Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

DareDevil Mustafa : ಇವಾ ಅಪಾಯಕಾರಿ ಹೀರಿಕರಂತೂ ಭಾರೀ ದಮನಕಾರೀ, ಸೈಕಲ್​ ರಿಪೇರಿ ಗುಜರಿ, ಎದೇಲಿ ಅಕ್ಷರಾ ಇಲ್ಲ ದಂಡೂದಾಳಿ ಅಂಥಾ ಹೇಳ್ತಾರೆ ಟೆಕ್ಸ್ಟ್​ಬುಕ್ಲೂ ಬರೆದಿದಾರೆ. ಅಪ್ಪಾ, ಅಮ್ಮಾ, ಮಾಮಾ ಮೇಷ್ಟ್ರೂ ಎಲ್ರೂ ಹೀಗೆ ಹೇಳಿದಾರೆ.

Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!
ದಿ ಸ್ಟಾಕಾಸ್ಟೋ ಕೆಫೆ, ಮಲ್ಟಿ ಲಿಂಗ್ವಲ್​ ಬ್ಯಾಂಡ್​ನ ಸುಪ್ರಭಾ ಬಿ ಆರ್, ಟಿ. ಜೈಜೀವನ್​​​, ಸುನಿಧಿ ಜಿ.
Edited By:

Updated on: May 19, 2023 | 3:26 PM

Viral Video: ಸಿನಿಮಾಮರ ನಿರ್ಮಾಣದ, ಖ್ಯಾತ ಕಥೆಗಾರ ಪೂರ್ಣಚಂದ್ರ ತೇಜಸ್ವಿ ಅಭಿಮಾನಗಳು ಸೇರಿ ನಿರ್ಮಿಸಿದ ಸಿನೆಮಾ ಡೇರ್ ಡೆವಿಲ್​ ಮುಸ್ತಾಫಾ ಇಂದು ತೆರೆಕಂಡಿದೆ. ತೇಜಸ್ವಿಯವರ ಇದೇ ಶೀರ್ಷಿಕೆಯ ಕಥೆಯನ್ನು ಇದು ಆಧರಿಸಿದೆ. ಇದರ ಪ್ರಚಾರ ಕಾರ್ಯವೂ ವಿಭಿನ್ನವಾಗಿದ್ದನ್ನು ನೀವು ಗಮನಿಸಿರಬಹುದು. ನವನೀತ್ ಶ್ಯಾಮ್​ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಹಾಡುಗಳು ವಿಶಿಷ್ಟವಾಗಿ ಮೂಡಿಬಂದಿವೆ. ಸಂಪತ್​ ಸಿರಿಮನೆ, ಶಶಾಂಕ್​ ಸೊಗಲ್​ ಬರೆದಿರುವ ‘ಆಗೋದಿದೆ ಆರಂಭವು’ ಎಂಬ ಗೀತೆಯನ್ನು ಸಿದ್ಧಾರ್ಥ ಬೆಳ್ಮಣ್ಣು ಹಾಡಿದ್ದಾರೆ. ನಿಮಗೀಗಾಗಲೇ ಈ ಹಾಡಿನ ಹುಚ್ಚು ಹಿಡಿದಿರಬಹುದು. ಹಾಗೆಯೇ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅದೇ ಹಾಡನ್ನು ಕೇಳಬಹುದು.

ದಿ ಸ್ಟಾಕಾಸ್ಟೋ ಕೆಫೆ, ಮಲ್ಟಿ ಲಿಂಗ್ವಲ್​ ಬ್ಯಾಂಡ್​ನ ಸುಪ್ರಭಾ ಬಿ ಆರ್, ಸುನಿಧಿ ಜಿ. ಈ ಹಾಡನ್ನು ಹಾಡಿ ಏಪ್ರಿಲ್​ 27ರಂದು ಪೋಸ್ಟ್​ ಮಾಡಿದ್ದಾರೆ. ಅನೇಕರು ಈ ಹಾಡನ್ನು ಮೆಚ್ಚಿದ್ದಾರೆ. ಈ ಹಾಡನ್ನು ಕೇಳಿಯೇ ಸಿನೆಮಾ ನೋಡಬೇಕು ಎಂಬ ಆಸೆ ಉಂಟಾಗುತ್ತಿದೆ ಎಂದಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಎಲ್ಲಾ ಕಾದಂಬರಿ ಕಥೆಗಳನ್ನು ಓದಿದ್ದೇನೆ. ಡೇರ್​ ಡೆವಿಲ್​ ಮುಸ್ತಫಾ ಕಥೆ ತೆರೆಯ ಮೇಲೆ ಹೇಗೆ ಬರುವುದೋ ಎಂಬ ಕುತೂಹಲ ನನಗೆ ಇದೆ ಎಂದು ಇನ್ನೊಬ್ಬರು ಹೇಳಿದ್ಧಾರೆ. ಈ ಹಾಡನ್ನು ಇಲ್ಲಿ ಕೇಳಿ ನೋಡಿ…

ನಿಮ್ಮಿಬ್ಬರ ಧ್ವನಿಯೂ ತುಂಬಾ ಚೆನ್ನಾಗಿ ಒಗ್ಗೂಡಿ ಹೊಮ್ಮುತ್ತದೆ. ನಿಮ್ಮಿಂದ ಮತ್ತಷ್ಟು ಹಾಡುಗಳನ್ನು ನಿರೀಕ್ಷಿಸುತ್ತೇವೆ ಎಂದು ಇನ್ನೊಬ್ಬರು ಹೇಳಿದ್ಧಾರೆ. ಮೂಲ ಹಾಡನ್ನು ತೆರೆಯ ಮೇಲೆ ನೋಡಬೇಕೆನ್ನಿಸುತ್ತಿದೆ ನಿಮ್ಮ ಹಾಡನ್ನು ಕೇಳಿದ ಮೇಳೆ ಎಂದು ಮಗದೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು

ಅಂದಹಾಗೆ ಈ ಸಿನೆಮಾ ನೋಡಲು ಡಾಲಿ ಧನಂಜಯ್ ಒಂದು ರೂಪಾಯಿಯ ಭರ್ಜರಿ ಆಫರ್​ ನೀಡಿದ್ದರು. ಕೆಲವರು ನಾವು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು. ನಾವು ಪೂರ್ತಿ ಹಣ ಕೊಟ್ಟು ನೋಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದರು. ನೀವು ಈ ಸಿನೆಮಾ ನೋಡಿದಿರಾ? ನೋಡಬೇಕಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:28 pm, Fri, 19 May 23