Viral: ಪ್ರೇಮಿಗಳ ಜಗಳ ಬಿಡಿಸಲು ಹೋಗಿ ತಾನೇ ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್; ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್

Viral Video: ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬ ತಾನೇ ಜಗಳಕ್ಕೆ ನಿಂತು ಹಲ್ಲೆ ಮಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

Viral: ಪ್ರೇಮಿಗಳ ಜಗಳ ಬಿಡಿಸಲು ಹೋಗಿ ತಾನೇ ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್; ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್
ಡೆಲಿವರಿ ಯವಕ ಹಲ್ಲೆ ನಡೆಸುತ್ತಿರುವ ದೃಶ್ಯ
Edited By:

Updated on: Apr 02, 2022 | 10:05 AM

ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬ ತಾನೇ ಜಗಳಕ್ಕೆ ನಿಂತು ಹಲ್ಲೆ ಮಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಭುವನೇಶ್ವರದಲ್ಲಿ ಘಟನೆ ನಡೆದಿದ್ದು, ಹಲವರು ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ವಿಡಿಯೋದಲ್ಲಿ ಯುವತಿಯೋರ್ವಳು ಗೆಳೆಯನೊಂದಿಗೆ ಜಗಳ‌ ಮಾಡುತ್ತಿರುವ ದೃಶ್ಯವಿದೆ. ಪಾರ್ಕ್ ಒಂದರ ಹೊರಗೆ ಗಲಾಟೆ ನಡೆದಿದ್ದು, ಯುವತಿ ಗೆಳೆಯನಿಗೆ ಮಾತಿನ ಮೂಲಕ‌ ನಿಂದಿಸುತ್ತಿದ್ದಾರೆ. ಕೆಲ ಸಮಯದ ನಂತರ ಕ್ರೋಧಗೊಂಡಿದ್ದ ಯುವತಿ ಕಲ್ಲನ್ನು ತೆಗೆದುಕೊಂಡು ಗೆಳೆಯನ ವಾಹನಕ್ಕೆ ಹಾನಿ‌ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ಇವಿಷ್ಟು ದೃಶ್ಯ ಸೆರೆಯಾಗಿದ್ದು, ಜನರು ಜಗಳ ತಪ್ಪಿಸಲು ಮುಂದಾಗದೇ, ನೋಡುತ್ತಿರುವ ದೃಶ್ಯವೂ ಸೆರೆಯಾಗಿದೆ.

ಮತ್ತೊಂದು ವಿಡಿಯೋದಲ್ಲಿ ಜಗಳ ನಿಲ್ಲಿಸಲು ಹೋದ ಫುಡ್ ಡೆಲಿವರಿ ಬಾಯ್ ತಾನೇ ಜಗಳಕ್ಕೆ ನಿಂತಿದ್ದಾನೆ.‌ ಯುವತಿಯನ್ನು ಸಮಾಧಾನ ಮಾಡಲು ಆತ ಮುಂದಾಗಿದ್ದು, ಆದರೆ ಯುವತಿ ನಿಂದಿಸಿದ್ದಾಳೆ.‌ ಇದರಿಂದ ಆತ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಡೆಲಿವರಿ ಯುವಕ ಯುವತಿಗೆ ತೀವ್ರವಾಗಿ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದ್ದು, ನಂತರ ಸಮೀಪದಲ್ಲಿದ್ದ ಜನರು ಈರ್ವರನ್ನೂ ಸಮಾಧಾನಪಡಿಸಿದ್ದಾರೆ. ಯುವತಿಯ ಮೇಲೆ ಹಲ್ಲೆ ನಡೆಸಿದ ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ‌.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೆಲಿವರಿ ಯುವಕ ಹಾಗೂ ಯುವತಿ ಯಾವುದೇ ದೂರು ನೀಡಿಲ್ಲ. ಆದರೆ ಭುವನೇಶ್ವರ ಡಿಸಿಪಿ ಉಮಾಶಂಕರ್ ದಾಸ್ ಈ ಬಗ್ಗೆ ಪ್ರತಿಕ್ರಿಯಿಸಿ, ಎರಡೂ ಕಡೆಯುವರು ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದರಿಂದ ಈರ್ವರ ಬಗ್ಗೆಯೂ ಕೇಸು ದಾಖಲಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ಯಾವ ಕ್ಷೇತ್ರದವರು ಯಾವ ಬಣ್ಣದ ಹೆಲ್ಮೆಟ್ ಧರಿಸುತ್ತಾರೆ? ಭಾರತದಲ್ಲಿ ಇದು ಕಡ್ಡಾಯವೇ? ಇಲ್ಲಿದೆ ಕುತೂಹಲಕರ ಮಾಹಿತಿ

ಆರ್ಯನ್ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್​ ಸಾವು; ವಕೀಲರಿಂದ ಮಾಹಿತಿ

Published On - 10:02 am, Sat, 2 April 22