ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧನಕ್ಕೊಳಗಾಗಿದ್ದ ನಟ ದರ್ಶನ್ ತೂಗುದೀಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅವರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ಹೈ ಕೋರ್ಟ್ ಆರು ವಾರಗಳ ಅವಧಿ ಅಂದ್ರೆ ಸುಮಾರು 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಸುದ್ದಿ ದರ್ಶನ್ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಕೂಡಾ ದೀಪಾವಳಿ ಹಬ್ಬಕ್ಕೆ ಬಂಪರ್ ಗಿಫ್ಟ್ ದೊರೆತಂತಾಗಿದೆ. ಅಭಿಮಾನಿಗಳಂತೂ ಡಿ ಬಾಸ್‌ಗೆ ಸಂಬಂಧಪಟ್ಟ ಪವರ್‌ಫುಲ್ ಮೀಮ್ಸ್, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಹಬ್ಬ ಶುರು ಮಾಡಿಕೊಂಡಿದ್ದಾರೆ. ಇದೀಗ ಇಲ್ಲೊಂದು ವಿಡಿಯೋ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Welcome Back BOSS🥳🔥
ಹಬ್ಬ ಮಾಡೋಕೆ ರೆಡಿ ಆಗ್ರೋ💥🤙 #DBoss
— D Boss ❤️🔥 (@dbossganesh_) October 30, 2024
ನಟ ದರ್ಶನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದು, ನಮ್ಮ ಬಾಸ್ ಯಾವಾಗ ಜೈಲಿಂದ ಹೊರ ಬರ್ತಾರೆ ಅಂತ ಅಭಿಮಾನಿಗಳೆಲ್ಲರೂ ಕಾತುರದಿಂದ ಕಾಯ್ತ ಇದ್ರು. ಇದೀಗ ಆ ಶುಭ ಗಳಿಗೆ ಕೂಡಿ ಬಂದಿದ್ದು, ನಟ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಸುದ್ದಿ ತಿಳಿದು ಅಭಿಮಾನಿಗಳು ನಮ್ಮ ಬಾಸ್ ಬಂದ್ರು ಕಣ್ರೋ ಎನ್ನುತ್ತಾ ಹಬ್ಬವನ್ನೇ ಶುರು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ಮಾಡುವಂತಿಲ್ಲ, ಪಾಸ್ಪೋರ್ಟ್ ಸರೆಂಡರ್ ಮಾಡಬೇಕು; ದರ್ಶನ್ಗೆ ಕೋರ್ಟ್ ಹಾಕಿದ ಷರತ್ತುಗಳಿವು
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Welcome Back BOSS🥳🔥
ಹಬ್ಬ ಮಾಡೋಕೆ ರೆಡಿ ಆಗ್ರೋ💥🤙 #DBoss #BossOfSandalwood@dasadarshan
— D Boss ❤️🔥 (@dbossganesh_) October 30, 2024
ದರ್ಶನ್ ಅವರಿಗೆ ಸಂಬಂಧಿಸಿದ ಮೀಮ್ಸ್ ಒಂದನ್ನು dbossganesh_ ಗಣೇಶ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೆಲ್‌ಕಮ್ ಬ್ಯಾಕ್ ಬಾಸ್; ಹಬ್ಬ ಮಾಡೋಕೆ ರೆಡಿ ಆಗ್ರೋ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ನಮ್ಮ ಬಾಸ್ ಬರ್ತಿದ್ದಾರೆ ಕಣ್ರೋ ಎಂದು ಹೇಳುತ್ತಾ ಸಖತ್ ಆಗಿ ಎಡಿಟಿಂಗ್ ಮಾಡಿರುವಂತಹ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವೆಲ್‌ಕಮ್ ಬ್ಯಾಕ್ ಡಿ ಬಾಸ್ ಎಂದು ಹೇಳುತ್ತಾ ಅಭಿಮಾನಿಗಳು ದೀಪಾವಳಿಯ ಮುಂಚೆಯೇ ಜೋರು ಹಬ್ಬವನ್ನು ಶುರು ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.