ಕಮಲ್ ಹಾಸನ್ ಹೇಳಿದ್ದು ಸುಳ್ಳು, ಕನ್ನಡವು ಸಂಸ್ಕೃತ ಆಧಾರಿತ : ಡಾ. ಕೆ ಸುಬ್ರಮೋನಿಯ ಅಯ್ಯರ್

ತಮಿಳು ಖ್ಯಾತ ನಟ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂದಿದ್ದು, ಈ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿವಾದದಲ್ಲಿ ಸಿಲುಕಿರುವ ಖ್ಯಾತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಅಗ್ರಹಿಸುತ್ತಿದ್ದಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಾ. ಕೆ ಸುಬ್ರಮೋನಿಯ ಅಯ್ಯರ್ ಅವರು ಕಮಲ್ ಅವರ ಹೇಳಿಕೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ವಿಡಿಯೋವೊಂದು ವೈರಲ್ ಆಗಿದೆ.

ಕಮಲ್ ಹಾಸನ್ ಹೇಳಿದ್ದು ಸುಳ್ಳು,  ಕನ್ನಡವು ಸಂಸ್ಕೃತ ಆಧಾರಿತ : ಡಾ. ಕೆ ಸುಬ್ರಮೋನಿಯ ಅಯ್ಯರ್
ವೈರಲ್ ವಿಡಿಯೋ
Image Credit source: Twitter

Updated on: May 29, 2025 | 2:28 PM

ಚೆನ್ನೈ (Chennai) ನಲ್ಲಿ ನಡೆದ ಥಗ್ ಲೈಫ್ ಚಿತ್ರದ ಆಡಿಯೋ ಬಿಡುಗಡೆ ​​ಸಮಾರಂಭದಲ್ಲಿ ಖ್ಯಾತ ನಟ ಕಮಲ್ ಹಾಸನ್ (Actor Kamal Hasan) ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂದಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಆದರೆ ಇದೀಗ  ಡಾ. ಸುಬ್ರಮೋನಿಯ ಅಯ್ಯರ್ (Dr. Subramonia Iyer) ಎನ್ನುವ ಹೆಸರಿನ ವ್ಯಕ್ತಿಯೊಬ್ಬರು ಕನ್ನಡ ಯಾವ ಭಾಷೆಯೂ ಹೇಗೆ ಹುಟ್ಟಿತು ಹಾಗೂ ನಟ ಕಮಲ್ ಹಾಸನ್ ಹೇಳಿಕೆ ಕುರಿತು ಮಾತನಾಡಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

@sandeepUnnithan ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನನ್ನ ಮಾವ ಡಾ. ಕೆ. ಸುಬ್ರಮೋನಿಯ ಅಯ್ಯರ್ ದಕ್ಷಿಣ ಭಾರತದ ನಾಲ್ಕು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕಮಲಹಾಸನ್ ಅವರ ಕನ್ನಡ ತಮಿಳಿನಿಂದ ಹುಟ್ಟಿದೆ ಎನ್ನುವ ಹೇಳಿಕೆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಈ ವ್ಯಕ್ತಿಯೂ ಕಮಲ್ ಹಾಸನ್ ಸುಳ್ಳು ಹೇಳುತ್ತಿದ್ದಾನೆ. ಕನ್ನಡವು ಸಂಸ್ಕೃತ ಆಧಾರಿತವಾಗಿದ್ದು, ಸಂಸ್ಕೃತ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕನ್ನಡವು ಎಂದಿಗೂ ತಮಿಳಿನಿಂದ ಹುಟ್ಟಿಕೊಂಡಿಲ್ಲ. ಕಮಲ್ ಹಾಸನ್ ಗೆ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯ ಸ್ಪಷ್ಟ ಜ್ಞಾನವಿಲ್ಲ ಎಂದಿದ್ದಾರೆ.

ಇದನ್ನೂ ಓದಿ
ಚೀಫ್ ಹ್ಯಾಪಿನೆಸ್ ಆಫೀಸರ್ ಆಗಿ ನೇಮಕಗೊಂಡ ಶ್ವಾನ, ಇದು ವಿಶೇಷ ಹುದ್ದೆ
ಒಂಟೆಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಪುಣ್ಯಾತ್ಮ
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಗಂಡನ ಟಿಫಿನ್ ಬಾಕ್ಸ್​​​​ನ​​​​​​​​​ ಒಳಗಿತ್ತು ಸರ್ಪ್ರೈಸ್

ಇದನ್ನೂ ಓದಿ : ನಡುರಸ್ತೆಯಲ್ಲೇ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮೇ 28 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಈವರೆಗೆ ಎರಡು ಲಕ್ಷ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ಭಾರತೀಯರು ಭಾಷಾ ಪ್ರಾಲ್ಯದ ಬಗ್ಗೆ ಹೋರಾಡುವುದನ್ನು ನಿಲ್ಲಿಸಬೇಕು. ಪ್ರತಿಯೊಂದು ಪ್ರಾದೇಶಿಕ ಭಾಷೆಯೂ ತನ್ನದೇ ಆದ ರೀತಿಯಲ್ಲಿ ಶ್ರೀಮಂತ ಹಾಗೂ ಸುಂದರವಾಗಿದೆ. ಯಾವುದು ಮೊದಲು ಬಂದಿತು ಎಂದು ವಾದಿಸುವ ಬದಲು ನಮ್ಮ ವೈವಿಧ್ಯತೆಯನ್ನು ಆಚರಿಸೋಣ. ವೈವಿಧ್ಯತೆಯಲ್ಲಿ ಏಕತೆ, ಭಾರತವನ್ನು ನಿಜವಾಗಿಯೂ ಅನನ್ಯವಾಗಿಸುತ್ತದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು, ಕೊನೆಯ ಸಾಲುಗಳು ಸತ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕನ್ನಡಕ್ಕೆ ಕೆಲವು ಸಂಸ್ಕೃತ ಪದಗಳು ಎರವಲು ಬಂದಿವೆ. ಆದರೆ ಕನ್ನಡದಲ್ಲಿ ಸಂಸ್ಕೃತ ಇದೆ ಅನ್ನೋದು ಸುಳ್ಳು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Thu, 29 May 25