Viral Video : ಹಾಯ್ ಬೆಕ್ಕಾ, ನೀನು ನನ್ನೊಂದಿಗೆ ಮತ್ತು ನಾಯಿಗಳೊಂದಿಗೆ ವಾಕಿಂಗ್ ಬರುತ್ತೀಯಾ? ಲವ್ ಯೂ… ಹೀಗೆಂದು ಅಪ್ಪ ಮೆಸೇಜ್ ಮಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಮಗಳು, ಬರಬೇಕೆಂದುಕೊಂಡೆ ಅಪ್ಪಾ, ಆದರೆ ಈ ಬೆಳಗು ನಾನು ಸ್ವಲ್ಪ ಬಿಝಿ ಇದ್ದೇನೆ. ಮುಂದಿನ ಸಲ ಗ್ಯಾರಂಟಿ ಬರುತ್ತೇನೆ. ಹೀಗೆಂದು ಮೆಸೇಜ್ ಹಾಕುತ್ತಾಳೆ. ಆ ನಂತರ ಆಕೆ ಏನು ಮಾಡುತ್ತಾಳೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ತಂದೆಯೊಂದಿಗೆ ಹೆಣ್ಣುಮಕ್ಕಳ ಬಂಧ ಯಾವತ್ತೂ ವಿಶೇಷ ಮತ್ತು ಅನನ್ಯ. ಅದನ್ನು ಪದಗಳಲ್ಲಿ ಬಿಡಿಸಿಡಲಾಗದು. ಮೊದಲು ವಾಕಿಂಗ್ ಹೋಗಲು ನಿರಾಕರಿಸಿದ ಮಗಳು ತಂದೆಗೆ ಸರ್ಪ್ರೈಝ್ ನೀಡುತ್ತಾಳೆ. ಆ ನಾಯಿಗಳು ಓಡಿಬರುವ ದೃಶ್ಯ ಅಪ್ಪನ ಮುಖದಲ್ಲಿ ಮೂಡುವ ಅಚ್ಚರಿ, ಆ ಸುಂದರವಾದ ಬೆಳಗು, ರಸ್ತೆಗಳು ಎಂಥ ಸುಂದರ ಅಲ್ಲವಾ? ನಮ್ಮ ಪ್ರೀತಿಪಾತ್ರರಿಗೆ ಸಮಯ ಕೊಡುವುದು ಮತ್ತು ಅವರ ನಿರೀಕ್ಷೆಗಳನ್ನು ತಣಿಸುವುದು ಈ ಪ್ರಕ್ರಿಯೆಯಲ್ಲಿಯೇ ಬದುಕಿನ ದೊಡ್ಡ ಖುಷಿ ಅಡಗಿರುವುದು.
ಈಗಾಗಲೇ ಈ ವಿಡಿಯೋ ಅನ್ನು 1.5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 12,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಈ ವಿಡಿಯೋ ನನ್ನ ತಂದೆಯನ್ನು ಇನ್ನಷ್ಟು ಮಿಸ್ ಮಾಡಿಕೊಳ್ಳುವಂತೆ ಮಾಡುತ್ತಿದೆ. ನಿಮ್ಮ ಪ್ರೀತಿಪಾತ್ರರ ಮಾತನ್ನು ಎಂದಿಗೂ ಕಡೆಗಣಿಸಬೇಡಿ. ಅವರು ನಿಮ್ಮೊಂದಿಗೆ ಸಮಯ ಕಳೆಯಲು ಇಷ್ಟಪಟ್ಟರೆ ತಕ್ಷಣವೇ ಸ್ಪಂದಿಸಿ. ಈ ವಿಷಯವಾಗಿ ನಾಳೆ ಎನ್ನುವುದು ಇರುವುದಿಲ್ಲ’ ಎಂದಿದ್ದಾರೆ ಒಬ್ಬರು. ‘ನಾನು ನಾಲ್ಕು ವರ್ಷಗಳಾದವು ನನ್ನ ತಂದೆತಾಯಿಯನ್ನು ಭೇಟಿ ಮಾಡಿ. ಖಂಡಿತ ಈ ಕ್ರಿಸ್ಮಸ್ಗೆ ಹೋಗುತ್ತೇನೆ’ ಎಂದಿದ್ದಾರೆ ಮತ್ತೊಬ್ಬರು. ‘ನಾನು ಯಾವಾಗಲೂ ನನ್ನ ತಂದೆತಾಯಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಈ ವಿಡಿಯೋ ನೋಡಿ ಅದು ಮತ್ತಷ್ಟು ಹೆಚ್ಚುತ್ತಿದೆ’ ಎಂದಿದ್ದಾರೆ ಮಗದೊಬ್ಬರು.
ನಿಮಗೇನು ಅನ್ನಿಸುತ್ತಿದೆ ಇದನ್ನು ನೋಡುತ್ತಿದ್ದಂತೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:56 pm, Mon, 7 November 22