AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯ ಅನಾರೋಗ್ಯದ ವೇಳೆ ವರ್ಕ್ ಫ್ರಮ್ ಹೋಮ್ ಕೊಟ್ಟದ್ದಕ್ಕೆ ಮ್ಯಾನೇಜರ್‌ಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿ

ತಂದೆ ತಾಯಿಯನ್ನು ನೋಡಿಕೊಳ್ಳೋದು ಮಕ್ಕಳ ಕರ್ತವ್ಯ. ಆದರೆ ದೂರದಲ್ಲಿ ಊರಿನಲ್ಲಿ ನೆಲೆಸಿರುವವರಿಗೆ ತಂದೆ ತಾಯಿಯ ಜತೆಗೆ ಇದ್ದು ಅವರ ಆರೋಗ್ಯ ನೋಡಿಕೊಳ್ಳಲು ಸಾಧ್ಯವಾಗಲ್ಲ. ಆದರೆ ಇದೀಗ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ಟೆಕ್ಕಿಯೊಬ್ಬರು ಆಧಾರವಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ವರ್ಕ್ ಫ್ರಮ್ ಹೋಮ್ ಕೆಲಸ. ತಮ್ಮ ಅನುಭವ ಹಂಚಿಕೊಂಡ ಉದ್ಯೋಗಿಯ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ತಂದೆಯ ಅನಾರೋಗ್ಯದ ವೇಳೆ ವರ್ಕ್ ಫ್ರಮ್ ಹೋಮ್ ಕೊಟ್ಟದ್ದಕ್ಕೆ ಮ್ಯಾನೇಜರ್‌ಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Aug 23, 2026 | 2:45 PM

Share

ಕೊರೊನಾ ಬಳಿಕ ‘ವರ್ಕ್ ಫ್ರಂ ಹೋಮ್’ ಅನ್ನೋದು ಕಾಮನ್‌ ಆಗಿ ಬಿಟ್ಟಿದೆ. ಆಫೀಸಿಗೆ ಹೋಗಿ ಕೆಲಸ ಮಾಡೋದಕ್ಕಿಂತ ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್ ಎನ್ನುವವರೇ ಹೆಚ್ಚು. ಇದೀಗ ಟೆಕ್ಕಿಯೊಬ್ಬರಿಗೆ ವರ್ಕ್ ಫ್ರಮ್ ಹೋಮ್ ಕುಟುಂಬದ ಜತೆಗೆ ಸಮಯ ಕಳೆಯಲು ನೆರವಾಗಿದೆ. ತಂದೆಗೆ ಹೃದಯಾಘಾತವಾದ ಬಳಿಕ  ಎರಡು ತಿಂಗಳು ಕಾಲ ಊರಲ್ಲೇ ಇದ್ದು ಆಫೀಸ್ ವರ್ಕ್ ಜತೆಗೆ, ಅವರ ಆರೈಕೆ ಮಾಡಿದ್ದಾರೆ. ವರ್ಕ್ ಫ್ರಮ್ ಹೋಮ್‌ನಿಂದಲೇ ಎಲ್ಲವೂ ಸಾಧ್ಯವಾಯ್ತು ಎಂದು ಹೇಳಿದ್ದಾರೆ. ಈ ಪೋಸ್ಟ್ ವೈರಲ್ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೆಪಿ ಸ್ಪೀಕ್ (kp speaks) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ವರ್ಕ್ ಫ್ರಮ್ ಹೋಮ್ ನೀತಿ ಅನ್ನೋದು ಕಾರ್ಪೊರೇಟ್ ಉದ್ಯೋಗಿಗಳಿಗೆ ಪ್ರಯೋಜನದಾಯಕ. ಕೆಲವು ತಿಂಗಳ ಹಿಂದೆ ನನ್ನ ತಂದೆಗೆ ಹೃದಯಾಘಾತವಾಯ್ತು. ರಜೆ ಹಾಗೂ ಕೆಲಸದ ಬಗ್ಗೆ ಯೋಚನೆ ಮಾಡದೇನೆ ಊರಿಗೆ ತೆರಳಿದೆ. ಎರಡು ತಿಂಗಳ ಕಾಲ ತಂದೆ ತಾಯಿಯ ಜತೆಗೆ ಇದ್ದು ಅವರ ಚಿಕಿತ್ಸೆಯ ಬಳಿಕವು ಔಷಧಿ ನಿರ್ವಹಣೆ ಮಾಡಿದೆ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಆರೋಗ್ಯದಲ್ಲಿ ಚೇತರಿಕೆಯ ಕಾಣಲು ವೈದ್ಯರ ಚಿಕಿತ್ಸೆಯಿದ್ದರೆ ಸಾಲದು,  ಕುಟುಂಬದ ಬೆಂಬಲವೂ ಅತ್ಯಗತ್ಯವಾಗಿ ಬೇಕು. ಪೋಷಕರಿಗೆ ಅಗತ್ಯವಿದ್ದ ಸಮಯದಲ್ಲಿ ಅವರ ಜೊತೆ ಇರಲು ಸಾಧ್ಯವಾಗಿದ್ದಕ್ಕೆ ನನ್ನ ಮ್ಯಾನೇಜರ್ ಹಾಗೂ ಕಂಪನಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಅವಶ್ಯಕತೆ ಇದ್ದಾಗ ನನ್ನ ತಂದೆ ತಾಯಿಗೆ ನಾನು ಇದ್ದೆ. ಬೇರೆ ಉದ್ಯೋಗಗಳಲ್ಲಿ ಈ ರೀತಿ ಅವಕಾಶ ಇರಲ್ಲ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮುಖಕ್ಕೆ ಫೇಸ್ ಪ್ಯಾಕ್‌ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್‌ ಹಾಜರಾದ ಜೆನ್ ಝೆಡ್ ಉದ್ಯೋಗಿ

ಈ ಪೋಸ್ಟ್ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವರ್ಕ್ ಫ್ರಮ್ ಹೋಮ್ ಕಲ್ಚರ್ ಎಲ್ಲರಿಗೂ ಸ್ವಾತಂತ್ರ್ಯ ನೀಡಿದೆ ಎಂದಿದ್ದಾರೆ. ಇನ್ನೊಬ್ಬರು, ಜಾಗ್ರತೆಯಿಂದ ಇರಿ. ಎಲ್ಲವೂ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ವರ್ಕ್ ಫ್ರಮ್ ಹೋಮ್ ಸಿಕ್ಕಿದ್ದು ನಿಮ್ಮ ಅದೃಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು