ಭಿಕ್ಷೆ ಕೊಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿ ನಿಂದಿಸಿದ ಮಂಗಳಮುಖಿ; ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 13, 2024 | 3:39 PM

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು ಮಾಡುವಂತಹ ಅವಾಂತರಗಳು, ಕಿತಾಪತಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ದೆಹಲಿ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಾ ಬರುವಾಗ ಹಣ ನೀಡಲು ನಿರಾಕರಿಸಿದನೆಂದು ಮಂಗಳಮುಖಿ ಪ್ರಯಾಣಿಕನೊಬ್ಬನಿಗೆ ಅಸಭ್ಯವಾಗಿ ಬೈದು, ಖಾಸಗಿ ಅಂಗ ತೋರಿಸಿ ನಿಂದಿಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಭಿಕ್ಷೆ ಕೊಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿ ನಿಂದಿಸಿದ ಮಂಗಳಮುಖಿ; ವಿಡಿಯೋ ವೈರಲ್
ವೈರಲ್​​ ವಿಡಿಯೋ
Follow us on

ಹೆಚ್ಚಿನ ಮಂಗಳಮುಖಿಯರು ಎಲ್ಲರೊಂದಿಗೂ ಉತ್ತಮ ರೀತಿಯಲ್ಲಿ ಇದ್ದರೆ ಇನ್ನೂ ಕೆಲವರು ಸಣ್ಣಪುಟ್ಟ ವಿಷಯಕ್ಕೆ ಇತರರೊಂದಿಗೆ ಜಗಳವಾಡುತ್ತಾ ಕಿರಿಕ್‌ ಮಾಡಿಕೊಳ್ಳುತ್ತಿರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆ ಕೂಡಾ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮೆಟ್ರೋದಲ್ಲಿ ಭಿಕ್ಷೆ ಬೇಡುವಾಗ ಹಣ ಕೊಡಲು ನಿರಾಕರಿಸಿದನೆಂದು ಮಂಗಳಮುಖಿ ಪ್ರಯಾಣಿಕನೊಬ್ಬನಿಗೆ ಅಸಭ್ಯವಾಗಿ ಬೈದದ್ದು ಮಾತ್ರವಲ್ಲದೆ ಆಕೆ ಬಟ್ಟೆ ಎತ್ತಿ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಮಂಗಳಮುಖಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ವರದಿಗಳ ಪ್ರಕಾರ ದೆಹಲಿ ಮೆಟ್ರೋದಲ್ಲಿ ಈ ಘಟನೆ ನಡೆದಿದ್ದು, ಹಣ ಕೊಡಲು ನಿರಾಕರಿಸಿದ ಪ್ರಯಾಣಿಕನಿಗೆ ಮಂಗಳಮುಖಿ ಖಾಸಗಿ ಅಂಗ ತೋರಿಸಿ ನಿಂದಿಸಿದ್ದಾಳೆ. ಈ ಕುರಿತ ವಿಡಿಯೋವೊಂದನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ದೆಹಲಿ ಮೆಟ್ರೋದಲ್ಲಿ ಮಂಗಳಮುಖಿಯರಿಬ್ಬರು ಭಿಕ್ಷೆ ಬೇಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಭಿಕ್ಷೆ ಬೇಡುವಾಗ ಪ್ರಯಾಣಿಕನೊಬ್ಬ ಅವರಿಗೆ ಹಣ ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಂಗಳಮುಖಿ ಆತನಿಗೆ ಅಸಭ್ಯ ರೀತಿಯಲ್ಲಿ ಬೈಗುಳ ನೀಡಿದ್ದು ಮಾತ್ರವಲ್ಲದೆ ಕೋಪದಲ್ಲಿ ಬಟ್ಟೆ ಎತ್ತಿ ಖಾಸಗಿ ಅಂಗವನ್ನು ತೋರಿಸಿ ನಿಂದಿಸಿದ್ದಾಳೆ.

ಇದನ್ನೂ ಓದಿ:  ಪೆಟ್ರೋಲ್‌ ಟ್ಯಾಂಕರ್‌ನಲ್ಲಿ ಗೋವು ಕಳ್ಳಸಾಗಾಣೆ ಮಾಡುವಾಗ ರೆಡ್‌ಹ್ಯಾಂಡ್ ಸಿಕ್ಕಿ ಬಿದ್ದ ಖದೀಮ ಕಳ್ಳರು

ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಸ್ಸು ರೈಲು, ಮೆಟ್ರೋ ಎಲ್ಲೆಲ್ಲೂ ಇವರದ್ದೇ ಹಾವಳಿ, ಇನ್ನು ಮುಂದೆ ಮಂಗಳಮುಖಿಯರು ವಿಮಾನದಲ್ಲಿ ಕೂಡಾ ಭಿಕ್ಷೆ ಬೇಡಬಹುದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗೂಂಡಾಗಿರಿ ಮಾಡಿ ಭಿಕ್ಷೆ ಬೇಡುವ ಅವಶ್ಯಕತೆಯಿದೆಯೇʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ