ಗುಲಾಬಿ ಬಣ್ಣದ ಜತೆ ವಿವಾಹವಾದ ಕ್ಯಾಲಿಫೋರ್ನಿಯಾದ ಮಹಿಳೆ; ಇದು ಯಾವ ರೀತಿಯ ಮದುವೆ ಎಂದು ಅಚ್ಚರಿಗೊಂಡ ನೆಟ್ಟಿಗರು

| Updated By: preethi shettigar

Updated on: Jan 09, 2022 | 1:16 PM

Viral News: ಮದುವೆಯ ವಿಚಾರದಲ್ಲಿ ಇದೀಗ ಮತ್ತೊಂದು ವಿಚಾರ ವೈರಲ್​ ಆಗಿದೆ. ಮಹಿಳೆಯೊಬ್ಬರು ಬಣ್ಣದ ಜತೆ ವಿವಾಹವಾಗಿದ್ದಾರೆ. ಅರೇ ಇದು ಹೇಗೆ ಸಾದ್ಯ ಎಂದು ಪ್ರಶ್ನಿಸುವವರಿಗೆ ಉತ್ತರ ಇಲ್ಲಿದೆ ನೋಡಿ.

ಗುಲಾಬಿ ಬಣ್ಣದ ಜತೆ ವಿವಾಹವಾದ ಕ್ಯಾಲಿಫೋರ್ನಿಯಾದ ಮಹಿಳೆ; ಇದು ಯಾವ ರೀತಿಯ ಮದುವೆ ಎಂದು ಅಚ್ಚರಿಗೊಂಡ ನೆಟ್ಟಿಗರು
ಸೆರಾ ವಿವಾಹ
Follow us on

ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದರಂತೆ ಗಂಡು -ಹೆಣ್ಣು ಒಬ್ಬರನ್ನು ಒಬ್ಬರು ಮೆಚ್ಚಿ ವಿವಾಹವಾಗುವುದು (Wedding) ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಇತ್ತೀಚೆಗೆ ಇದು ಬದಲಾಗಿದೆ. ಕೇವಲ ಗಂಡು-ಹೆಣ್ಣು ಮಾತ್ರವಲ್ಲ. ಹೆಣ್ಣು-ಹೆಣ್ಣು, ಗಂಡು- ಗಂಡು ವಿವಾಹವಾಗುತ್ತಾರೆ. ಸಲಿಂಗಿಗಳ ವಿವಾಹಕ್ಕೆ ಕಾನೂನಿನಲ್ಲಿ ಮುಕ್ತ ಅವಕಾಶ ಕೂಡ ನೀಡಿದ್ದಾರೆ. ಆದರೆ ಮದುವೆಯ ವಿಚಾರದಲ್ಲಿ ಇದೀಗ ಮತ್ತೊಂದು ವಿಚಾರ ವೈರಲ್ (Viral) ಆಗಿದೆ. ಮಹಿಳೆಯೊಬ್ಬರು (Colour) ಬಣ್ಣದ ಜತೆ ವಿವಾಹವಾಗಿದ್ದಾರೆ. ಅರೇ ಇದು ಹೇಗೆ ಸಾದ್ಯ ಎಂದು ಪ್ರಶ್ನಿಸುವವರಿಗೆ ಉತ್ತರ ಇಲ್ಲಿದೆ ನೋಡಿ.

ಕ್ಯಾಲಿಫೋರ್ನಿಯಾದ ಮಹಿಳೆ ಗುಲಾಬಿ ಬಣ್ಣದ ಬಗ್ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ ಹೊಂದಿದ್ದರು. ಗುಲಾಬಿ ಬಣ್ಣಕ್ಕೆ ಸದಾ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ತಿದ್ದರು. ಹೀಗಾಗಿ ಗುಲಾಬಿ ಬಣ್ಣದ ಮೇಲೆ ಎಲ್ಲಿಲ್ಲದ ಪ್ರೀತಿ ಹೊಂದಿದ್ದ ಮಹಿಳೆ. ಈ ಬಣ್ಣದ ಜೊತೆಗೆ ವಿವಾಹವಾಗಿದ್ದಾರೆ.

ಕಿಟನ್ ಕೇ ಸೆರಾ, ಜನವರಿ 1 ರಂದು ನಮ್ಮ ನೆಚ್ಚಿನ ಗುಲಾಬಿ ಬಣ್ಣದ ಜತೆಗೆ ಲಾಸ್ ವೇಗಾಸ್‌ನಲ್ಲಿ ವಿವಾಹವಾದರು. ತಮ್ಮ ವಿವಾಹದಲ್ಲಿ ಗುಲಾಬಿ ಬಣ್ಣದ ಗೌನ್, ಗುಲಾಬಿ ಬಣ್ಣದ ಕೋಟ್ ಮತ್ತು ಗುಲಾಬಿ ಕಿರೀಟವನ್ನು ಧರಿಸಿದ್ದರು. ಕೂದಲಿಗೆ ಕೂಡ ತಮ್ಮ ಇಷ್ಟವಾದ ಬಣ್ಣ ಗುಲಾಬಿಯನ್ನು ಹಾಕಿಕೊಂಡಿದ್ದರು. ಇಷ್ಟೇ ಅಲ್ಲದೇ ಕೇಕ್​ನಿಂದ ಹಿಡಿದು ಮದುವೆಯ ಅಲಂಕಾರವನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಲ್ಲೇ ಮಾಡಲಾಗಿತ್ತು.

ದಿ ಗಾರ್ಡಿಯನ್ ವರದಿಯ ಪ್ರಕಾರ, ಸೆರಾ 40 ವರ್ಷಗಳ ಕಾಲ ಈ ಬಣ್ಣದೊಂದಿಗೆ ಸಂಬಂಧದಲ್ಲಿದ್ದಾರೆ. ಈ ಹಿಂದೆ ಮಗುವೊಂದು ನೀವು ಏಕೆ ಇಷ್ಟು ಗುಲಾಬಿ ಬಣ್ಣವನ್ನು ಪ್ರೀತಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ  ಆಕೆ ಹೌದು ನನಗೆ ಗುಲಾಬಿ ಬಣ್ಣ ಎಂದರೆ ಮೊದಲಿನಿಂದಲೂ ಪ್ರೀತಿ. ಕಾರಣ ತಿಳಿದಿಲ್ಲ ಎಂದು ಉತ್ತರಿಸಿದ್ದಾಳೆ. ಕೊನೆಗೆ ಆ ಮಗು ನೀವು ಬಣ್ಣದೊಂದಿಗೆ ವಿವಾಹವಾಗಿ ಎಂದಿದ್ದು, ಅಂದೇ ಮಹಿಳೆ ಬಣ್ಣದೊಂದಿಗೆ ವಿವಾಹವಾಗುವ ಬಗ್ಗೆ ಯೋಚಿಸಿದ್ದಾರೆ.


ಸೆರಾ ಬಣ್ಣದೊಂದಿಗೆ ಮದುವೆಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಸೆರಾ ಮದುವೆಯ ಉಂಗುರವು ಗುಲಾಬಿ ಬಣ್ಣದ್ದಾಗಿತ್ತು ಮತ್ತು ಇದನ್ನು ಹ್ಯಾರಿ ವಿನ್ಸ್ಟನ್ ವಿನ್ಯಾಸಗೊಳಿಸಿದರು. ಸೆರಾ ಗುಲಾಬಿ ಬಣ್ಣದ ಕನ್ವರ್ಟಿಬಲ್ ಹಿಂಭಾಗದಲ್ಲಿ ಗುಲಾಬಿ ಬಣ್ಣದ ಪುಷ್ಪಗುಚ್ಛವನ್ನು ಹಿಡಿದುಕೊಂಡು ಮದುವೆಯ ಪ್ರತಿಜ್ಞೆ ಮಾಡಿದ್ದಾರೆ.

ಇದನ್ನೂ ಓದಿ:
Viral Video: ಬೆಂಕಿ ಮೇಲೆ ಪಾತ್ರೆಯಿಟ್ಟು ಅದರೊಳಗೇ ಕುಳಿತು ಸ್ನಾನ ಮಾಡಿದ ಬಾಲಕ

ಪರಸ್ಪರ ಪ್ರೀತಿಸಿ, ಹಿಂದೂ ಶಾಸ್ತ್ರದಂತೆ ಮದುವೆಯಾದ ಇಬ್ಬರು ಯುವತಿಯರು; ಸಲಿಂಗಿಗಳ ವಿವಾಹ ನೋಡಿ ಸ್ಥಳೀಯರು ಕಂಗಾಲು