Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್​ಡೆವಿಲ್​ ಮುಸ್ತಫಾ’

Daredevil Musthafa: ‘ಡೇರ್​ಡೆವಿಲ್​ ಮುಸ್ತಫಾ’ ಚಿತ್ರದ ಕಥೆ ಸಾಗುವುದು ರೆಟ್ರೋ ಕಾಲದಲ್ಲಿ. ಮೊಬೈಲ್​, ಇಂಟರ್​ನೆಟ್​ ಇತ್ಯಾದಿಗಳಿಲ್ಲದ ಆ ಕಾಲಘಟ್ಟವನ್ನು ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಕಟ್ಟಿಕೊಟ್ಟಿದ್ದಾರೆ.

Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್​ಡೆವಿಲ್​ ಮುಸ್ತಫಾ’
ಡೇರ್ಡೆವಿಲ್ ಮುಸ್ತಫಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on:May 18, 2023 | 2:18 PM

ಚಿತ್ರ: ಡೇರ್​ಡೆವಿಲ್​ ಮುಸ್ತಫಾ

ನಿರ್ಮಾಣ: ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳು

ನಿರ್ದೇಶನ: ಶಶಾಂಕ್​ ಸೋಗಾಲ್​

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಶಿಶಿರ್​ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್​ ಭಾರದ್ವಾಜ್​, ಆಶಿತ್​ ಶ್ರೀವತ್ಸಾ, ಅಭಯ್​, ಮಂಡ್ಯ ರಮೇಶ್​, ಉಮೇಶ್​, ಪ್ರೇರಣಾ ಮುಂತಾದವರು.

ಸ್ಟಾರ್​: 3.5/5

ಒಂದು ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಆಧರಿಸಿದ ಸಿನಿಮಾಗಳನ್ನು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದವು. ಇತ್ತೀಚೆಗೆ ಆ ಟ್ರೆಂಡ್​ ಕಡಿಮೆ ಆಗಿದೆ. ಅಪರೂಪ ಎಂಬಂತೆ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಮೂಡಿಬಂದಿದೆ. ಕರುನಾಡು ಕಂಡ ವಿಶೇಷ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಅಬಚೂರಿನ ಪರಿಸರವನ್ನು ತೆರೆಗೆ ತಂದಿದ್ದಾರೆ. ಜೊತೆಗೆ ಉತ್ತಮವಾದ ಸಂದೇಶವನ್ನೂ ರವಾನಿಸಿದ್ದಾರೆ. ಹೊಸ ಕಲಾವಿದರ ಅಭಿನಯ ಗಮನ ಸೆಳೆಯುತ್ತಿದೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಆಗುವಂತಿವೆ. ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯಲ್ಲೂ ಆ ಗುಣವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋಮುದ್ವೇಷ ರಾರಾಜಿಸುತ್ತಿದೆ. ಅನಗತ್ಯವಾಗಿ ಧರ್ಮಗಳ ನಡುವೆ ಜಗಳ ಸೃಷ್ಟಿ ಆಗುತ್ತಲೇ ಇದೆ. ಅದೆಲ್ಲ ಎಷ್ಟು ಕ್ಷುಲ್ಲಕ ಎಂಬುದನ್ನು ತಿಳಿಸುವ ರೀತಿಯಲ್ಲಿ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ: Raghavendra Stores Review: ‘ರಾಘವೇಂದ್ರ ಸ್ಟೋರ್ಸ್​’ನಲ್ಲಿ ಸಂದೇಶಗಳ ರೀಸೈಕಲ್​; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ

ಕಣ್ಣೆದುರಿಗೆ ಬರುವ ರೆಟ್ರೋ ಕಾಲ:

ಈ ಕಥೆ ಸಾಗುವುದು ರೆಟ್ರೋ ಕಾಲದಲ್ಲಿ. ಮೊಬೈಲ್​, ಇಂಟರ್​ನೆಟ್​ ಇತ್ಯಾದಿ ಹಾವಳಿ ಇಲ್ಲದ ಕಾಲಘಟ್ಟವನ್ನು ಇಂದಿನ ಸಿನಿಮಾಗಳಲ್ಲಿ ತೋರಿಸುವುದು ಅಷ್ಟು ಸುಲಭವಲ್ಲ. ಆ ಸವಾಲನ್ನು ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಪ್ರೇಕ್ಷಕರನ್ನು ಅವರು ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗುತ್ತಾರೆ.

ವಿವಿಧತೆಯಲ್ಲಿ ಏಕತೆ ಮಂತ್ರ:

ಒಂದೇ ಊರಿನಲ್ಲಿ ಎರಡು ಬೇರೆ ಬೇರೆ ಧರ್ಮದ ಜನರು ಇದ್ದಾಗ ಸಾಮಾನ್ಯವಾಗಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅದರಿಂದಾಗಿ ಜಗಳಗಳು ಉಂಟಾಗುವುದು ಕೂಡ ಸಹಜ. ಆದರೆ ಹೊಂದಿಕೊಂಡು ಬಾಳಿದರೆ ಒಗ್ಗಟ್ಟಿನಿಂದ ಉತ್ತಮ ಸಮಾಜವನ್ನು ಕಟ್ಟಬಹುದು ಎಂಬ ಸಂದೇಶ ಈ ಸಿನಿಮಾದಲ್ಲಿದೆ. ಆದರೆ ಅದನ್ನು ಒಂದು ಪಾಠದ ರೀತಿ ಹೇಳಿಲ್ಲ. ನಕ್ಕು ನಗಿಸುವಂತಹ ಲವಲವಿಕೆಯ ದೃಶ್ಯಗಳ ಮೂಲಕ ಎಲ್ಲವನ್ನೂ ಪ್ರೇಕ್ಷಕರ ಎದೆಗೆ ದಾಟಿಸಲಾಗಿದೆ.

ಇದನ್ನೂ ಓದಿ: Raghu Movie Review: ‘ರಾಘು’ ಚಿತ್ರದಲ್ಲಿ ಚಿನ್ನಾರಿ ಮುತ್ತನ ಏಕಪಾತ್ರಾಭಿನಯ; ಕನ್ನಡದಲ್ಲೊಂದು ಭಿನ್ನ ಪ್ರಯೋಗ

ಕಾಳಜಿಯುಳ್ಳ ನಿರೂಪಣೆ:

ಬರೀ ಹಿಂದೂಗಳೇ ತುಂಬಿರುವ ಕಾಲೇಜಿಗೆ ಒಬ್ಬನೇ ಒಬ್ಬ ಮುಸ್ಲಿಂ ಹುಡುಗ ಸೇರಿಕೊಂಡರೆ ಏನಾಗುತ್ತದೆ? ಅದರಲ್ಲೂ ಮುಸ್ಲಿಂ ಸಮುದಾಯದ ಬಗ್ಗೆ ಹಿಂದೂ ಹುಡುಗರಿಗೆ ಪೂರ್ವಾಗ್ರಗಳು ತುಂಬಿಕೊಂಡಿದ್ದರೆ ಏನಾಗಬಹುದು? ಇಂಥ ಬಿಗುವಿನ ವಾತಾವರಣದಲ್ಲಿ ಒಂದು ಚಿಕ್ಕ ಲವ್​ ಸ್ಟೋರಿಯೂ ಹುಟ್ಟಿಕೊಂಡರೆ ಏನಾದೀತಿ? ಅದೂ ಸಾಲದೆಂಬಂತೆ ಕಾಲೇಜಿನ ಹಿಂದೂ ಹುಡುಗರ ವಿರುದ್ಧ ಅದೇ ಊರಿನ ಮುಸ್ಲಿಂ ಕೇರಿಯ ಯುವಕರು ಬಾಜಿ ಕಟ್ಟಿ ಕ್ರಿಕೆಟ್​ ಆಡಲು ಬಂದರೆ ಏನೆಲ್ಲ ನಡೆಯಬಹುದು? ಈ ಎಲ್ಲ ಸೂಕ್ಷ್ಮವಾದ ವಿಚಾರಗಳು ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾದಲ್ಲಿದೆ. ಈ ಎಲ್ಲವನ್ನೂ ಕೂಡ ನಿರ್ದೇಶಕರು ಎಂಬ ಕಾಳಜಿ, ಎಚ್ಚರಿಕೆಯಿಂದ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

ಈ ಚಿತ್ರದ ಅವಧಿ 2 ಗಂಟೆ 40 ನಿಮಿಷ. ಆದರೂ ಕೂಡ ಎಲ್ಲಿಯೂ ಬೋರು ಹೊಡೆಸದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಹುಡುಗರ ತರಲೆ-ತಮಾಷೆಯ ಜೊತೆ ಸಾಗುವ ನಿರೂಪಣೆ ಇಷ್ಟ ಆಗುತ್ತದೆ. ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ನಟಿಸಿದ ಆದಿತ್ಯ ಆಶ್ರೀ ಮತ್ತು ಮುಸ್ತಫಾ ಪಾತ್ರದಲ್ಲಿ ಅಭಿನಯಿಸಿದ ಶಿಶಿರಾ ಬೈಕಾಡಿ ನಡುವಿನ ಜಿದ್ದಾ ಜಿದ್ದಿ ದೃಶ್ಯಗಳು ಮಸ್ತ್​ ಮನರಂಜನೆ ನೀಡುತ್ತವೆ. ಮಂಡ್ಯ ರಮೇಶ್​, ಉಮೇಶ್​, ನಾಗಭೂಷಣ್​ ಮುಂತಾದವರು ಕೂಡ ನಗುವಿನ ಕಚಗುಳಿ ಇಡುತ್ತಾರೆ. ರಮಾಮಣಿ ಪಾತ್ರ ಮಾಡಿದ ಪ್ರೇರಣಾ ಕೂಡ ಗಮನ ಸೆಳೆಯುತ್ತಾರೆ. ಅಯ್ಯಂಗಾರಿ ಪಟಾಲಂ ಕೂಡ ಚಪ್ಪಾಳೆ ಗಿಟ್ಟಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:15 pm, Thu, 18 May 23