
Selfie: ಟರ್ಮಿನಲ್ನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿರುವ ಈ ವಿಮಾನದ ರೆಕ್ಕೆಯ (Flight Wings) ಮೇಲೆ ಕ್ಯಾಬಿನ್ ಸಿಬ್ಬಂದಿ ಸ್ಟಂಟ್ ಮಾಡಿದೆ. ಈ ದೃಶ್ಯವನ್ನು ಪ್ರಯಾಣಿಕರು ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಸ್ವಿಸ್ ಇಂಟರ್ನ್ಯಾಶನಲ್ ಏರ್ ಲೈನ್ಸ್ನ ಈ ಇಬ್ಬರೂ ಸಿಬ್ಬಂದಿ ಬೋಯಿಂಗ್ 777 ವಿಮಾನದ ರೆಕ್ಕೆಯ ಮೇಲೆ ನರ್ತಿಸುತ್ತಾ ಫೋಟೋ ತೆಗೆಸಿಕೊಳ್ಳುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಮೊದಲು ಮಹಿಳಾ ಸಿಬ್ಬಂದಿಯನ್ನು ಕಾಣಬಹುದು ನಂತರ ಪುರುಷ ಸಿಬ್ಬಂದಿಯನ್ನು. ಈ ವಿಡಿಯೋ ನೋಡಿದ ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಆಡಳಿತವು ಕೋಪಗೊಂಡಿದೆ.
ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿ ಎರಡು ಅಂಕಿಗಳು ಅಡಗಿವೆ, ಗುರುತಿಸಬಲ್ಲಿರಾ?
ಈ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಯು ಇಂಥ ನಡೆವಳಿಕೆಯನ್ನು ಸಹಿಸುವುದಿಲ್ಲ ಎಂದು ಹೇಳಿಕೆಯನ್ನು ನೀಡಿದೆ. ವಿಡಿಯೋದಲ್ಲಿ ಅವರು ಮೋಜಿಗಾಗಿಯೇ ಮಾಡಿದ್ದರೂ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಸ್ವಿಸ್ ವಕ್ತಾರ ಮೈಕೆಲ್ ಹೇಳಿದ್ದಾರೆ.
ಬೋಯಿಂಗ್ 777 ವಿಮಾನದ ರೆಕ್ಕೆಗಳು ಸುಮಾರು ಐದು ಮೀ. (16.4 ಅಡಿ) ಎತ್ತರದಲ್ಲಿವೆ. ಆ ಎತ್ತರದಿಂದ ಅಕಸ್ಮಾತ್ ಅವರಿಬ್ಬರೂ ಆಯತಪ್ಪಿ ಬಿದ್ದರೆ ಜೀವಕ್ಕೆ ಅಪಾಯ. ಇದೇನು ಮೊದಲ ಸಲವಲ್ಲ, ಅನೇಕ ಕ್ಯಾಬಿನ್ ಸಿಬ್ಬಂದಿ ವಿಮಾನದ ಒಳಗೆ ವಿಮಾನದ ಹೊರಗೆಲ್ಲ ಹೀಗೆ ಸ್ಟಂಟ್ಗಳನ್ನು ವಿಡಿಯೋ ಮಾಡಲೆಂದೇ ಮಾಡುತ್ತದೆ ಎಂದಿದ್ದಾರೆ ಒಬ್ಬರು. ಅವರೂ ಮನುಷ್ಯರೇ ಅವರಿಗೂ ಏಕತಾನತೆಯಿಂದ ಬಿಡುವು ಬೇಕಿರುತ್ತದೆ, ಆದರೆ ಹೀಗೆ ಜೀವಕ್ಕೆ ಅಪಾಯ ತಂದುಕೊಳ್ಳುವುದು ಸಲ್ಲದು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಕೆಳಗೆ ಇಳೀ ಮಗು; ಅಡುಗೆಮನೆಯ ಕಟ್ಟೆ ಏರಿ ತಪಸ್ಸಿಗೆ ಕುಳಿತ ಮಾರ್ಜಾಲ
ವಿಮಾನದ ಒಳಗೆ ಏನಾದರೂ ಮಾಡಿಕೊಳ್ಳಲಿ ಆದರೆ ಹೊರಗೆ ಹೀಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ ಅನೇಕರು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:46 pm, Wed, 30 August 23