Jiang Chenglan: ಒಂದೇ ದಿನದಲ್ಲಿ 1 ಕೋಟಿ ಫಾಲೋವರ್ಸ್;ಸೋಷಿಯಲ್ ಮೀಡಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಚೀನಾ ಸುಂದರಿ!

ಚೀನೀ ಬ್ಯೂಟಿ ಇನ್ಫ್ಲುಯೆನ್ಸರ್ ಜಿಯಾಂಗ್ ಚೆಂಗ್ಲಾನ್ 3 ವರ್ಷಗಳ ನಂತರ ಮತ್ತೆ ಸೋಷಿಯಲ್ ಮೀಡಿಯಾಗೆ ಕಂಬ್ಯಾಕ್ ಮಾಡಿದ್ದು, ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ. ಕೇವಲ 24 ಗಂಟೆಗಳಲ್ಲಿ 1 ಕೋಟಿ ಹೊಸ ಫಾಲೋವರ್ಸ್ ಪಡೆದು ಜಗತ್ತನ್ನೇ ಅಚ್ಚರಿಗೊಳಿಸಿದ್ದಾಳೆ. ಹಳೆಯ ಏಜೆನ್ಸಿ ಜೊತೆಗಿನ ಕಾನೂನು ಹೋರಾಟವೇ ತಮ್ಮ ನಾಪತ್ತೆಗೆ ಕಾರಣವೆಂದು ಬಹಿರಂಗಪಡಿಸಿರುವ ಜಿಯಾಂಗ್, ಈಗ ಮತ್ತೆ ಕಾಸ್ಮೆಟಿಕ್ ಬ್ರ್ಯಾಂಡ್‌ಗಳ ಗಮನ ಸೆಳೆದಿದ್ದಾಳೆ.

Jiang Chenglan: ಒಂದೇ ದಿನದಲ್ಲಿ 1 ಕೋಟಿ ಫಾಲೋವರ್ಸ್;ಸೋಷಿಯಲ್ ಮೀಡಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಚೀನಾ ಸುಂದರಿ!
ಒಂದೇ ದಿನದಲ್ಲಿ 1 ಕೋಟಿ ಫಾಲೋವರ್ಸ್
Image Credit source: Ai generated

Updated on: May 23, 2026 | 11:55 AM

ಬೀಜಿಂಗ್, ಮೇ 23: ಇಂಟರ್ನೆಟ್ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಅಸಾಧ್ಯವಾದ ಪವಾಡಗಳು ನಡೆದುಬಿಡುತ್ತವೆ. ಸದ್ಯ ಚೀನಾದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾಳೆ. ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ಸೋಶಿಯಲ್​ ಮೀಡಿಯಾಗೆ ಮರಳಿದ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 1 ಕೋಟಿ (10 Million) ಹೊಸ ಫಾಲೋವರ್ಸ್ ಪಡೆಯುವ ಮೂಲಕ ಈಕೆ ಹೊಸ ಇತಿಹಾಸ ಬರೆದಿದ್ದಾಳೆ. ಚೀನಾದಲ್ಲಿ ಅತ್ಯಂತ ಜನಪ್ರಿಯ ಬ್ಯೂಟಿ ಇನ್ಫ್ಲುಯೆನ್ಸರ್ ಆಗಿರುವ ಜಿಯಾಂಗ್ ಚೆಂಗ್ಲಾನ್ (Jiang Chenglan) ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿ ಹರಿದಾಡುತ್ತಿದೆ.

3 ವರ್ಷಗಳ ಬಳಿಕ ಕಂಬ್ಯಾಕ್:

ಚೀನಾದ ಟಿಕ್‌ಟಾಕ್ ಆವೃತ್ತಿಯಾದ ‘ಡೋಯಿನ್’ (Douyin) ಪ್ಲಾಟ್‌ಫಾರ್ಮ್‌ನಲ್ಲಿ ಜಿಯಾಂಗ್ ಚೆಂಗ್ಲಾನ್ 2023 ರವರೆಗೆ 3 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ಯಾವುದೇ ಅಪ್‌ಡೇಟ್ ನೀಡದೆ ಸೋಷಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ನಾಪತ್ತೆಯಾಗಿದ್ದಳು. ಇದು ಆಕೆಯ ಅಭಿಮಾನಿಗಳಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಮೂಡಿಸಿತ್ತು.ಇತ್ತೀಚೆಗೆ ಮೇ 13 ರಂದು ಜಿಯಾಂಗ್ ತಮ್ಮ ನಿಜವಾದ ಹೆಸರಿನಲ್ಲಿ ಹೊಸ ಖಾತೆ ತೆರೆಯುವ ಮೂಲಕ ಭರ್ಜರಿ ಕಂಬ್ಯಾಕ್ (Comeback) ಮಾಡಿದ್ದಾಳೆ. ತಾನು ನಾಪತ್ತೆಯಾಗಲು ತಮ್ಮ ಹಳೆಯ ಪ್ರೊಡಕ್ಷನ್ ಏಜೆನ್ಸಿಯೊಂದಿಗೆ ನಡೆದ ಕಾನೂನು ಹೋರಾಟ ಮತ್ತು ವಿವಾದವೇ ಕಾರಣ ಎಂದು ಆಕೆ ಭಾವುಕರಾಗಿ ವೀಡಿಯೋದಲ್ಲಿ ಬಹಿರಂಗಪಡಿಸಿದ್ದಾಳೆ.
“ನನ್ನ ಹಳೆಯ ಸೋಷಿಯಲ್ ಮೀಡಿಯಾ ಖಾತೆ ಮತ್ತು ಆನ್‌ಲೈನ್ ಶಾಪ್‌ಗಳನ್ನು ಏಜೆನ್ಸಿಯೇ ತನ್ನ ಹೆಸರಿಗೆ ಟ್ರೇಡ್‌ಮಾರ್ಕ್ ಮಾಡಿಕೊಂಡಿದೆ. ದಯವಿಟ್ಟು ನನ್ನ ಹಳೆಯ ಹೆಸರನ್ನು ನಂಬಿ ಯಾರೂ ಆ ಶಾಪ್‌ಗಳಲ್ಲಿ ವಸ್ತುಗಳನ್ನು ಖರೀದಿಸಬೇಡಿ” ಎಂದು ಜಿಯಾಂಗ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾಳೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಹೊಸ ವೀಡಿಯೋಗೆ ಹರಿದುಬಂದ ಲೈಕ್ಸ್ ಮಹಾಪೂರ:

ಜಿಯಾಂಗ್ ಮರಳಿ ಬರುತ್ತಿದ್ದಂತೆ ಆಕೆಯ ಮೊದಲ ಮೇಕಪ್ ಟ್ಯುಟೋರಿಯಲ್ ವೀಡಿಯೋ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ. ಕೇವಲ ಒಂದೇ ದಿನದಲ್ಲಿ 10 ಮಿಲಿಯನ್ ಜನರು ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದು, ಆಕೆಯ ವೀಡಿಯೋಗೆ ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದುಬಂದಿವೆ. ಚೀನಾದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಕಾಸ್ಮೆಟಿಕ್ ಬ್ರ್ಯಾಂಡ್‌ಗಳು ಕೂಡ ಆಕೆಯ ಕಂಬ್ಯಾಕ್ ಅನ್ನು ಸಂಭ್ರಮಿಸಿದ್ದು, ಆಕೆಯ ಜೊತೆ ಕೆಲಸ ಮಾಡಲು ಸಾಲುಗಟ್ಟಿ ನಿಂತಿವೆ ಎಂದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:48 am, Sat, 23 May 26

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us