದಕ್ಕೆ ಇದನ್ನು ನೋಡಿ ಖುಷಿಪಟ್ಟುಕೊಳ್ಳಬೇಕೋ, ದುಃಖಿಸಬೇಕೋ ಗೊತ್ತಾಗುತ್ತಿಲ್ಲ ಎಂದು ನೆಟ್ಟಿಗರು ಗೊಂದಲದಲ್ಲಿದ್ದಾರೆ. ನೋಡಲು ಇದು ಗೋಡೆಗೆ ಅಂಟಿಕೊಂಡಿರುವ ಡ್ರೈ ಎರೇಸ್​ ಬೋರ್ಡ್​ನಂತೆ (Dry erase board) ಕಾಣುತ್ತದೆ. ಆದರೆ ಇದರ ಗೋಡೆಗಳು ಬುಲೆಟ್​ ಪ್ರೂಫ್​ನಿಂದ ನಿರ್ಮಿಸಲ್ಪಟ್ಟಿವೆ. ಹಿಡಿದೆಳೆದರೆ ಅರ್ಧ ನಿಮಿಷದಲ್ಲಿ ಬುಲೆಟ್​ ಪ್ರೂಫ್​ ಕೊಣೆಯಾಗಿ ಪರಿವರ್ತನೆಗೊಳ್ಳುತ್ತದೆ.

ಇದನ್ನೂ ಓದಿ : Viral: ತನ್ನ ಹುಟ್ಟುಹಬ್ಬಕ್ಕೆ ಪ್ರತೀ ಗ್ರಾಹಕರಿಗೂ ಚಾಕೋಲೇಟ್ ಕೊಟ್ಟ ಝೊಮ್ಯಾಟೋ ಉದ್ಯೋಗಿ

ಪರಿಸ್ಥಿತಿ ಇಲ್ಲಿಯ ತನಕ ಬಂದಿರುವುದು ಅತ್ಯಂತ ಖೇದನೀಯ ಎಂದು ಕೆಲವರು, ಒಂದು ಹಂತದಲ್ಲಿ ಕೆಲ ಜೀವಗಳನ್ನಾದರೂ ಇದು ಉಳಿಸುತ್ತದೆಯಲ್ಲ ಎಂದು ಇನ್ನೂ ಕೆಲವರು. ಇನ್ನೊಂದಿಷ್ಟು ಜನ ಡಿಸೈನ್​ನ ಲೋಪದೋಷಗಳನ್ನು ಗುರುತಿಸಿ ಸಲಹೆ ಸೂಚನೆ ನೀಡಿದ್ದಾರೆ. ಸುರಕ್ಷತೆಯ ಸಮಸ್ಯೆಗಳಿಂದಾಗಿ ಭವಿಷ್ಯದಲ್ಲಿ ಎಲ್ಲಾ ಶಾಲೆಗಳು ಆನ್​​ಲೈನ್ ಆದರೂ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಸಂಪ್ರದಾಯವನ್ನು ಸೀರೆಯುಟ್ಟೇ ಮುರಿದಿದ್ದಾರೆ ಈ ಪಂಚರತ್ನೆಯರು

ಯುದ್ಧ ವಲಯದಲ್ಲಿರುವ ಬಂಕರ್‌ ಗಳನ್ನು ಇನ್ನು ತರಗತಿಯಲ್ಲಿ ನೋಡಬೇಕಲ್ಲ, ಇದು ತುಂಬಾ ನೋವನ್ನುಂಟು ಮಾಡುತ್ತಿದೆ. ಮಕ್ಕಳು ಸಹಜವಾಗಿ ತಮ್ಮ ವಿದ್ಯಾರ್ಥಿ ಬದುಕನ್ನು ಆನಂದಿಸಲು ಸಾಧ್ಯವಾಗದು ಎಂದಿದ್ದಾರೆ ಮತ್ತೊಬ್ಬರು. ವೈಟ್‌ಬೋರ್ಡ್‌ಗಳನ್ನು ಹೋಲುವ ವಿಶೇಷ ವಿನ್ಯಾಸದಿಂದ ಕೂಡಿದ ಗೋಡೆಗಳು ರೈಫಲ್ ಬುಲೆಟ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಈ ಕೊಠಡಿಯ ಬೆಲೆ  ಸುಮಾರು 5ಮಿಲಿಯನ್​!

ದುಷ್ಟಶಕ್ತಿಗಳನ್ನು  ನಿಯಂತ್ರಿಸುವುದು ಸಾಧ್ಯವೇ ಇಲ್ಲವೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:55 pm, Fri, 30 June 23