AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಈ ದೇಶದಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ರಾತ್ರಿ ಓಡಾಡಬಹುದು; ಭಾರತೀಯ ಮಹಿಳೆ ಹೀಗೆಂದಿದ್ದೇಕೆ?

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೇಫ್ಟಿ ಅನ್ನೋದೇ ಇಲ್ಲ. ಯಾರನ್ನು ನಂಬುವುದು, ಬಿಡುವುದು ತಿಳಿಯುವುದೇ ಇಲ್ಲ. ಹೀಗಾಗಿರುವಾಗ ಫ್ರಾನ್ಸ್ ನಲ್ಲಿ ಭಾರತೀಯ ಮಹಿಳೆಗೆ ಸುರಕ್ಷಿತ ಅನುಭವವಾಗಿದೆ. ಬೆಳಗಿನ ಜಾವ 1 ಗಂಟೆಗೆ ಒಂಟಿಯಾಗಿ ನಡೆದುಕೊಂಡಿದ್ದು, ತಾನು ಇಲ್ಲಿ ಸೇಫ್ ಎಂದು ಹೇಳಿದ್ದಾರೆ. ಭಾರತೀಯ ಮಹಿಳೆ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಈ ದೇಶದಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ರಾತ್ರಿ ಓಡಾಡಬಹುದು; ಭಾರತೀಯ ಮಹಿಳೆ ಹೀಗೆಂದಿದ್ದೇಕೆ?
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:May 27, 2026 | 11:52 AM

Share

ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ, ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಹೀಗಾಗಿ ಎಷ್ಟೋ ಹೆಣ್ಣು ಮಕ್ಕಳು ರಾತ್ರಿ ಬಿಡಿ, ಹಗಲಿನಲ್ಲಿ ಓಡಾಡಲು ಭಯ ಪಡ್ತಾರೆ. ಆದರೆ ಈ ವಿಷ್ಯದಲ್ಲಿ ಭಾರತಕ್ಕಿಂತ ಫ್ರಾನ್ಸ್ (France) ಹೆಣ್ಣು ಮಕ್ಕಳಿಗೆ ಸೇಫ್ ಅಂತೆ. ಫ್ರಾನ್ಸ್ ನಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಹಂಚಿಕೊಂಡ ವಿಡಿಯೋದಲ್ಲಿ ರಾತ್ರಿ 1 ಗಂಟೆಗೆ ಸುಮಾರಿಗೆ ಮನೆಗೆ ಹಿಂದಿರುಗುವಾಗ ಸುರಕ್ಷಿತ ಭಾವನೆಯ ಅನುಭವವಾಗಿದೆ ಎಂದು ಹೇಳಿದ್ದಾರೆ. ನೆಟ್ಟಿಗರು ಮಹಿಳೆಯ ಮಾತು ಕೇಳಿ ಶಾಕ್‌ ಆಗಿದ್ದಾರೆ.

almostfrench_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಫ್ಯಾನ್ಸ್ ಮಹಿಳೆಯರಿಗೆ ಎಷ್ಟು ಸೇಫ್ ಅನ್ನೋದು ಭಾರತೀಯ ಮಹಿಳೆ ಹೇಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋದ ಶೀರ್ಷಿಕೆಯಲ್ಲಿ ಭಾರತೀಯ ಹುಡುಗಿಯರು ಇಷ್ಟು ಸುರಕ್ಷಿತವಾಗಿರಬಹುದಾದ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪ್ ನಲ್ಲಿ ಫ್ರಾನ್ಸ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ತಡರಾತ್ರಿ ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಇದೇ ವೇಳೆ ನನ್ನ ಹೆತ್ತವರು ಈ ವೀಡಿಯೊವನ್ನು ಎಂದಾದರೂ ನೋಡಿದರೆ ಅವರು ನನ್ನೊಂದಿಗೆ ಮಾತನಾಡುವುದಿಲ್ಲ, ಆದರೆ ನೋಡಿ, ಈಗ ರಾತ್ರಿ 1:00 ಗಂಟೆ. ನಾನು ಮನೆಗೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದೇನೆ, ತುಂಡುಡುಗೆ ಧರಿಸಿದ್ದೇನೆ, ಹಾಗೂ ನನಗೆ ತೊಂದರೆ ನೀಡಲು ಇಲ್ಲಿ ಯಾರೂ ಇಲ್ಲ. ಅದಕ್ಕಾಗಿಯೇ ನನಗೆ ಫ್ರಾನ್ಸ್ ಇಷ್ಟ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಲಂಡನ್‌ನಲ್ಲಿ 100 ರೂ ದಿನಸಿ ಶಾಪಿಂಗ್ ಚಾಲೆಂಜ್‌ ಸ್ವೀಕರಿಸಿದ ಭಾರತೀಯ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಎಲ್ಲಾ ಸಂದರ್ಭ ಒಂದೇ ರೀತಿ ಇರಲ್ಲ, ನಿಮ್ಮ ಸೇಫ್ಟಿಗಾಗಿ ಸುರಕ್ಷತಾ ಸಾಧನಗಳನ್ನು ಇಟ್ಟುಕೊಳ್ಳಿ. ಏಕೆಂದರೆ ಕೆಟ್ಟ ಜನರು ಎಲ್ಲೆಡೆ ಇದ್ದಾರೆ. ದಯವಿಟ್ಟು ಸುರಕ್ಷಿತರಾಗಿರಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ಕೂಡ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದೇನೆ ಆದರೆ ಅದು ಅಷ್ಟು ಸುರಕ್ಷಿತವಲ್ಲ ಎಂದಿದ್ದಾರೆ. ಮತ್ತೊಬ್ಬರು, ಫ್ರಾನ್ಸ್‌ನಲ್ಲಿ ಎಲ್ಲೆಡೆ ಈ ಸುರಕ್ಷತೆ ಅನುಭವ ಒಂದೇ ರೀತಿ ಇಲ್ಲದಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:51 am, Wed, 27 May 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More