Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

Trending Story: ಈ ಮಾಂಸದಂಗಡಿಯಲ್ಲಿ ಮೇಕೆ, ಟರ್ಕಿ, ಬಾತುಕೋಳಿ, ಮೊಲ, ಕ್ವಿಲ್, ಬ್ಲ್ಯಾಕ್ ಚಿಕನ್ ಮಾಂಸವನ್ನು ಮಾರಾಟ ಮಾಡಲಾಗುತ್ತದೆ.

Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
ಸಾಂದರ್ಭಿಕ ಚಿತ್ರ
Edited By:

Updated on: Jul 30, 2021 | 7:22 PM

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಗಗನಕ್ಕೇರಿರುವುದು ಗೊತ್ತೇ ಇದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಮೀಮ್ಸ್​​ಗಳನ್ನು ನೀವು ನೋಡಿರುತ್ತೀರಿ. ಇದರ ಹೊರತಾಗಿಯೂ ನೈಜ ಘಟನೆಯೊಂದು ಇದೀಗ ಭಾರೀ ಸುದ್ದಿಯಾಗುತ್ತಿದೆ. ಅದೇನೆಂದರೆ ಮಾಂಸ ಖರೀದಿಸಿದರೆ ಪೆಟ್ರೋಲ್ ಫ್ರೀ.

ಹೌದು, ದುಬಾರಿ ದುನಿಯಾದಲ್ಲಿ ಹೀಗೆ ಪೆಟ್ರೋಲ್ ನೀಡುತ್ತಿರುವುದು ಮಧುರೈ ಜಿಲ್ಲೆಯ ತಿರುಮಂಗಲಂನಲ್ಲಿನ ಮಖಿಲ್ ಎಂಬ ಮಾಂಸದಂಗಡಿ. ತಮ್ಮ ಅಂಗಡಿಯಲ್ಲಿ ಒಂದು ಕೆ.ಜಿ ಮಾಂಸ ಖರೀದಿಸಿದರೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲಾಗುತ್ತದೆ ಎಂದು ಆಫರ್ ನೀಡಿದ್ದಾರೆ.

ಜುಲೈ ತಿಂಗಳ ಆಫರ್ ಅಡಿಯಲ್ಲಿ ಮಖಿಲ್ ಮಾಂಸದಂಗಡಿ ಮಾಂಸದೊಂದಿಗೆ ಒಂದು ಲೀಟರ್ ಪೆಟ್ರೋಲ್ ಟೋಕನ್ ನೀಡುತ್ತಿದ್ದಾರೆ. ಈ ಟೋಕನ್​ನ್ನು ನೀಡಿ ಸ್ಥಳೀಯ ಪೆಟ್ರೋಲ್ ಬಂಕ್​ನಲ್ಲಿ ಒಂದು ಲೀಟರ್ ಪೆಟ್ರೋಲ್ ಖರೀದಿಸಬಹುದು. ಇಂತಹದೊಂದು ವಿಭಿನ್ನ ಕೊಡುಗೆ ನೀಡುವ ಮೂಲಕ ಮಖಿಲ್ ಮಾಂಸದಂಗಡಿ ಭರ್ಜರಿ ವ್ಯಾಪರಕ್ಕಿಳಿದಿದೆ.

ಈ ಆಫರ್​ಗೆ ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಅಂಗಡಿಯ ಮಾಲೀಕ ಚಂದ್ರನ್. 2 ವರ್ಷಗಳ ಹಿಂದೆ ನಾನು ಈ ಅಂಗಡಿ ಆರಂಭಿಸಿದ್ದೆ, ಆವಾಗಲೂ ಕೂಡ ನಾನು ಹಲವು ಆಫರ್​ಗಳನ್ನು ನೀಡಿದ್ದೆ. ಆ ವೇಳೆ 1 ಕೆಜಿ ಮಾಂಸಕ್ಕೆ 12 ಮೊಟ್ಟೆಗಳನ್ನು ಉಚಿತವಾಗಿ ನೀಡುತ್ತಿದ್ದೆ. ಇದೀಗ ದುಬಾರಿಯಾಗಿರುವ ಪೆಟ್ರೋಲ್ ನೀಡುತ್ತಿರುವ ನೀಡುತ್ತಿರುವುದಾಗಿ ಚಂದ್ರನ್ ತಿಳಿಸಿದ್ದಾರೆ.

ಈ ಮಾಂಸದಂಗಡಿಯಲ್ಲಿ ಮೇಕೆ, ಟರ್ಕಿ, ಬಾತುಕೋಳಿ, ಮೊಲ, ಕ್ವಿಲ್, ಬ್ಲ್ಯಾಕ್ ಚಿಕನ್ ಮಾಂಸವನ್ನು ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ಇದೀಗ ಒಂದು ಲೀಟರ್ ಪೆಟ್ರೋಲ್ ಉಚಿತ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಒಟ್ಟಿನಲ್ಲಿ ಮಖಿಲ್ ಮಾಂಸದಂಗಡಿಯ ಮುಂದೆ ಇದೀಗ ಸಣ್ಣ ಟ್ರಾಫಿಕ್ ಜಾಮ್ ಕೂಡ ಕಂಡು ಬರುತ್ತಿದೆಯಂತೆ. ಈ ರಸ್ತೆಯಲ್ಲಿ ಹೋಗುವ ವಾಹನ ಚಾಲಕರು ಒಂದು ಬ್ರೇಕ್ ಹಾಕಿ ಮಾಂಸದ ಜೊತೆಗೆ ಪೆಟ್ರೋಲ್ ಟೋಕನ್ ಪಡೆದು ಹೋಗುವುದು ಅಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(for a kilo of meat one liter of petrol is free)