Video: ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ

ಪ್ರಾಣಿ ಸಾಮ್ರಾಜ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ಬಹುಬೇಗನೆ ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತವೆ. ಇದೀಗ ಈ ದೃಶ್ಯವು ಆನೆ ಹಾಗೂ ಶ್ವಾನದ ಕಿತ್ತಾಟದ್ದಾಗಿದೆ. ತನಗೆ ಬೊಗಳಿದ ಶ್ವಾನಕ್ಕೆ ಆನೆಯೂ ಬುದ್ಧಿ ಕಲಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ
ವೈರಲ್‌ ವಿಡಿಯೋ
Image Credit source: Instagram

Updated on: Jan 20, 2026 | 4:01 PM

ಆನೆಗಳು (Elephants) ಮಾಡುವ ಚೇಷ್ಟೆಗಳು, ತುಂಟಾಟಗಳು ನೋಡುವುದೇ ಖುಷಿ. ಆನೆಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಈ ಆನೆಗಳಿಗೆ ಕೋಪಬಂದರೆ ಅತೀರೇಕವಾಗಿ ವರ್ತಿಸುತ್ತವೆ. ಸುಖಾ ಸುಮ್ಮನೆ ತನ್ನೊಂದಿಗೆ ಕಿರಿಕ್ ಮಾಡಲು ಬರುವ ಯಾರನ್ನು ಕೂಡ ಸುಮ್ಮನೆ ಬಿಡಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನಗೆ ಬೊಗಳಿದ ಶ್ವಾನವನ್ನು ಆನೆಯು ಒದ್ದು ಓಡಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಲೆಕ್ ಚೈರ್ಲಟ್ (lek_chailert) ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆನೆಗಳು ಸೇರಿರುವುದನ್ನು ನೀವು ನೋಡುತ್ತೀರಿ. ಅಲ್ಲೇ ಒಂದು ಬಿಳಿ ಶ್ವಾನವು ನಿಂತಿದೆ. ಈ ನಾಯಿಯೂ ಆನೆಯನ್ನು ನೋಡಿದ ತಕ್ಷಣ ಬೊಗಳಲು ಶುರು ಮಾಡುತ್ತದೆ. ಆದರೆ ಗಜರಾಜ ಪ್ರಾರಂಭದಲ್ಲಿ ಈ ಶ್ವಾನವನ್ನು ನಿರ್ಲಕ್ಷ್ಯ ಮಾಡುತ್ತದೆ. ನಾಯಿಯೂ ಮತ್ತೆ ಮತ್ತೆ ಬೊಗಳುತ್ತಿದ್ದಂತೆ ಆನೆಯು ಒದ್ದು ಬುದ್ಧಿ ಕಲಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಿನ್ನಲು ಹಣ್ಣು ನೀಡಿದ ಮಹಿಳೆಯೊಂದಿಗೆ ಸೇಬು ಹಣ್ಣಿಗಾಗಿ ಹಠ ಹಿಡಿದು ನಿಂತ ಮರಿಯಾನೆ

ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನೋಡಲು ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, 01% ದಾಳಿ ಹಾಗೂ 0% ಡ್ಯಾಮೇಜ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನಗೆ ಈ ರೀತಿ ಬ್ಯಾಕ್ ಕಿಕ್ ಇಷ್ಟ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:58 pm, Tue, 20 January 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us