Viral Video: ಝನ್ನತ್ ಮಿರ್ಚಿ ಐಸ್ಕ್ರೀಮ್​; ‘ನನ್ನ ಶತ್ರುಗಳಿಗೂ ತಿನ್ನಿಸಲಾರೆ!’ ನೆಟ್ಟಿಗರ ಶಪಥ

Ice Cream : ನೀವೇನಂತೀರಿ? ಎಂದು ಕೇಳಲು ನಮಗಂತೂ ಖಂಡಿತ ಧೈರ್ಯವಿಲ್ಲ. ಆದರೆ ಈ ವಿಡಿಯೋ ನೋಡಿದಮೇಲೆ ನಿಮ್ಮೊಳಗಿನ ಸೋಮವಾರದ ಸೋಮಾರಿಭೂತ ತಂತಾನೇ ಬಿಟ್ಟೋಡುವುದರಲ್ಲಿ ಎರಡು ಮಾತಿಲ್ಲ!

Viral Video: ಝನ್ನತ್ ಮಿರ್ಚಿ ಐಸ್ಕ್ರೀಮ್​; ನನ್ನ ಶತ್ರುಗಳಿಗೂ ತಿನ್ನಿಸಲಾರೆ! ನೆಟ್ಟಿಗರ ಶಪಥ
ಇಂದೋರ್​ನ ಬೀದಿಯಲ್ಲಿ ಹಸಿಮೆಣಸಿನಕಾಯಿಯಿಂದ ಐಸ್ಕ್ರೀಮ್​ ತಯಾರಿಸುತ್ತಿರುವುದು.
Edited By: ಶ್ರೀದೇವಿ ಕಳಸದ

Updated on: Jun 12, 2023 | 10:32 AM

Monday Blues : ಯಾಕಾದರೂ ಈ ಸೋಮವಾರ ಬರತ್ತಪ್ಪಾ ಅಂತ ತೂಕಡಿಸಿಕೊಂಡು ನೀವು ಕೆಲಸ ಮಾಡ್ತಾ ಇರಬಹುದು. ನಿಮ್ಮ ಈ ಮಂಡೇ ಬ್ಲ್ಯೂಸ್ ಓಡಿಸೋದಕ್ಕೆ ಆಪ್ಟಿಕಲ್ ಇಲ್ಲ್ಯೂಷನ್​, ಬ್ರೇನ್​ ಟೀಸರ್​​ಗಳು ಸಾಕಾಗ್ತಿಲ್ಲವೇನೋ ಎನ್ನಿಸಿ ಈಗ ಇಂದೋರ್​ನಿಂದ ನಿಮಗೆ ಈ ವಿಶೇಷ ಐಸ್ಕ್ರೀಮ್​ ತಗೊಂಬಂದಿದೀವಿ. ಬಹುಶಃ ಹೀಗೊಂದು ಐಸ್ಕ್ರೀಮ್​ ಜಗತ್ತಿನಲ್ಲಿದೆ ಅಂತಾನೇ ನಿಮಗೆ ಗೊತ್ತಿರಲಿಲ್ಲ ಅಲ್ವಾ? ನೋಡಿ ಇದನ್ನು ನೋಡಿದ ಮೇಲೆ ತಿಂತೀರಾ ಅಥವಾ…

ಇಂದೋರ್​ನ (Indore) ಸರಾಫ್​ ಬಝಾರ್​ನ ಬೀದಿ ಮಾರಾಟಗಾರರೊಬ್ಬರು ಈ ಮೆಣಸಿನಕಾಯಿ ಐಸ್ಕ್ರೀಮ್​ನ ಪ್ರಯೋಗ ಮಾಡಿದ್ದಾರೆ. 2.5 ಲಕ್ಷ ನೆಟ್ಟಿಗರು ಇದನ್ನು ನೋಡಿ ದವಡೆಕಚ್ಚಿ ಕೂತಿದಾರೆ. ಈ ವಿಡಿಯೋ ನೋಡುತ್ತಿರುವ ನಿಮಗೆ ಏನೆನ್ನಿಸುತ್ತಿದೆ ಎಂದು ನಾವು ಕೆಳಲಾದೀತೆ? ಈ ಐಸ್​ಕ್ರೀಮ್​ ಅನ್ನು ವ್ಯಾಪಾರಿಯು ತನ್ನ ಮೆನು ಕಾರ್ಡ್​ನಲ್ಲಿ ಸೇರಿಸಿದ್ದಾನೆ. ಇದರ ಬೆಲೆ ಕೇವಲ ರೂ. 100!

ಇದನ್ನೂ ಓದಿ : Viral Video: ”ಅವನು ನಿಮ್ಮ ಮಗನಲ್ಲವೆ?”; ಜೆನ್ನಿಫರ್ ಟೀಚರ್​ ಕನ್ನಡದ ಹೊಸ ರೀಲಿನೊಂದಿಗೆ 

ವ್ಯೂವ್ಸ್​ ಲೈಕ್ಸ್ ಶೇರ್​ಗಾಗಿ ಹಪಹಪಿಸುವ ಫುಡ್​ಬ್ಲಾಗರ್​ಗಳು, ಅವರು ಹೇಳಿದಂತೆ ಕುಣಿಯುವ ಬೀದಿಬದಿ ವ್ಯಾಪಾರಸ್ಥರಿಗೆ ಕೊನೆಯೇ ಇಲ್ಲವೇ? ಎಂಬಂತಾಗಿದೆ. ಒಟ್ಟಾರೆ ನೆಟ್ಟಿಗರು ಇಂಥ ವಿಲಕ್ಷಣ ತಿಂಡಿ ತಿನಿಸುಗಳನ್ನು ನೋಡಿ ನೋಡಿ ರೋಸಿಹೋಗಿದ್ದಾರೆ. ಆದರೂ ನೆಟ್ಟಿಗರ ಕೋಪ ನೆಟ್​ಮೂಲಕವೇ ಶಮನವಾಗಬೇಕಲ್ಲ! ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ

ನನಗೆ ಮಸಾಲೆ ಪದಾರ್ಥಗಳೆಂದರೆ ಬಹಳ ಇಷ್ಟ. ಆದರೆ ಇಂಥ ಮೂರ್ಖತನದ ತಿಂಡಿತಿನಿಸು ಸವಿಯಲು ಎಂದೂ ಧೈರ್ಯ ಮಾಡಲಾರೆ. ಮಿತ್ರಾ, ಇದನ್ನು ನನ್ನ ಶತ್ರುಗಳಿಗೂ ತಿನ್ನಿಸುವುದಿಲ್ಲ! ಇದಕ್ಕೆ ಅರಿಷಿಣ, ಗರಂ ಮಸಾಲಾ, ತಡ್ಕಾ ಇಲ್ಲವಾದ್ದರಿಂದ ಇದರಲ್ಲಿ ಅಂಥಾ ಮಜಾ ಏನಿಲ್ಲ ಬಿಡಿ. ಇದನ್ನು ನೋಡಿ ನನ್ನ ಮತ್ತು ನಿಮ್ಮ ಹೃದಯ ಆತ್ಮಹತ್ಯೆ ಮಾಡಿಕೊಂಡಿಬಹುದು… ಅಂತೆಲ್ಲ ಜನ ಮಾತನಾಡಿಕೊಂಡಿದ್ದಾರೆ.

ನೀವೇನಂತೀರಿ ಎಂದು ಕೇಳಲು ನಮಗಂತೂ ಖಂಡಿತ ಧೈರ್ಯವಿಲ್ಲ. ಆದರೆ ಇದನ್ನು ನೋಡಿದ ನಿಮಗೆ ನಿಮ್ಮೊಳಗಿನ ಸೋಮವಾರದ ಸೋಮಾರಿಭೂತ ನಿಮ್ಮನ್ನು ಬಿಟ್ಟು ಓಡಿಹೋಗಿರುತ್ತದೆ, ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

 

Published On - 10:24 am, Mon, 12 June 23

TV9 Web

TV9 Kannada

Read More
Follow Us