Penis Plants: ಪುರುಷರ ಶಿಶ್ನದಂತಿರುವ ಗಿಡ ಕಿತ್ತ ಯುವತಿಯರ ವಿಡಿಯೋ ವೈರಲ್; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಕಾಂಬೋಡಿಯಾ ಸರ್ಕಾರ

| Updated By: ಸುಷ್ಮಾ ಚಕ್ರೆ

Updated on: May 20, 2022 | 6:37 PM

'ಶಿಶ್ನ ಸಸ್ಯ' (ಪೆನಿಸ್ ಪ್ಲಾಂಟ್) ಎಂದು ಕರೆಯಲ್ಪಡುವ ನೆಪೆಂಥಿಸ್ ಹೋಲ್ಡೆನಿಯು ಪಶ್ಚಿಮ ಕಾಂಬೋಡಿಯಾದ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

Penis Plants: ಪುರುಷರ ಶಿಶ್ನದಂತಿರುವ ಗಿಡ ಕಿತ್ತ ಯುವತಿಯರ ವಿಡಿಯೋ ವೈರಲ್; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಕಾಂಬೋಡಿಯಾ ಸರ್ಕಾರ
ಪೆನಿಸ್ ಪ್ಲಾಂಟ್
Follow us on

ಪುರುಷರ ಜನನಾಂಗ(ಶಿಶ್ನ) ಹೋಲುವ ಗಿಡವನ್ನು ಕೈಯಲ್ಲಿ ಹಿಡಿದು ಯುವತಿಯರು ವಿಡಿಯೋ, ಫೋಟೋ ತೆಗೆದುಕೊಳ್ಳುವುದು ಹೆಚ್ಚಾಗುತ್ತಿದ್ದಂತೆ ಕಾಂಬೋಡಿಯಾ ಸರ್ಕಾರ ಈ ಪೆನಿಸ್ ಪ್ಲಾಂಟ್ (ಶಿಶ್ನವನ್ನು ಹೋಲುವ ಗಿಡ) ಕೀಳದಂತೆ ಪ್ರವಾಸಿಗರಿಗೆ ಸೂಚನೆ ನೀಡಿದೆ. ಮೂವರು ಮಹಿಳೆಯರು ಪೆನಿಸ್ ಪ್ಲಾಂಟ್ (Penis Plants) ಕೀಳುತ್ತಿರುವ ವೀಡಿಯೊ ವೈರಲ್ ಆದ ನಂತರ ಕಾಂಬೋಡಿಯಾ ಸರ್ಕಾರವು (Cambodian government) ಸಾರ್ವಜನಿಕರಿಗೆ ಈ ಎಚ್ಚರಿಕೆ ನೀಡಿದೆ. ಪೆನಿಸ್ ಪ್ಲಾಂಟ್ ಅಳಿವಿನಂಚಿನಲ್ಲಿರುವ ಸಸ್ಯವಾಗಿದೆ. ಈ ರೀತಿ ಪ್ರವಾಸಿಗರು ಅದನ್ನು ಕೀಳುತ್ತಿದ್ದರೆ ಆ ಗಿಡಗಳು ಸತ್ತು ಹೋಗಿ, ಪ್ರಭೇದವೇ ನಾಶವಾಗುತ್ತದೆ ಎಂದು ಸರ್ಕಾರ ಹೇಳಿದೆ.

‘ಶಿಶ್ನ ಸಸ್ಯ’ (ಪೆನಿಸ್ ಪ್ಲಾಂಟ್) ಎಂದು ಕರೆಯಲ್ಪಡುವ ನೆಪೆಂಥಿಸ್ ಹೋಲ್ಡೆನಿಯು ಪಶ್ಚಿಮ ಕಾಂಬೋಡಿಯಾದ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಸ್ಯಗಳು ಮಾಂಸಾಹಾರಿ ಸಸ್ಯಗಳಾಗಿದ್ದು, ಕಡಿಮೆ ಪೌಷ್ಠಿಕಾಂಶದ ಮಣ್ಣಿನಲ್ಲಿ ಬದುಕುತ್ತವೆ. ಕೀಟಗಳನ್ನು ಆಕರ್ಷಿಸಲು ತಮ್ಮ ಮಕರಂದ ಮತ್ತು ಸಿಹಿ ಪರಿಮಳವನ್ನು ಬಳಸುತ್ತವೆ. ಕೀಟ ತನ್ನ ಸಮೀಪಕ್ಕೆ ಬಂದ ತಕ್ಷಣ ಅದನ್ನೇ ತನ್ನ ಆಹಾರವನ್ನಾಗಿ ಮಾಡಿಕೊಳ್ಳುವ ಈ ಗಿಡಗಳು ಇದೀಗ ಅಳಿವಿನಂಚಿನಲ್ಲಿವೆ.

ಪೆನಿಸ್ ಪ್ಲಾಂಟ್ ಕೀಳುತ್ತಿರುವ ಯುವತಿಯರು

ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಾಂಬೋಡಿಯಾ ದೇಶದ ಪರಿಸರ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಯುವತಿಯರು ಪೆನಿಸ್​ ಪ್ಲಾಂಟ್​ಗಳನ್ನು ಕೀಳುತ್ತಿರುವ ರೀತಿ ನೀವು ಕೂಡ ಮಾಡಬೇಡಿ! ನೈಸರ್ಗಿಕ ಸಂಪನ್ಮೂಲಗಳನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಆದರೆ, ಅವುಗಳನ್ನು ಕೀಳಬೇಡಿ. ಇದರಿಂದ ಅವು ಸಾಯುತ್ತವೆ ಎಂದು ಸರ್ಕಾರ ಸೂಚನೆ ನೀಡಿದೆ. (Source)

ಇದನ್ನೂ ಓದಿ
Viral News: ಲಾವೋಸ್​ ಗುಹೆಯಲ್ಲಿ 1,30,000 ವರ್ಷ ಹಳೆಯ ಮಗುವಿನ ಹಲ್ಲು ಪತ್ತೆ!
Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!
Viral Video: ಕೇದಾರನಾಥಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದು, ತಿಲಕವಿಟ್ಟ ಯಾತ್ರಿಕ; ಕೇಸ್ ದಾಖಲು

ಇದನ್ನೂ ಓದಿ: Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ

ಕಾಂಬೋಡಿಯಾದ ಕಾಂಪೋಟ್ ಪ್ರಾಂತ್ಯದ ಬೋಕೋರ್ ಪರ್ವತದಲ್ಲಿ ಮೂವರು ಮಹಿಳೆಯರು ಅಳಿವಿನಂಚಿನಲ್ಲಿರುವ ಪೆನಿಸ್​ ಪ್ಲಾಂಟ್​ನ ಹೂವುಗಳನ್ನು ಕೀಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ಈ ಅಪರೂಪದ ಸಸ್ಯಗಳ ಜೊತೆ ಸೆಲ್ಫೀ, ಫೋಟೋ ತೆಗೆದುಕೊಳ್ಳಲು ಈ ಸಸ್ಯಗಳನ್ನು ಕೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಂಬೋಡಿಯಾದ ಕಂಪೋಟ್ ಪ್ರಾಂತ್ಯದ ಬೋಕೋರ್ ಪರ್ವತದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ಪೆನಿಸ್ ಪ್ಲಾಂಟ್

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:34 pm, Fri, 20 May 22