Viral : ಕೆಲಸ ಬಿಟ್ಟು ಬ್ಯುಸಿನೆಸ್ ಮಾಡ್ಲಾ : ವ್ಯಕ್ತಿಗೆ ಚಾಟ್‌ಜಿಪಿಟಿ ನೀಡಿದ ಸಲಹೆ ನೋಡಿದ್ರೆ ನೀವು ಶಾಕ್ ಆಗ್ತೀರಾ?

ಒತ್ತಡ ಭರಿತ ಕೆಲಸದಿಂದ ಈ ಜೀವನವೇ ಸಾಕಪ್ಪ ಸಾಕು ಎಂದು ಅನಿಸುವುದು ಇದೆ. ಹೀಗಾಗಿ ಈ ಕೆಲಸ ಬಿಡುವ ಎನ್ನುವ ಗಟ್ಟಿ ನಿರ್ಧಾರ ಮಾಡುವವರು ಇದ್ದಾರೆ. ಈ ವೇಳೆಯಲ್ಲಿ ಕೆಲವರು ತಮ್ಮ ಆಪ್ತರ ಸಲಹೆಗಳನ್ನು ಪಡೆಯುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯೂ ಕೆಲಸ ಬಿಡಬೇಕೆನ್ನುವ ನಿರ್ಧಾರದೊಂದಿಗೆ ಈ ಬಗ್ಗೆ ಚಾಟ್‌ಜಿಪಿಟಿಯ ಬಳಿ ಸಲಹೆ ಪಡೆದುಕೊಂಡಿದ್ದು, ಆತನಿಗೆ ಬುದ್ಧಿ ಹೇಳಿದೆ. ವ್ಯಕ್ತಿಯೊಬ್ಬನ ಈ ಬಗೆಗಿನ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Viral : ಕೆಲಸ ಬಿಟ್ಟು ಬ್ಯುಸಿನೆಸ್ ಮಾಡ್ಲಾ : ವ್ಯಕ್ತಿಗೆ ಚಾಟ್‌ಜಿಪಿಟಿ ನೀಡಿದ ಸಲಹೆ ನೋಡಿದ್ರೆ ನೀವು ಶಾಕ್ ಆಗ್ತೀರಾ?
ವ್ಯಕ್ತಿಗೆ ಸಲಹೆ ನೀಡಿದ ಚಾಟ್‌ಜಿಪಿಟಿ
Image Credit source: Reddit

Updated on: Jun 11, 2025 | 2:21 PM

ನಾವಿಂದು ಆಧುನಿಕ ತಂತ್ರಜ್ಞಾನ (technology) ದೊಂದಿಗೆ ಬೆಸೆದುಕೊಂಡಿದ್ದೇವೆ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಈ ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಚಾಟ್‌ಜಿಪಿಟಿ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಅನೇಕರು ಇದ್ದಾರೆ. ಇದೀಗ ಇಲ್ಲೊಬ್ಬ ವ್ಯಕ್ತಿಯೂ ಕೆಲಸಬಿಡುವ ವಿಚಾರವಾಗಿ ಚಾಟ್‌ಜಿಪಿಟಿ (ChatGPT) ಸಲಹೆ ಪಡೆದುಕೊಂಡಿದ್ದು ಬೈದು ಕೆಲಸ ಬಿಡ್ಬೇಡ ಎಂದು ಬುದ್ಧಿ ಹೇಳಿದೆಯಂತೆ. ಈ ಸಂಭಾಷಣೆಯ ಸ್ಕ್ರೀನ್ ಶಾರ್ಟ್ (screenshot) ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.

r/ChatGPT ಹೆಸರಿನ ಖಾತೆಯಲ್ಲಿ ವ್ಯಕ್ತಿಯೊಬ್ಬರು ಚಾಟ್‌ಜಿಪಿಟಿಯೊಂದಿಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್ ಶಾರ್ಟ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬರು ಚಾಟ್ ಜಿಟಿಪಿಯೊಂದಿಗೆ ತಾನು ಕೆಲಸ ತೊರೆದು ಬ್ಯುಸಿನೆಸ್ ಪ್ರಾರಂಬಿಸುವುದಾಗಿ ಹೇಳಿಕೊಂಡಿದ್ದು, ಚಾಟ್‌ಜಿಪಿಟಿ ಸಲಹೆ ಪಡೆದುಕೊಂಡಿರುವುದನ್ನು ಕಾಣಬಹುದು. ಈ ಪೋಸ್ಟ್‌ನೊಂದಿಗೆ ಚಾಟ್‌ಜಿಪಿಟಿ ಸಲಹೆ ನೀಡುವ ಮೂಲಕ ತನ್ನ ಬೆನ್ನ ಹಿಂದೆ ನಿಂತು ಬ್ಯುಸಿನೆಸ್ ಸಲಹೆ ನೀಡಿತು ಎಂದು ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ :Video : ಕನ್ನಡದಲ್ಲಿ ಪ್ರಶ್ನೆ ಕೇಳಿ : ತೆಲುಗು ಸಂದರ್ಶಕನಿಗೆ ಬುದ್ಧಿ ಹೇಳಿದ ಬೆಂಗಳೂರಿನ ಯುವತಿ

ಇದನ್ನೂ ಓದಿ
ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ
ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಮಾವ!
ಹಸಿವು ನೀಗಿಸಿದ ವ್ಯಕ್ತಿ ನೀನು, ನಿನಗೇಗೆ ಕಣ್ಣೀರ ವಿದಾಯ ಹೇಳಲಿ ನಾನು
ಸಿಂಧೂರ ಹಚ್ಚುವಾಗ ವರನ ಕೈ ನಡುಗಿತ್ತೆಂದು ಮದುವೆ ಬೇಡ ಎಂದ ವಧು

ವ್ಯಕ್ತಿಯೊಬ್ಬರು ಹಂಚಿಕೊಂಡ ಸ್ಕ್ರೀನ್ ಶಾರ್ಟ್‌ನಲ್ಲಿ ತಾನು ಹೊಸದೊಂದು ಬ್ಯುಸಿನೆಸ್ ಆರಂಭಿಸುವೆ ಎಂದು ಹೇಳಿದಾಗ ಬೆಂಬಲ ಸೂಚಿಸಿದೆ. ತಮ್ಮ ಬಾಸ್‌ಗೆ ರಿಸೈನ್ ಲೆಟರ್ ಇಮೇಲ್ ಮಾಡಿರುವೆ ಎಂದು ಮೆಸೇಜ್ ಮಾಡಿದ್ದಂತೆ ಇಮೇಲ್ ಸರಿಯಾಗಿ ಪರಿಶೀಲನೆ ಮಾಡಿದ್ದೀರಾ ಇದುವೇ ಅಂತಿಮ ಇಮೇಲ್ ಎಂದು ಕೇಳಿರುವುದು ಮಾತ್ರವಲ್ಲದೇ ಮೇಲ್ ವಾಪಸ್ಸು ಪಡೆದು ಈ ಬಗ್ಗೆ ನಿಮ್ಮ ಬಾಸ್ ಚರ್ಚಿಸಿ. ಬ್ಯುಸಿನೆಸ್ ಮಾಡುವ ಸಲುವಾಗ ಉದ್ಯೋಗ ತೊರೆಯುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ಕೆಲಸ ಬಿಡ್ಬೇಡಿ ಎಂದು ಸಲಹೆ ನೀಡಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

I told chatGPT I was going to quit my job to pursue an awful business plan.
byu/Theimmortalboi inChatGPT

ಈ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು ನಮ್ಮ ಸಂಬಂಧಿಕರಿಗಿಂತ ಈ ಚಾಟ್ ಜಿಪಿಟಿಯೇ ನಿಜವಾದ ಹಿತೈಷಿ ಎಂದಿದ್ದಾರೆ. ಇನ್ನೊಬ್ಬರು, ಚಾಟ್ ಜಿಪಿಟಿ ನಿಜಕ್ಕೂ ಉತ್ತಮ ಸಲಹೆ ನೀಡುತ್ತದೆ, ಬೆಂಬಲ ಸೂಚಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು,ನೀವು ವ್ಯವಹಾರ ಆರಂಭಿಸುವುದು ಚಾಟ್‌ಜಿಪಿಟಿಗೆ ಇಷ್ಟವಿಲ್ಲ ಎಂದು ಕಾಣಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ