ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಾಯು ಮಾಲಿನ್ಯದ ಜೊತೆಜೊತೆಗೆ ತೆರಿಗೆ ಹಣ ಕೂಡಾ ಹೆಚ್ಚಳವಾಗಿದ್ದು, ಈ ಎರಡೂ ಸಮಸ್ಯೆಗಳ ಜೊತೆಜೊತೆಗೆ ರಾಜಕಾರಣಿಗಳ ಅವಸ್ಥೆಗಳು ಕೂಡ ಜನಸಾಮಾನ್ಯರಿಗೆ ತಲೆ ಬಿಸಿಯಾಗಿ ಪರಿಣಾಮಿಸಿದೆ. ವಿಶೇಷವಾಗಿ ಈ ಮಾಲಿನ್ಯದ ಕಾರಣದಿಂದಾಗಿ ಜನ ಉತ್ತಮ ಗುಣಮಟ್ಟದ ಜೀವನಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ನನಗೆ ಇದ್ಯಾವ ಸಮಸ್ಯೆಗಳ ತಲೆ ಬಿಸಿಯೂ ಬೇಡವೆಂದು ಇಲ್ಲೊಬ್ರು ವ್ಯಕ್ತಿ ಶಾಶ್ವತವಾಗಿ ಪುಣ್ಯ ಭೂಮಿ ಭಾರತವನ್ನೇ ಬಿಟ್ಟು ಹೋಗುವ ನಿರ್ಧಾರವನ್ನು ಮಾಡಿದ್ದಾರೆ. ಹೌದು ನಾನು 2025 ರಲ್ಲಿ ಶಾಶ್ವತವಾಗಿ ಭಾರತ ಬಿಟ್ಟು ಸಿಂಗಾಪುರಕ್ಕೆ ಶಿಫ್ಟ್ ಆಗ್ತಿದ್ದೇನೆ. ನೀವೇನಾದರೂ ಹಣವಂತರಾಗಿದ್ದರೆ ದಯವಿಟ್ಟು ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.
ಹೆಚ್ಚುತ್ತಿರುವ ಮಾಲಿನ್ಯ, ತೆರಿಗೆ ಹಣದ ಹೆಚ್ಚಳ, ರಾಜಕಾರಣಿಗಳ ಅವಸ್ಥೆ ಇವೆಲ್ಲದರಿಂದ ಹತಾಶರಾದ ಗೋವಾ ಮೂಲದ ವ್ಯಕ್ತಿ ಸಿದ್ಧಾರ್ಥ್ ಸಿಂಗ್ ಗೌತಮ್ 2025ರಲ್ಲಿ ಭಾರತವನ್ನು ಬಿಟ್ಟು ಶಾಶ್ವತವಾಗಿ ಸಿಂಗಾಪುರಕ್ಕೆ ಶಿಪ್ಟ್ ಆಗಲು ನಿರ್ಧರಿಸಿದ್ದಾರೆ. ಜೊತೆಗೆ ಹಣವಂತರಾಗಿದ್ದರೆ ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ ಎಂಬ ಸಲಹೆಯನ್ನು ಕೂಡಾ ನೀಡಿದ್ದಾರೆ.
I will leave India and permanently shift to Singapore in 2025
Documentation in process. I cannot stand the politicians here
Can’t pay 40% tax and breathe polluted air while nobody takes accountability
My honest suggestion would be that if you have good money, please leave
— Siddharth Singh Gautam 🇮🇳 (@Sidcap_100) December 1, 2024
ಸಿದ್ಧಾರ್ಥ್ ಸಿಂಗ್ (sidacap_100) ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು 2025 ರಲ್ಲಿ ಭಾರತವನ್ನು ತೊರೆದು ಶಾಶ್ವತವಾಗಿ ಸಿಂಗಾಪುರಕ್ಕೆ ಶಿಫ್ಟ್ ಆಗಲಿದ್ದೇನೆ. ಇದರ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದೆ. ರಾಜಕಾರಣಿಗಳ ಅವಸ್ಥೆ, 40% ತೆರಿಗೆ, ಕಲುಷಿತ ಗಾಳಿ ಇವೆಲ್ಲದರಿಂದ ಬೇಸತ್ತು ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಸಲಹೆ ಏನೆಂದರೆ ನೀವೇನಾದ್ರು ಹಣವಂತರಾಗಿದ್ದರೆ ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ” ಎಂಬ ಸುದೀರ್ಘ ಬರಹವನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆಕಾಶದಿಂದ ಹೊಲಕ್ಕೆ ಬಿದ್ದ ನಿಗೂಢ ಸಾಧನ, ಅದರೊಳಗೆ ಏನಿತ್ತು ಗೊತ್ತಾ?
ಡಿಸೆಂಬರ್ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ಏನೇ ಹೇಳಿ ನಾನು ಯಾವುದೇ ಕಾರಣಕ್ಕೂ ನನ್ನ ತಾಯ್ನಾಡನ್ನು ಬಿಟ್ಟು ಹೋಗಲಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರತಿಯೊಬ್ಬರೂ ಕೂಡಾ ಉತ್ತಮ ಗುಣಮಟ್ಟದ ಜೀವನಕ್ಕೆ ಅರ್ಹರು. ನೀವು ಶುದ್ಧ ಗಾಳಿಗಾಗಿ ಬೇರೆಡೆ ಸ್ಥಳಾಂತರಗೊಳ್ಳುತ್ತೇನೆ ಎಂದು ಹೇಳಿದ್ದರಲ್ಲಿ ಯಾವುದೇ ತಪಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ