ಪುಟ್ಟ ಯಕ್ಷ ಕನ್ಯೆ, ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕುಣಿದ ಕಂದಮ್ಮ
ಪುಟಾಣಿ ಮಕ್ಕಳೇ ಹಾಗೆ ಹಾಡು ಕೇಳಿದ ತಕ್ಷಣ ತನ್ನ ಪುಟ್ಟ ಪುಟ್ಟ ಹೆಜ್ಜೆಯಿಂದ ಕುಣಿಯಲು ಪ್ರಾರಂಭಿಸುತ್ತಾರೆ. ಹೀಗಾಗಿ ಪುಟಾಣಿಗಳ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಂಗದಲ್ಲಿ ಯಕ್ಷಗಾನ ಕಲಾವಿದರು ಕುಣಿಯುತ್ತಿದ್ದರೆ, ಯಕ್ಷಗಾನ ನೋಡಲು ಬಂದ ಪುಟಾಣಿಯೊಂದು ವೇದಿಕೆಯ ಮುಂಭಾಗದಲ್ಲಿ ತನ್ನದೇ ದಾಟಿಯಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೋವೊಂದು ಬಳಕೆದಾರರ ಹೃದಯ ಗೆದ್ದುಕೊಂಡಿದೆ.

ಕರಾವಳಿ ಗಂಡುಕಲೆ ಯಕ್ಷಗಾನ (yakshagana) ಎಲ್ಲರಿಗೂ ಕೂಡ ಚಿರಪರಿಚಿತ. ಕರಾವಳಿ ಜನರೊಂದಿಗೆ ಬೆಸೆದುಕೊಂಡಿರುವ ಈ ಕಲೆಯನ್ನು ಮಕ್ಕಳಿಂದ ಹಿಡಿದು ದೊಡ್ಡವರೆಗೂ ಎಲ್ಲರೂ ಇಷ್ಟ ಪಟ್ಟುತ್ತಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಯಕ್ಷಗಾನ ಕಲಾವಿದ (yakshagana artist) ರು ನಡೆಸುವ ತಮಾಷೆಯ ಸಂಭಾಷಣೆಗಳು ಸೇರಿದಂತೆ ಯಕ್ಷಗಾನಕ್ಕೆ ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ವರ್ಷದ ಪುಟಾಣಿ (little kid) ಯೊಂದು ಚಂಡೆಯ ಸದ್ದಿಗೆ ವೇದಿಕೆಯ ಮುಂಭಾಗದಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕುಣಿದಿದೆ.
yakshamanasa ಹೆಸರಿನ ಖಾತೆಯಲ್ಲಿ ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಒಂದು ವರ್ಷ ಪ್ರಾಯದ ಮಗುವಿನ ಯಕ್ಷಗಾನದ ಮೇಲಿನ ಸೆಳೆತ. ಯಕ್ಷಗಾನ ಕಲೆ ಅಂದ್ರೆ ಹಾಗೆ ಸಣ್ಣ ಮಗುವಿನಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಇಷ್ಟ ಪಡುವಂತಹ ಮಹಾನ್ ಕಲೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಯಕ್ಷಗಾನ ನೋಡಲು ಪುಟಾಣಿಯೊಂದು ಹೆತ್ತವರೊಂದಿಗೆ ಬಂದಿರುವುದನ್ನು ಕಾಣಬಹುದು. ಹೌದು, ರಂಗದಲ್ಲಿ ಯಕ್ಷಗಾನ ಪ್ರಸಂಗವು ನಡೆಯುತ್ತಿದ್ದು, ಕಲಾವಿದರು ವೇದಿಕೆಯ ಮೇಲೆ ಕುಣಿಯುತ್ತಿದ್ದಾರೆ. ಇತ್ತ ಪುಟಾಣಿ ಮಗುವೊಂದು ಚಂಡೆ, ತಾಳಕ್ಕೆ ತಕ್ಕಂತೆ ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಗೆ ತಾಯಿ ತನ್ನ ಮಗುವನ್ನು ಕರೆಯುವುದನ್ನು ನೋಡಬಹುದು.
ಇದನ್ನೂ ಓದಿ : ಟೀ ಎಸ್ಟೇಟ್‌ನಲ್ಲಿ ಮರಿಗಳೊಂದಿಗೆ ಪ್ರತ್ಯಕ್ಷವಾದ ಹುಲಿ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಹನ್ನೊಂದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು, ಬಳಕೆದಾರರು ಪುಟಾಣಿಯ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಇಂತಹ ಕಾರ್ಯಕ್ರಮಗಳಿಗೆ ಚಿಕ್ಕ ಮಕ್ಕಳನ್ನು ನಮ್ಮೊಟ್ಟಿಗೆ ಕರೆದುಕೊಂಡು ಹೋದರೆ ಸಂಸ್ಕೃತಿ ಸಂಸ್ಕಾರ ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಕ್ಕಳಿಗೆ ಯಕ್ಷಗಾನದತ್ತ ಆಸಕ್ತಿಯಿದ್ದರೆ ಆ ಬಗ್ಗೆ ಫೋಷಕರು ಗಮನ ವಹಿಸಿ, ಅವರನ್ನು ಹುರಿದುಂಬಿಸಿ ಎಂದಿದ್ದಾರೆ. ಇನ್ನೊಬ್ಬರು, ಈ ಕಂದಮ್ಮನಿಗೆ ಒಳ್ಳೆಯದು ಆಗಲಿ ಎಂದು ಹಾರೈಸಿದ್ದಾರೆ. ಇನ್ನು ಕೆಲವರು ಈ ಪುಟಾಣಿಯ ನೃತ್ಯಕ್ಕೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Thu, 29 May 25