AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋರುತಿಹುದು ಏರ್​ಪೋರ್ಟ್ ಮಾಳಿಗಿ! ಭಾರಿ ಮಳೆಗೆ ಮತ್ತೆ ಸೋರಿದ ಟರ್ಮಿನಲ್ 1ರ ಮೇಲ್ಛಾವಣಿ, ವಿಡಿಯೋ ವೈರಲ್

ಸೋರುತಿಹುದು ಏರ್​ಪೋರ್ಟ್ ಮಾಳಿಗಿ! ಭಾರಿ ಮಳೆಗೆ ಮತ್ತೆ ಸೋರಿದ ಟರ್ಮಿನಲ್ 1ರ ಮೇಲ್ಛಾವಣಿ, ವಿಡಿಯೋ ವೈರಲ್

ನವೀನ್ ಕುಮಾರ್ ಟಿ
| Edited By: |

Updated on: May 27, 2026 | 7:45 AM

Share

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಟರ್ಮಿನಲ್-1ರ ಮೇಲ್ಛಾವಣಿ ಮತ್ತೆ ಸೋರಿದ್ದು, ಒಳಗೆಲ್ಲ ನೀರು ತುಂಬಿ ಪ್ರಯಾಣಿಕರು ಪರದಾಡುವಂತಾಯಿತು. ಭಾರಿ ಮಳೆ ಹಾಗೂ ಟರ್ಮಿನಲ್ ಒಳಗೆ ನೀರು ಸೋರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ದೇವನಹಳ್ಳಿ, ಮೇ 27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಹಾಗೂ ರಾತ್ರಿ ಭಾರಿ ಮಳೆ ಸುರಿದಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವ್ಯಾಪ್ತಿಯಲ್ಲೂ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳು ಸೃಷ್ಟಿಯಾದವು. ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ರನ್‌ವೇ ಸ್ಪಷ್ಟವಾಗಿ ಕಾಣಿಸದೆ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾಯಿತು. ಅನೇಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು.

ಏರ್‌ಪೋರ್ಟ್‌ನ ಟರ್ಮಿನಲ್-1 ರ ಮೇಲ್ಛಾವಣಿಯಲ್ಲಿ ನೀರು ಸೋರಲು ಆರಂಭಿಸಿ ಟರ್ಮಿನಲ್ ಒಳಗೆಲ್ಲ ನೀರು ತುಂಬಿಕೊಂಡು ಪ್ರಯಾಣಿಕರು ಪರದಾಡುವಂತಾಯಿತು. ಟರ್ಮಿನಲ್ ಛಾವಣಿ ಸೋರುತ್ತಿರುವ ಮತ್ತು ಒಳಗೆ ಜಲಪ್ರವಾಹ ಸಂಭವಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ ಕೆಲವು ಬಾರಿ ಟರ್ಮಿನಲ್ ಮೇಲ್ಛಾವಣಿ ಸೋರಿದ ಬಗ್ಗೆ ವರದಿಯಾಗಿದ್ದು, ವಿಡಿಯೋಗಳೂ ವೈರಲ್ ಆಗಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us