Viral: ಸ್ಕೂಟಿಯಲ್ಲಿ ಬಂದು ಅಂಗಡಿಯ ಹೊರಗೆ ಇಟ್ಟಿದ್ದ ಗಿಡ ಕದ್ದೊಯ್ದ ಕಿಲಾಡಿ ಲೇಡಿಸ್; ವಿಡಿಯೋ ವೈರಲ್
ಕೆಲ ಸಮಯಗಳ ಹಿಂದೆ ಬಿಎಂಡ್ಲ್ಯೂ ಕಾರ್‌ನಲ್ಲಿ ಬಂದ ಮಹಿಳೆಯೊಬ್ಬಳು ಅಂಗಡಿಯ ಹೊರಗಿದ್ದ ಹೂವಿನ ಗಿಡವನ್ನು ಕದ್ದೊಯ್ದ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ರಾತ್ರಿಯ ವೇಳೆ ಸ್ಕೂಟಿಯಲ್ಲಿ ಬಂದಂತಹ ಯುವತಿಯರಿಬ್ಬರು ಅಂಗಡಿಯ ಹೊರಗೆ ಪಾಟ್‌ನಲ್ಲಿ ಇಟ್ಟಿದ್ದಂತಹ ದೊಡ್ಡ ಗಿಡವನ್ನೇ ಕದ್ದೊಯ್ದಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಚಿತ್ರ ಕಳ್ಳತನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚಿನ್ನಾಭರಣ ಕದಿಯುವವರು, ಹಣ ಕದ್ದು ಪರಾರಿಯಾಗುವವರು ಅಷ್ಟೇ ಯಾಕೆ ಮನೆಯ ಹೊರಗೆ ನಿಲ್ಲಿಸಿದ ವಾಹನಗಳನ್ನೇ ಕದ್ದು ಪರಾರಿಯಾಗುವ ಖತರ್ನಾಕ್ ಕಳ್ಳರ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಯುವತಿಯರಿಬ್ಬರು ಅಂಗಡಿಯ ಹೊರಗಿಟ್ಟಿದ್ದ ಗಿಡವನ್ನು ಕದ್ದೊಯ್ದಿದ್ದಾರೆ. ಹೌದು ರಾತ್ರಿ ಹೊತ್ತು ಸ್ಕೂಟಿಯಲ್ಲಿ ಬಂದಂತಹ ಈ ಇಬ್ಬರು ಯುವತಿಯರು ಅಂಗಡಿಯ ಹೊರಗೆ ಪಾಟ್‌ನಲ್ಲಿ ಇಟ್ಟಿದ್ದಂತಹ ದೊಡ್ಡ ಗಿಡವನ್ನೇ ಕದ್ದೊಯ್ದಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಿಚಿತ್ರ ಕಳ್ಳತನದ ದೃಶ್ಯವನ್ನು ಕಂಡು ಗಿಡವನ್ನೂ ಕದಿಯುವವರಿದ್ದಾರಾ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಈ ಘಟನೆ ಛತ್ತೀಚ್‌ಗಢದ ರಾಯಪುರದಲ್ಲಿ ನಡೆದಿದ್ದು, ಸ್ಕೂಟಿಯಲ್ಲಿ ಬಂದಂತಹ ಯುವತಿಯರಿಬ್ಬರು ಹೂವಿನ ಗಿಡವನ್ನು ಕದ್ದೊಯ್ದಿದ್ದಾರೆ. ಖತರ್ನಾಕ್ ಪ್ಲಾನ್ ಮಾಡಿ ರಾತ್ರಿ ಯಾರು ಇಲ್ಲದ ವೇಳೆ ಸ್ಕೂಟಿಯಲ್ಲಿ ಬಂದಂತಹ ಈ ಇಬ್ಬರು ಮಹಿಳೆಯರು ಅಂಗಡಿಯ ಹೊರಗೆ ಪಾಟ್‌ನಲ್ಲಿ ಇಟ್ಟಿದ್ದಂತಹ ದೊಡ್ಡ ಗಿಡವನ್ನೇ ಎಗರಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
aao_chhattisgarh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರಾತ್ರಿ ವೇಳೆ ಅಂಗಡಿಯ ಬಳಿ ಬಂದಂತಹ ಯುವತಿಯರಿಬ್ಬರು ಅಲ್ಲಿದ್ದ ಗಿಡವನ್ನು ಕದಿಯುವಂತಹ ದೃಶ್ಯವನ್ನು ಕಾಣಬಹುದು. ಇನ್ನೊಂದು ತಮಾಷೆಯ ವಿಷಯ ಏನಂದ್ರೆ ಹೀಗೆ ಕದ್ದ ಗಿಡವನ್ನು ಸ್ಕೂಟಿಯಲ್ಲಿ ಸಾಗಿಸುವ ವೇಳೆ ಅವರಿಬ್ಬರು ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ಈ ದೃಶ್ಯವನ್ನು ಕಂಡು ಬಹುಶಃ ಇದು ಸ್ಕ್ರಿಪ್ಟೆಡ್ ವಿಡಿಯೋ ಆಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ ಮರವಿಲ್ಲದಿರುವ ಮನೆಯನ್ನು ಕಂಡು ಹಿಡಿಯಬಲ್ಲಿರಾ?
ಅಕ್ಟೋಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ನಾಚಿಕೆಗೇಡಿನ ಕೆಲಸ ಮಾಡುವ ಅವಶ್ಯಕತೆಯಿತ್ತೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್ ವಿಡಿಯೋʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ