ನಿರ್ಜಲ ಏಕಾದಶಿ ದಿನ ಬೀದಿಗಳಲ್ಲಿ ಬಿಯರ್ ವಿತರಿಸಿದ ಯೂಟ್ಯೂಬರ್!
ನಿರ್ಜಲ ಏಕಾದಶಿಯ ದಿನದಂದು ಜೈಪುರದ ಬೀದಿಗಳಲ್ಲಿ ಕೆಲವು ಯುವಕರು ಬಿಯರ್ ವಿತರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಕಂಡುಬಂದಿದೆ. ಹೀಗಾಗಿ, ಈ ವೀಡಿಯೊವನ್ನು ಮಾಡಿ ವೈರಲ್ ಮಾಡಿದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಯೂಟ್ಯೂಬರ್ ಕೂಡ ಸೇರಿದ್ದಾನೆ.

ಜೈಪುರ, ಜೂನ್ 11: ಯೂಟ್ಯೂಬರ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ಫಾಲೋವರ್ಗಳನ್ನು ಹೆಚ್ಚಿಸಲು ಏಕಾದಶಿ ದಿನ ಬಿಯರ್ ಬಾಟಲಿಗಳನ್ನು ಹಂಚಿದ್ದಾನೆ. ಜೈಪುರದ (Jaipur) ಯೂಟ್ಯೂಬರ್ ನಿರ್ಜಲ ಏಕಾದಶಿಯಂದು ಬಿಯರ್ ವಿತರಿಸಿ ಅದರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಯೂಟ್ಯೂಬರ್ ಲಪ್ಪು ಸಚಿನ್ ಅಲಿಯಾಸ್ ಸಚಿನ್ ಸಿಂಗ್ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನಿರ್ಜಲ ಏಕಾದಶಿಯ ದಿನದಂದು ಜೈಪುರದ ಬೀದಿಗಳಲ್ಲಿ ಕೆಲವು ಯುವಕರು ಬಿಯರ್ ವಿತರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಪೊಲೀಸ್ ಆಯುಕ್ತ (ದಕ್ಷಿಣ) ದಿಗಂತ್ ಆನಂದ್ ಹೇಳಿದ್ದಾರೆ. ಈ ವೀಡಿಯೊ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಕಂಡುಬಂದಿದೆ. ಈ ವೀಡಿಯೊವನ್ನು ನಿರ್ಮಿಸಿ ಅದನ್ನು ವೈರಲ್ ಮಾಡಿದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸಿಂಧೂರ ಹಚ್ಚುವಾಗ ನಡುಗಿತು ವರನ ಕೈ, ಈ ಮದುವೆ ಬೇಡ ಎಂದು ಹಠ ಹಿಡಿದು ಕುಳಿತ ವಧು
ಸಚಿನ್ ಸಿಂಗ್ ಅವರು ಲಪ್ಪು ಸಚಿನ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, 1.9 ಮಿಲಿಯನ್ ಫಾಲೋವರ್‌ಗಳು ಮತ್ತು ಯೂಟ್ಯೂಬ್‌ನಲ್ಲಿ 6. 99 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅವರು ಮತ್ತು ಇತರ 6 ಜನರು ನಿರ್ಜಲ ಏಕಾದಶಿಯಂದು ಆಟೋ ರಿಕ್ಷಾ ಚಾಲಕರು, ಪ್ರಯಾಣಿಕರು ಮತ್ತು ದಾರಿಯಲ್ಲಿ ಹೋಗುವವರಿಗೆ ಉಚಿತ ಬಿಯರ್ ವಿತರಿಸಿದರು. ಈ ದಿನದಂದು ಹಿಂದೂಗಳು ನೀರು ಮಾತ್ರ ಕುಡಿದು, ಉಪವಾಸವನ್ನು ಆಚರಿಸುತ್ತಾರೆ. ಬಿಸಿಲಿನಲ್ಲಿ ಬೀದಿಗಳಲ್ಲಿ ಸಂಚರಿಸುವ ಜನರಿಗೆ ನೀರು, ಹಣ್ಣಿನ ಜ್ಯೂಸ್, ಮಜ್ಜಿಗೆ ಮತ್ತು ಇತರ ವಸ್ತುಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಮಾವ!
ಆರೋಪಿಗಳು ಜನರಿಗೆ ಬಿಯರ್ ಬಾಟಲಿ ನೀಡುವ ವೀಡಿಯೊವನ್ನು ಮಾಡಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಂತೆ, ಪೊಲೀಸರು ಕ್ರಮ ಕೈಗೊಂಡು ಅವರನ್ನು ಬಂಧಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Wed, 11 June 25