Video : ಪಂಚೆ ತೊಟ್ಟು ಕ್ರಿಕೆಟ್ ಆಡುತ್ತಿರುವ ಯುವಕರು, ಸಂಸ್ಕೃತದಲ್ಲಿ ಕಾಮೆಂಟರಿ

ಕ್ರಿಕೆಟ್ ಆಸಕ್ತರು ಆಟ ನೋಡುವುದಷ್ಟೇ ಅಲ್ಲ, ಕಾಮೆಂಟರಿ ಕೇಳುವುದಕ್ಕೂ ಚಂದ. ಈ ಪಂದ್ಯದಲ್ಲಿ ಹಿನ್ನಲೆ ಧ್ವನಿ ಇಲ್ಲದಿದ್ದರೆ, ಅದರ ಮಜಾನೇ ಇರಲ್ಲ. ಕ್ರಿಕೆಟ್ ಕಾಮೆಂಟರಿಯನ್ನು ಇಂಗ್ಲಿಷ್, ಹಿಂದಿ, ಕನ್ನಡದಲ್ಲಿ ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಕ್ರಿಕೆಟ್ ಪಂದ್ಯದ ವೇಳೆ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

Video : ಪಂಚೆ ತೊಟ್ಟು ಕ್ರಿಕೆಟ್ ಆಡುತ್ತಿರುವ ಯುವಕರು, ಸಂಸ್ಕೃತದಲ್ಲಿ ಕಾಮೆಂಟರಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 13, 2024 | 5:55 PM

ಕ್ರಿಕೆಟ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಆಟದ ಪರಿ ಹಾಗೂ ಕ್ರಿಕೆಟ್ ಕಾಮೆಂಟರಿ. ಈ ಪಂದ್ಯಕ್ಕೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಎನ್ನುವುದು ತಿಳಿದಿರುವ ವಿಚಾರ. ಆದರೆ ಈ ಪಂದ್ಯಕ್ಕೆ ಜೀವ ನೀಡುವುದೇ ಕಾಮೆಂಟರಿ. ಹೌದು, ಈ ಪಂದ್ಯವನ್ನು ಕಾಮೆಂಟರಿ ಇಲ್ಲದೇ ನೋಡಲು ಸಾಧ್ಯವೇ ಇಲ್ಲ. ಆಟವನ್ನು ನೋಡುತ್ತಾ ಕಾಮೆಂಟರಿ ಕೇಳುವುದೇ ಕಿವಿಗೆ ಚಂದ. ಹೌದು, ಕೆಲವರು ಹಾಸ್ಯ ಮಿಶ್ರಿತ ಕಾಮೆಂಟರಿ ಮಾಡಿದರೆ, ಇನ್ನು ಕೆಲವರು ಈ ಆಟ ಇನ್ನಷ್ಟು ಕುತೂಹಲವನ್ನು ಹುಟ್ಟುವಂತೆ ಕಾಮೆಂಟ್ ಮಾಡುತ್ತಿರುತ್ತಾರೆ.

ಇದೀಗ ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆವನ್ನು ನೀಡುತ್ತಾರೆ. ಆದರೆ ಇದೀಗ ದೇವ ಭಾಷೆ ಎಂದೇ ಗುರುತಿಸಿಕೊಂಡಿರುವ ಸಂಸ್ಕೃತದಲ್ಲಿ ಸುಲಲಿತ ಕ್ರಿಕೆಟ್ ಕಮೆಂಟರಿ ಮಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ವಿಡಿಯೋದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಸಂಸ್ಕೃತದಲ್ಲಿ ಕಾಮೆಂಟರಿ ಮಾಡುತ್ತಿರುವುದನ್ನು ನೋಡಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು ಪುತ್ತೂರು ಮುತ್ತು ಹೆಸರಿನ ಖಾತೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಸಂಸ್ಕೃತಿಯಂತೆ ಪಂಚೆ ತೊಟ್ಟು ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದಾರೆ. ಅದಲ್ಲದೇ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುವುದನ್ನು ಕಾಣಬಹುದು. ಈ ವಿಡಿಯೋವು ಅಧಿಕ ವೀಕ್ಷಣೆಗಳನ್ನು ಕಂಡಿದ್ದು ನೆಟ್ಟಿಗರು ಫಿದಾ ಆಗಿದ್ದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಈ ಲಿಂಕ್ ಕ್ಲಿಕ್​​ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಖಾಲಿ, ರಾಜ್ಯ ಪೊಲೀಸರಿಂದ ವಿನೂತನ ಜಾಗೃತಿ

ಬಳಕೆದಾರರೊಬ್ಬರು, ‘ಸುಮಧುರವಾದ ಸಂಸ್ಕೃತಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಕನ್ನಡ ನಮ್ಮ ಭಾಷೆ, ಸಂಸ್ಕೃತ ಕನ್ನಡದ ಅಮ್ಮ, ಅಜ್ಜಿಯನ್ನು ಗೌರವಿಸಿ’ ಎಂದಿದ್ದಾರೆ. ಇನ್ನೊಬ್ಬರು, ‘ಕನ್ನಡ ನಮ್ಮ ಭಾಷೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್