ಚಲಿಸುತ್ತಿದ್ದ ಬೈಕ್ ನಲ್ಲಿ ಸ್ಟಂಟ್‌ ಮಾಡಲು ಹೋಗಿ ರಸ್ತೆಗೆ ಬಿದ್ದ ಯುವಕ; ವಿಡಿಯೋ ವೈರಲ್‌

ಇತ್ತೀಚೆಗಿನ ದಿನಗಳಲ್ಲಿ ವಿಡಿಯೋ ಮತ್ತು ರೀಲ್ಸ್‌ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಹೌದು ಫೇಮಸ್ ಆಗುವ ಸಲುವಾಗಿ ಕೆಲವರು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕನು ಚಲಿಸುತ್ತಿದ್ದ ಬೈಕ್ ಮೇಲೆ ನಿಂತುಕೊಂಡು ಸ್ಟಂಟ್ ಮಾಡುತ್ತಿದ್ದು, ಆದರೆ ಕೊನೆಗೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ಅಪಾಯಕಾರಿ ಸ್ಟಂಟ್ ವಿಡಿಯೋ ನೋಡಿದ ನೆಟ್ಟಿಗರು ಈ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿದ್ದ ಬೈಕ್ ನಲ್ಲಿ ಸ್ಟಂಟ್‌ ಮಾಡಲು ಹೋಗಿ ರಸ್ತೆಗೆ ಬಿದ್ದ ಯುವಕ; ವಿಡಿಯೋ ವೈರಲ್‌
ವಿಡಿಯೋ ವೈರಲ್
Image Credit source: Twitter

Updated on: Apr 30, 2025 | 12:22 PM

ಗುರುಗ್ರಾಮ್ ಏ 30: ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಭರದಲ್ಲಿ ಯುವಕರು ಅಪಾಯಕಾರಿ ಸಾಹಸ (dangerous stunt) ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿಯೂ ಚಿತ್ರ ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಳ್ಳುವವರೇ ಹೆಚ್ಚು. ಹೌದು ಈ ಬೈಕ್ ಅಥವಾ ಕಾರುಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಅಪಾಯಗಳನ್ನು ಮೈ ಮೇಲೆ ಎಳೆದುಕೊಂಡ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದೀಗ ಇಂತಹದ್ದೆ ಘಟನೆಯೂ ಗುರುಗ್ರಾಮ (gurugram) ದ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇ (Delhi-Jaipur Expressway) ಯಲ್ಲಿ ನಡೆದಿದೆ. ಹೌದು ಯುವಕನೊಬ್ಬನು ಚಲಿಸುತ್ತಿದ್ದ ಬೈಕ್ ಮೇಲೆ ನಿಂತು ಸ್ಟಂಟ್ ಮಾಡಲು ಹೋಗಿದ್ದಾನೆ. ಆದರೆ ಈ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿದ್ದು ಬೈಕ್ ನಿಂತುಕೊಂಡಿದ್ದ ಯುವಕನಿಗೆ ಬ್ಯಾಲೆನ್ಸ್ ಮಾಡಲು ಕಷ್ಟವಾಗಿದ್ದು, ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಸುಮ್ನ್ಧ Sharma ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು ಈ ವಿಡಿಯೋದಲ್ಲಿ ಯುವಕನೊಬ್ಬನು ಬೈಕ್ ನಲ್ಲಿ ರಸ್ತೆಯಲ್ಲಿ ಹೋಗುವುದನ್ನು ನೋಡಬಹುದು. ಆದರೆ ಬೈಕ್ ಹ್ಯಾಂಡಲ್ ಬಿಟ್ಟು ಬೈಕ್ ಮೇಲೆ ನಿಂತು ಸ್ಟಂಟ್ ಮಾಡಲು ಶುರು ಮಾಡಿದ್ದಾನೆ. ಸ್ವಲ್ಪ ಸಮಯ ಬೈಕ್ ಮೇಲೆ ನಿಂತುಕೊಂಡೇ ಮುಂದಕ್ಕೆ ಚಲಿಸಿದ್ದು, ಆ ಬಳಿಕ ಬ್ಯಾಲೆನ್ಸ್ ತಪ್ಪಿ ರಸ್ತೆಗೆ ಬೀಳುವುದನ್ನು ನೋಡಬಹುದು. ಆದರೆ ಬೈಕ್ ಮುಂದಕ್ಕೆ ಚಲಿಸಿದ್ದು, ಡಿವೈಡರ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ
ಮೆಟ್ರೋ ನಿಲ್ದಾಣದಲ್ಲಿ ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಯುವಕ
ಚಾಟ್ ಜಿಪಿಟಿ ಬಳಸಿ ಆಟೋ ಚಾಲಕನ ಜೊತೆಗೆ ಚೌಕಾಸಿ ಮಾಡಿದ ಯುವಕ
ರೈಲಿನಲ್ಲಿ ಸಹ ಪ್ರಯಾಣಿಕರನ್ನು ರಂಜಿಸಿದ ಅಂಧ ವ್ಯಕ್ತಿ
ಕನ್ನಡ ಅದ್ಭುತ ಭಾಷೆ, ಕಲಿತು ಮಾತನಾಡಿ: ಅಮೆರಿಕ ಉದ್ಯಮಿ ಬರ್ಟ್ ಮುಲ್ಲರ್ ಕರೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ : Viral : ಮಾಲ್​​​ನಲ್ಲಿ ಭೀಕರ ಅಗ್ನಿ ಅವಘಡ, ತುರ್ತು ನಿರ್ಗಮನ ಮಾರ್ಗವಿಲ್ಲದೆ ಕಿಟಕಿಯಲ್ಲಿ ನೇತಾಡಿದ ಜನ

ಯುವಕನ ಈ ಅಪಾಯಕಾರಿ ಸ್ಟಂಟ್ ವಿಡಿಯೋವೊಂದು ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ದಯವಿಟ್ಟು ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ಫೇಮಸ್ ಆಗುವ ಹುಚ್ಚು ಯಾಕೆ, ಇದರಿಂದ ನಿಮ್ಮ ಜೀವವೇ ಹೋದಿತು ಜೋಕೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತುಂಬಾ ತೃಪ್ತಿಕರವಾದ ವಿಡಿಯೋ, ಕ್ಯಾಮೆರಾ ಮ್ಯಾನ್ ಗೆ ಧನ್ಯವಾದಗಳು ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ