ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತಿವೆ ಸರೋವರಗಳಿಗೆ ಎಸೆಯುತ್ತಿರುವ ಗೋಲ್ಡ್​ ಫಿಶ್​

| Updated By: Digi Tech Desk

Updated on: Jul 13, 2021 | 1:12 PM

Gold Fish: ಸರೋವರಗಳಲ್ಲಿ ಅಥವಾ ಸ್ಥಳೀಯ ಜಲಮಾರ್ಗಗಳಲ್ಲಿ ಮೀನುಗಾರನು ಹಿಡಿದ ಗೋಲ್ಡ್​ ಫಿಶ್​ಗಳನ್ನು ಮತ್ತೆ ಸರೋವರಕ್ಕೆ ಬೀಡಕೂಡದು ಎಂದು ವರ್ಜೀನಿಯಾದ ವನ್ಯಜೀವಿ ಅಧಿಕಾರಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ.

ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತಿವೆ ಸರೋವರಗಳಿಗೆ ಎಸೆಯುತ್ತಿರುವ ಗೋಲ್ಡ್​ ಫಿಶ್​
ಗೋಲ್ಡ್​ ಫಿಶ್​
Follow us on

ವಿನ್ನೇಸೋಟದ ಸ್ಥಳೀಯ ಸರೋವರಗಳಲ್ಲಿ ಬೃಹತ್​ ಗಾತ್ರದ ಚಿನ್ನ ಮೀನುಗಳು ಬಲೆಗೆ ಸಿಕ್ಕಿಬಿದ್ದಿವೆ. ವಿಷಯ ತಿಳಿದ ಅಧಿಕಾರಿಗಳು ಸಾಕು ಮೀನುಗಳನ್ನು ಸ್ಥಳೀಯ ಜಲಮಾರ್ಗಗಳಿಗೆ ಬಿಡುವುದನ್ನು ನಿಲ್ಲಿಸುವಂತೆ ಎಂದು ಮನವಿ ಮಾಡಿದ್ದಾರೆ. ಗೋಲ್ಡ್​ ಫಿಶ್​​ಗಳು ಸಾಮಾನ್ಯ ಗಾತ್ರಕ್ಕಿಂತ ಹಲವಾರು ಪಟ್ಟು ಬೆಳೆಯುತ್ತವೆ. ಇವು ಸ್ಥಳೀಯ ಜಲಮಾರ್ಗಗಳಲ್ಲಿ ವಾಸುಸುತ್ತಿರುವ ಮೀನುಗಳ ಪ್ರಬೇಧಗಳಿಗೆ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಸಾಕು ಮೀನುಗಳನ್ನು ಸ್ಥಳೀಯ ಸರೋವರಗಳಲ್ಲಿ ಬಿಡುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ.

ಅಕ್ವೇರಿಯಮ್​ನಲ್ಲಿ ಸಾಕಿದ ಗೋಲ್ಡ್​ ಫಿಶ್​ಗಳನ್ನು ದಯವಿಟ್ಟು ಸರೋವರಗಳಲ್ಲಿ ಅಥವಾ ಹತ್ತಿರದ ಕೊಳಗಳಲ್ಲಿ ಬಿಡಬೇಡಿ ಎಂದು ಟ್ವೀಟ್​ ಹಂಚಿಕೊಳ್ಳಲಾಗಿದೆ. ನೀವು ಅಂದಾಜಿಸಲೂ ಸಾಧ್ಯವಿಲ್ಲದಷ್ಟು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ನೀರಿನ ತಳಭಾಗದಲ್ಲಿರುವ ಕೆಸರುಗಳನ್ನು ಹಾಗೂ ಸಸ್ಯಗಳನ್ನು ಕಿತ್ತುಹಾಕುತ್ತವೆ. ಇದರಿಂದ ನೀರು ಕಲುಷಿತಗೊಳ್ಳುತ್ತದೆ. ಜತೆಗೆ ಮೊದಲಿನಿಂದಲೂ ವಾಸಿಸುತ್ತಿರುವ ಸ್ಥಳೀಯ ಮೀನಿನ ಪ್ರಬೇಧಗಳಿಗೆ ಹಾನಿಯುಂಟಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ನವೆಂಬರ್​ ತಿಂಗಳಿನಲ್ಲಿ ಅಧಿಕಾರಿಗಳು ಸ್ಥಳೀಯ ನೀರಿನಿಂದ 50,000ಕ್ಕೂ ಹೆಚ್ಚು ಗೋಲ್ಡ್​ ಫಿಶ್​ಗಳನ್ನು ತೆಗೆದುಹಾಕಿದ್ದಾರೆ. ಇವು ನೀರಿ ಗುಣಮಟ್ಟವನ್ನು ಹಾಳು ಮಾಡುತ್ತವೆ ಎಂದು ಅಧಿಕಾರಿಗಳು​ ಮಾಹಿತಿ ಹಂಚಿಕೊಂಡಿದ್ದಾರೆ.

ಮಿನ್ನೇಸೋಟದ ಚಳಿಗಾಲದ ಸಮಯದಲ್ಲಿ ಕಡಿಮೆ ಮಟ್ಟದ ಆಮ್ಲಜನಕದಲ್ಲಿ ಗೋಲ್ಡ್​ ಫಿಶ್​ಗಳು ಸುಲಭವಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಅಕ್ವೇರಿಯಮ್​ ಸಾಕುಪ್ರಾಣಿಗಳಿಂದ ಪರಿಸರ ನಾಶವಾಗುತ್ತದೆ ಎಂಬುದು ಹೊಸ ಮಾಹಿತಿಯೇನಲ್ಲ. 2013ರಲ್ಲಿ ಸೈಂಟಿಫಿಕ್​ ಅಮೆರಿಕನ್​ ವರದಿ ಮಾಡಿದ್ದು, ತಾಹೋ ಸರೋವರದಲ್ಲಿ 1.5 ಅಡಿ ಉದ್ದ ಮತ್ತು 4.2 ಪೌಂಡ್​ ತೂಕದ ಚಿನ್ನದ ಮೀನೊಂದು ಬಲೆಗೆ ಸಿಕ್ಕಿ ಬಿದ್ದಿತ್ತು ಎಂದು ವರದಿ ಮಾಡಿದೆ.

ಸರೋವರಗಳಲ್ಲಿ ಅಥವಾ ಸ್ಥಳೀಯ ಜಲಮಾರ್ಗಗಳಲ್ಲಿ ಮೀನುಗಾರನು ಹಿಡಿದ ಗೋಲ್ಡ್​ ಫಿಶ್​ಗಳನ್ನು ಮತ್ತೆ ಸರೋವರಕ್ಕೆ ಬೀಡಕೂಡದು ಎಂದು ವರ್ಜೀನಿಯಾದ ವನ್ಯಜೀವಿ ಅಧಿಕಾರಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ. ಗೋಲ್ಡ್​ ಫಿಶ್​ಗಳ ಹಾನಿ ಭಯಾನಕವಾಗಿರುತ್ತದೆ. ಇನ್ನಿತರ ಸ್ಥಳೀಯ ಪ್ರಭೇದಗಳ ನಾಶಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಇದನ್ನೂ ಓದಿ:

ಫ್ರೆಶ್ ಫಿಶ್‌ ತಿಂತಾ ಇದ್ದ ಜನರಿಗೆ ಆತಂಕ.. ಮೀನುಗಳ ಸಂರಕ್ಷಣೆಗೆ ಫಾರ್ಮಾಲಿನ್ ಬಳಕೆ?

Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್​ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು

Published On - 12:43 pm, Tue, 13 July 21