Viral: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ರಷ್ಯನ್‌ ಪ್ರವಾಸಿಗ; ವೀಡಿಯೋ ವೈರಲ್

ಅತಿಥಿ ದೇವೋಭವ ಎನ್ನುವುದು ನಮ್ಮ ದೇಶದ ಸಂಸ್ಕೃತಿ. ಹಿಂದಿನಿಂದಲೂ ಹಾಗೆ ಇಲ್ಲಿ ನಾವು ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸಿ ಸತ್ಕರಿಸುತ್ತೇವೆ. ಇಲ್ಲೊಬ್ರು ವಿದೇಶಿ ಪ್ರವಾಸಿಗ ಭಾರತೀಯರ ಈ ಪ್ರೀತಿ ತುಂಬಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಅವರು ಶಿವ ದೇವಾಲಯವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿದ್ದ ಕುಟುಂಬವೊಂದು ಇವರಿಗೆ ಊಟ ಕೊಟ್ಟು ಸತ್ಕರಿಸಿದ್ದು, ಈ ಆತ್ಮೀಯ ಆತಿಥ್ಯವನ್ನು ಕಂಡು ಅವರು ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತದೆ.

Viral: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ರಷ್ಯನ್‌ ಪ್ರವಾಸಿಗ; ವೀಡಿಯೋ ವೈರಲ್
ಸಾಂದರ್ಭಿಕ ಚಿತ್ರ
Edited By:

Updated on: Mar 06, 2025 | 3:50 PM

ನಮ್ಮ ಭಾರತದಲ್ಲಿ (india) ಮನಸ್ಸಿಗೆ ಮುದ ನೀಡುವಂತಹ ಹಲವಾರು ಪ್ರವಾಸಿ ತಾಣಗಳಿದ್ದು, ಈ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಇಲ್ಲಿನ ಸಂಸ್ಕೃತಿ, ಪರಂಪರೆ ಜನರ ಬಗ್ಗೆ ತಿಳಿಯಲು ಹಾಗೂ ವಿಶೇಷವಾಗಿ ನಮ್ಮ ಭಾರತದ ರುಚಿಕರ ಆಹಾರವನ್ನು ಸವಿಯುವ ಸಲುವಾಗಿ ಹಲವಾರು ವಿದೇಶಿ ಪ್ರವಾಸಿಗರು ಭಾರತಕ್ಕೆ ಪ್ರವಾಸ ಬರುತ್ತಾರೆ. ಅದೇ ರೀತಿ ಇಲ್ಲೊಬ್ರು ರಷ್ಯಾದ ಪ್ರವಾಸಿಗ (Russian Tourist) ಭಾರತದ ಶಿವ ದೇವಾಲಯವೊಂದಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಅಲ್ಲಿದ್ದ ಕುಟುಂಬವೊಂದು ಇವರಿಗೆ ಊಟ ಕೊಟ್ಟು ಸತ್ಕರಿಸಿದ್ದು, ಈ ಆತ್ಮೀಯ ಆತಿಥ್ಯಕ್ಕೆ ಅವರು ಮನಸೋತು, ಭಾರತಕ್ಕೆ ಬನ್ನಿ, ಈ ದೇಶ ನಿಮಗೆ ಆಧ್ಯಾತ್ಮಿಕತೆಯ ನಿಜವಾದ ಅರ್ಥವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತದೆ.

ರಷ್ಯಾದ ಪ್ರವಾಸಿಗ ದೆಹಲಿಯ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ಅಲ್ಲಿದ್ದ ಭಾರತೀಯ ಕುಟುಂಬವೊಂದು ಪ್ರವಾಸಿಗನಿಗೆ ಊಟ ಕೊಟ್ಟು ಆತ್ಮೀಯವಾಗಿ ಸತ್ಕರಿಸಿದ್ದಾರೆ. ಈ ಪ್ರೀತಿಯ ಸತ್ಕಾರಕ್ಕೆ ಹಾಗೂ ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರವನ್ನು ಕಂಡು ವಿದೇಶಿ ಪ್ರವಾಸಿಗ ಭಾವುಕರಾಗಿದ್ದಾರೆ.

ಇದನ್ನೂ ಓದಿ
ಬಾಲಕನನ್ನು ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳು, ಮುಂದೇನಾಯ್ತು ನೋಡಿ
ಸೈಟ್‌ ಸೇಲ್‌ಗಿದೆ, ಓನ್ಲಿ ‌ ಫಾರ್‌ ವೆಜಿಟೇರಿಯನ್ಸ್‌
ಬರೋಬ್ಬರಿ 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಸೇಲ್ ಆದ ಅಂಡರ್‌ವೇರ್
100 ಪುಟಗಳ ಬಜೆಟ್‌ ಪ್ರತಿಯನ್ನು ಕೈಯಲ್ಲೇ ಬರೆದು ಮಂಡಿಸಿ ದಾಖಲೆ ಬರೆದ ಸಚಿವ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು Megha Udates ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಭಾರತೀಯ ಆತಿಥ್ಯಕ್ಕೆ ಮನಸೋತ ರಷ್ಯಾದ ಪ್ರವಾಸಿಗ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪ್ರವಾಸ ಬಂದಿದ್ದ ರಷ್ಯಾದ ಪ್ರಜೆಯನ್ನು ನೆಲದ ಮೇಲೆ ಕೂರಿಸಿ ಭಾರತೀಯ ಕುಟುಂಬವೊಂದು ಅವರಿಗೆ ಊಟ ಕೊಡುವಂತಹ ದೃಶ್ಯವನ್ನು ಕಾಣಬಹುದು. ಭೋಜನವನ್ನು ಸ್ವೀಕರಿಸಿದ ಬಳಿಕ ಇಲ್ಲಿನ ಆತ್ಮೀಯ ಆಥಿತ್ಯಕ್ಕೆ ಹಾಗೂ ಸಂಸ್ಕೃತಿಗೆ ಮನಸೋತು ಸ್ನೇಹಿತರೇ ಭಾರತಕ್ಕೆ ಬನ್ನಿ, ಭಾರತವು ನಿಮಗೆ ನಿಜವಾದ ಆಧ್ಯಾತ್ಮಿಕತೆಯನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರೋಡಲ್ಲಿ ನಡ್ಕೊಂಡು ಬರ್ತಿದ್ದ ಬಾಲಕನನ್ನು ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳು; ಮುಂದೇನಾಯ್ತು ನೋಡಿ

ಮಾರ್ಚ್‌ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಭಾರತೀಯ ಆತಿಥ್ಯ ಮತ್ತೊಮ್ಮೆ ಹೃದಯಗಳನ್ನು ಗೆದ್ದಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅತಿಥಿ ದೇವೋಭವ; ನಾವು ನಮ್ಮ ಆತಿಥ್ಯದಿಂದಲೇ ಹೆಸರುವಾಸಿಯಾಗಿದ್ದೇವೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನನ್ನ ಹೆಮ್ಮೆಯ ಭಾರತʼ ಎಂದು ಹೇಳಿದ್ದಾರೆ. ಇನ್ನೂ ಅನೇಕ ಬಳಕೆದಾರರು ರಷ್ಯಾದ ಪ್ರವಾಸಿಗನನ್ನು ಸ್ವಾಗತಿಸಿದ ಭಾರತೀಯ ಕುಟುಂಬವನ್ನು ಶ್ಲಾಘಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ