ಮದುವೆ ಸಮಾರಂಭಗಳಲ್ಲಿ ಮದುಮಕ್ಕಳು ಸೇರಿದಂತೆ, ವಿವಾಹ ಸಮಾರಂಭಕ್ಕೆ ಆಗಮಿಸುವ ಪ್ರತಿಯೊಬ್ಬರು ಕೂಡಾ ಸೀರೆ, ಲೆಹಂಗಾ, ಪಂಚೆ, ಶೇರ್ವಾನಿ ಇತ್ಯಾದಿ ಸಾಂಪ್ರದಾಯಿಕ ಉಡುಗೆಗಳನ್ನೇ ತೊಡುತ್ತಾರೆ. ಆದ್ರೆ ಇತ್ತೀಚಿಗೆ ಲಕ್ನೋದ ವಧುವೊಬ್ಬಳು ಸಾಂಪ್ರದಾಯಿಕ ಉಡುಗೆಗಳಾದಂತಹ ಸೀರೆ, ಲೆಹಂಗಾ ಬಿಟ್ಟು ಹಳದಿ ಬಣ್ಣದ ಬನಾರಸಿ ಬಿಕಿನಿ ತೊಟ್ಟು ಹಸೆಮಣೆ ಏರಿದಂತಹ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಫೋಟೋ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಲಕ್ನೋದ ವಧು ಬಿಕಿನಿ ತೊಟ್ಟು ಹಸೆಮಣೆ ಏರಿದ್ದು ನಿಜಾನಾ? ಈ ವೈರಲ್ ಫೋಟೊದ ಹಿಂದಿನ ಸತ್ಯಾಂಶ ಇಲ್ಲಿದೆ.
ಇತ್ತೀಚಿಗಂತೂ ಹೆಚ್ಚಾಗಿ ಯಾವುದೋ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಎಐ ತಂತ್ರಜ್ಞಾನದಿಂದ ರಚಿತವಾದ ಡೀಪ್ ಫೇಕ್ ವಿಡಿಯೋಗಳು, ಫೋಟೋಗಳೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಸೆಲೆಬ್ರಿಟಿಗಳಿಗ ಡೀಪ್‌ಫೇಕ್ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವಧು ಬಿಕಿನಿ ತೊಟ್ಟು ಹಸೆಮಣೆ ಏರಿದಂತಹ ಫೋಟೋ ಕೂಡಾ ಎಐ ರಚಿತ ಫೋಟೋವಾಗಿದ್ದು, ಇದು ನೈಜ ಘಟನೆಯಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಬೆಡಗಿಯರು; ವಿಡಿಯೋ ವೈರಲ್
Wtf is a BANARASI BIKINI ??????? pic.twitter.com/mxI53Ynqd2
— Simmi_ (@hi_samie) November 28, 2024
ಕೆಲ ದಿನಗಳ ಹಿಂದೆ ಶೇರ್ವಾನಿ ಧರಿಸಿ ನಿಂತಿದ್ದ ವರನ ಪಕ್ಕದಲ್ಲಿ ಹಳದಿ ಬಣ್ಣದ ಬನಾರಸಿ ಬಿಕಿನಿ ತೊಟ್ಟು ನಿಂತಿದ್ದ ವಧು ವರಮಾಲೆಯನ್ನು ಕೈಯಲ್ಲಿ ಹಿಡಿದು ನಿಂತಿದ್ದ ಫೋಟೋ ವೈರಲ್ ಆಗಿತ್ತು. ಇದು ಲಕ್ನೋದ ವಧು ಎಂದು ಸುಳ್ಳು ಸುದ್ದಿಯನ್ನು ಕೂಡಾ ಹಬ್ಬಿಸಲಾಗಿತ್ತು. ವಾಸ್ತವದಲ್ಲಿ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಎಐ ರಚಿತ ಫೋಟೋವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ