ದೇಶದ ಒಂದು ಕಡೆಯಲ್ಲಿ ಕೋಮುವಾದ, ಧರ್ಮದ ವಿಚಾರವಾಗಿ ದಂಗೆ ನಡೆಯುತ್ತಿರುವ ಸಮಯದಲ್ಲಿ, ಉತ್ತರ ಪ್ರದೇಶದ ಮುಸ್ಲಿಂ ಯುವಕನೊಬ್ಬ ತನ್ನ ಎದೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾನೆ. ಇದೀಗ ಈ ಫೋಟೋ ಎಲ್ಲ ಕಡೆ ಸಖತ್ ವೈರಲ್ ಆಗುತ್ತಿದೆ. ಯಮೀನ್ ಸಿದ್ದಿಕಿ ಎಂಬ 23 ವರ್ಷದ ಮುಸ್ಲಿಂ ಯುವಕ ತನ್ನ ಎದೆಯ ಮೇಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಯೋಗಿ ತನ್ನ ರೋಲ್ ಮಾಡೆಲ್ ಎಂದು ಹೇಳಿಕೊಂಡಿದ್ದಾನೆ. ಯೋಗಿ ಹುಟ್ಟುಹಬ್ಬದಂದು ಈ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಉಡುಗೊರೆಯನ್ನು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಸಿದ್ದಿಕಿ ಫರೂಕಾಬಾದ್ ಮತ್ತು ಮೈನ್‌ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಇತನು ಪಾದರಕ್ಷೆಗಳ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇತ ಈ ಹಚ್ಚೆಯನ್ನು ಹಾಕಿಕೊಂಡ ನಂತರ ಅನೇಕ ಅವಮಾನಗಳನ್ನು ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಕಷ್ಟು ಮಾತುಗಳನ್ನು ಕೇಳಿದ್ದೇನೆ, ಆದರೆ ನನಗೆ ಆ ಮಾತುಗಳು ಯಾವುದು ನೋವು ಉಂಟು ಮಾಡಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಗುವಾಹಟಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ; ನಾಲ್ವರು ಕಾರ್ಮಿಕರು ಜೀವಂತ ಸಮಾಧಿ
“ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅವರಿಗೆ ಟ್ಯಾಟೂ ತೋರಿಸಬೇಕೆಂಬುದು ನನ್ನ ಆಸೆ. ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶವನ್ನು ಬದಲಾಯಿಸಿದ್ದಾರೆ. ಯಾವುದೇ ತಾರತಮ್ಯವಿಲ್ಲ ಮತ್ತು ಹಿಂದೂಗಳು – ಮುಸ್ಲಿಮರು ಎಲ್ಲರೂ ಅವರು ತಂದಿರುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸಿದ್ದಿಕಿ ಹೇಳುತ್ತಾರೆ.
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Tue, 14 June 22