Video: ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ

ಈಗಿನ ಕಾಲದ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಕೊಡಿಸುತ್ತಿರುವ ಪೋಷಕರು ಮಕ್ಕಳಿಗೆ ಬೇಕಾದ ಜೀವನ ಪಾಠ ಹಾಗೂ ಬದುಕಿಗೆ ಬೇಕಾದ ಅಗತ್ಯ ವಿಚಾರಗಳನ್ನು ಕಲಿಸಿಕೊಡುವಲ್ಲಿ ಸೋಲುತ್ತಿದ್ದಾರೆ. ಆದರೆ ಚೀನಾದ ಈ ಕಿಂಡರ್ ಗಾರ್ಡ್‌ನ್‌ನಲ್ಲಿರುವ ಪುಟಾಣಿ ಮಕ್ಕಳು ಮಾಡುವ ಕೆಲಸ ಕಾರ್ಯಗಳನ್ನು ನೋಡಿದ್ರೆ ನೀವು ಶಾಕ್ ಆಗ್ತೀರಾ. ಹೌದು, ಈ ಮಕ್ಕಳಿಗೆ ಇಲ್ಲಿ ಏನೆಲ್ಲಾ ಕಲಿಸ್ತಾರೆ ಗೊತ್ತಾ? ಈ ಕುರಿತಾದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

Video: ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ
ವೈರಲ್‌ ವಿಡಿಯೋ
Image Credit source: Instagram

Updated on: Jul 27, 2025 | 4:34 PM

ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಏನು ಕಲಿಸುತ್ತೇವೆ, ಹೇಗೆ ಬೆಳೆಸುತ್ತೇವೆ ಎನ್ನುವುದು ಬಹಳ ಮುಖ್ಯ. ಮನೆಯಿರಲಿ ಹಾಗೂ ಶಾಲೆಯಿರಲಿ ಹೆತ್ತವರು, ಶಿಕ್ಷಕರು ಜೀವನ ಮೌಲ್ಯಗಳನ್ನು ಹೇಳಿಕೊಡಬೇಕು. ಆದರೆ ಈಗಿನ ಶಿಕ್ಷಣದ (education) ರೀತಿ ಆಗಿಲ್ಲ, ಆಟ ಪಾಠ ಮಾತ್ರ ಆಗಿದೆ. ಆದರೆ ಚೀನಾದ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಜೀವನಪಾಠ ಹೇಳಿ ಕೊಡಲಾಗುತ್ತದೆ. ಈ ಕಿಂಡರ್ ಗಾರ್ಡನ್‌ನಲ್ಲಿ (kinder garden) ಮಕ್ಕಳಿಗೆ ವಿವಿಧ ರೀತಿಯ ಕೆಲಸವನ್ನು ಹೇಳಿಕೊಡಲಾಗುತ್ತದೆ. ಈ ಪುಟಾಣಿ ಮಕ್ಕಳು ಜೊತೆಯಾಗಿ ಕೆಲಸವನ್ನು ಮಾಡುತ್ತಿದ್ದು, ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

molly-teacher ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಗಳು ಜೀವನಕ್ಕೆ ಬೇಕಾದ ಅಗತ್ಯ ಪಾಠಗಳನ್ನು ಕಲಿಸಿಕೊಡುತ್ತಿದ್ದು, ಈ ವಿಡಿಯೋಗೆ ನಮ್ಮ ಚೀನೀ ಕಿಂಡರ್‌ಗಾರ್ಡನ್ ನಲ್ಲಿ, ಮಕ್ಕಳು ಅಡುಗೆ ಮಾಡುವುದು, ಸ್ವಚ್ಛತೆ ಕಡೆಗೆ ಗಮನ ಕೊಡುವುದು ಮತ್ತು ತಮ್ಮನ್ನು ತಾವು ನೋಡಿಕೊಳ್ಳುವುದು ಹೇಗೆ ಎಂಬುದನ್ನು ಎಷ್ಟು ಸೊಗಸಾಗಿ ಕಲಿಯುತ್ತಿದ್ದಾರೆ. ಒಂದೊಂದೇ ಸಣ್ಣ ಹೆಜ್ಜೆಗಳು. ಈ ದೃಶ್ಯವು ಕೇವಲ ನೋಡುವುದಕ್ಕೆ ಮುದ್ದಾಗಿ ಮಾತ್ರವಿಲ್ಲ, ಇದು ಜೀವನಕ್ಕಾಗಿ ಆತ್ಮವಿಶ್ವಾಸ, ಜವಾಬ್ದಾರಿ ಮತ್ತು ಸ್ವಾತಂತ್ರ್ಯವಾಗಿ ಬದುಕುವುದನ್ನು ಹೇಳಿ ಕೊಡುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿ ಮಕ್ಕಳು ಬಟ್ಟೆ ಹೊಲಿಯುವುದು, ತರಕಾರಿ ಕತ್ತರಿಸುವುದು, ತರಕಾರಿ ಬೆಳೆಯಲು ನೆಲವನ್ನು ಹದಗೊಳಿಸುವುದು, ಗಿಡಗಳಿಗೆ ನೀರು ಹಾಕುವುದು ಹಿಟ್ಟು ಕಲಸಿ ಚಪಾತಿ ಮಾಡುವುದು ಹೀಗೆ ಜೀವನಕ್ಕೆ ಬೇಕಾದ ಅಗತ್ಯ ಕೆಲಸಗಳನ್ನು ಕಲಿಯುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ
CISF ಸಿಬ್ಬಂದಿಯ ಮುಖದಲ್ಲಿ ನಿಶ್ಕಲ್ಮಶ ನಗು ತಂದ ಯುವಕ
ಮಾಲೀಕರ ಮೇಲೆ ಈ ಮೂಕ ಪ್ರಾಣಿಗಳಿಗೆ ಅದೆಷ್ಟು ಪ್ರೀತಿ ನೋಡಿ
ಡಾಲರ್‌ಗಿಂದ ಭಾರತೀಯ ರೂಪಾಯಿ ಉತ್ತಮವೇ?
ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್​​​ ಕುಡಿದು ವ್ಯಕ್ತಿ ಸಾವು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಪ್ರವಾಸಿ ತಾಣದಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸಿದ ವಿದೇಶಿಗ

ಈ ವಿಡಿಯೋ ಈವೆರೆಗೆ 2.7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈ ಮಕ್ಕಳ ಒಳ್ಳೆಯ ನಡವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಇದು ನಿಜವಾದ ಶಿಕ್ಷಣ ಎಂದಿದ್ದಾರೆ. ಇನೊಬ್ಬರು ಕಾಮೆಂಟ್ ಮಾಡಿದ್ದು, ಚೀನಾದಲ್ಲಿ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ಕಲಿಸಿಕೊಡುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಯೊಬ್ಬ ಮಕ್ಕಳಿಗೆ ಈ ರೀತಿ ಬದುಕಿಗೆ ಅಗತ್ಯವಿರುವ ಶಿಕ್ಷಣ ನೀಡುವ ಶಾಲೆಗಳು ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ