Viral Video: ಇಷ್ಟು ಮುದ್ದಾಗಿರುವ ಕ್ರಿಸ್ಮಸ್ ಟ್ರೀ ನೀವು ಎಲ್ಲೂ ನೋಡಿರಲ್ಲ!

ಸಾಮಾಜಿಕ ಮಾಧ್ಯಮದಲ್ಲಿ ನಾಯಿಗಳನ್ನು ಕ್ರಿಸ್ಮಸ್ ಟ್ರೀಯಾಗಿ ಅಲಂಕರಿಸಿದ ವೀಡಿಯೊ ವೈರಲ್ ಆಗಿದೆ. ಕೆಲವರು ಇದನ್ನು ಮುದ್ದಾದ ವಿಡಿಯೋ ಎಂದು ಹೊಗಳಿದರೆ, ಇನ್ನು ಕೆಲವರು ಪ್ರಾಣಿಗಳನ್ನು ಈ ರೀತಿ ಬಳಸುವುದನ್ನು ಖಂಡಿಸಿದ್ದಾರೆ. @pachacriollita ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸದ್ಯ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.

Viral Video: ಇಷ್ಟು ಮುದ್ದಾಗಿರುವ ಕ್ರಿಸ್ಮಸ್ ಟ್ರೀ ನೀವು ಎಲ್ಲೂ ನೋಡಿರಲ್ಲ!
Christmas Dog Tree Video Goes ViralImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on:Dec 21, 2024 | 3:42 PM

ಪ್ರಪಂಚದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ, ಜನರು ಚರ್ಚ್‌ನಲ್ಲಿ ಒಟ್ಟುಗೂಡಿ, ಪ್ರಾರ್ಥನೆಗಳನ್ನು ಹಾಡುವ ಮೂಲಕ ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುತ್ತಾರೆ. ಅಲ್ಲದೆ, ಈ ದಿನದಂದು, ಮನೆಗಳಲ್ಲಿರುವ ಕ್ರಿಸ್‌ಮಸ್ ಟ್ರೀಯನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ನೀವು ಸಾಕಷ್ಟು ಬಗೆ ಬಗೆಯ ಕ್ರಿಸ್ಮಸ್ ಟ್ರೀ ಗಳನ್ನು ನೋಡಿರುತ್ತೀರಿ. ಈ ಮರವನ್ನು ಚಾಕ್ಲೆಟ್ಸ್, ಚಿಕ್ಕ ಚಿಕ್ಕ ಗಿಫ್ಟ್ಸ್, ಹೊಳೆಯುತ್ತಿರುವ ನಕ್ಷತ್ರಗಳು ಹಾಗೂ ಬಣ್ಣ ಬಣ್ಣದ ದೀಪಗಳ ಮೂಲಕ ಅಲಂಕರಿಸಲಾಗುತ್ತೆ. ಆದರೆ ಇದೀಗ ವಿಭಿನ್ನವಾದ ಮುದ್ದಾದ ಕ್ರಿಸ್ಮಸ್ ಟ್ರೀಗಳ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ಶ್ವಾನ ಪ್ರಿಯರಿಗೆ ಈ ಕ್ರಿಸ್ಮಸ್ ಟ್ರೀ ಇಷ್ಟವಾಗುವುದಂತೂ ಖಂಡಿತಾ. ಮುದ್ದಾದ ಶ್ವಾನಗಳನ್ನು ಕ್ರಿಸ್ಮಸ್ ಟ್ರೀಯಂತೆ ಅಲಂಕರಿಸಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. pachacriollita ಎಂಬ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಈಗಾಗಲೇ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ಓದಿ:ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್​​​ನ ಸ್ವಾಗತಿಸಿದ ಉದ್ಯೋಗಿಗಳು; ವಿಲಕ್ಷಣ ವಿಡಿಯೋ ವೈರಲ್‌

ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಜನರು ವಿಡಿಯೋ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು “ನಾಯಿಗಳು ಆಟಿಕೆಗಳಲ್ಲ,ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆಯಲು ಪ್ರಾಣಿಗಳನ್ನು ಈ ರೀತಿ ಬಳಸಬೇಡಿ” ಎಂದು ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:29 pm, Sat, 21 December 24

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?