ಸಲಿಂಗ ವಿವಾಹ ಅಂದರೆ ಇಬ್ಬರು ಪುರುಷರ ಅಥವಾ ಇಬ್ಬರು ಮಹಿಳೆಯರು ಪ್ರೀತಿಸಿ ಮದುವೆಯಾಗುವಂತದ್ದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದೀಗ ಮತ್ತೊಂದು ವಿಚಿತ್ರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇಲ್ಲಿ ಮೂವರು ಯುವತಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮೂವರು ಮದುವೆಯಾಗಿದ್ದಾರೆ. ಸದ್ಯ ಇವರ ಮದುವೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಿಚಿತ್ರ ಸಂಬಂಧ ನಡೆದಿರುವುದು ಅಮೆರಿಕದ ಮಸಾಚುಸೆಟ್ಸ್ ನಲ್ಲಿ. ಇಲ್ಲಿನ ಮೂವರು ಯುವತಿಯರು ಮದುವೆಯಾಗಿದ್ದು, ಒಂದೇ ಮನೆಯಲ್ಲಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಪ್ರಾರಂಭದಲ್ಲಿ ಕೇಟೀ ಮತ್ತು ನೆಸ್ ಪ್ರೀತಿಸಿ 2021 ರಲ್ಲಿ ವಿವಾಹವಾಗಿದ್ದರು. ಆದರೆ ನವೆಂಬರ್ 2022 ರಲ್ಲಿ ಕೆಲ್ಲಿ ಎಂಬ ಮತ್ತೊಬ್ಬಳು ಯುವತಿ ಈ ಲೆಸ್ಬಿಯನ್ ದಂಪತಿಗಳ ಜೀವನವನ್ನು ಪ್ರವೇಶಿಸಿದರು. ಇದು ಅವರ ಜೀವನವನ್ನು ಇನ್ನಷ್ಟು ರೋಮಾಂಚನಗೊಳಿಸಿತಂತೆ. ಬಳಿಕ ಮೂವರು ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೂವರ ವಿಚಿತ್ರ ಪ್ರೇಮ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೆಲವೊಂದಿಷ್ಟು ಜನರು ಇವರ ಸಂಬಂಧವನ್ನು ದ್ವೇಷಿಸಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Tue, 20 August 24