Viral: ಜುಟ್ಟು ಹಿಡಿದು ಎಳೆದು, ಕಚ್ಚಿ ಹೆತ್ತ ತಾಯಿಗೆ ಚಿತ್ರಹಿಂಸೆ ನೀಡಿದ ಪಾಪಿ ಮಗಳು; ಆಘಾತಕಾರಿ ದೃಶ್ಯ ವೈರಲ್‌

ಸೊಸೆಯಾದವಳು ತನ್ನ ಅತ್ತೆಗೆ ಚಿತ್ರಹಿಂಸೆ ನೀಡಿದಂತಹ ಸಾಕಷ್ಟು ಘಟನೆಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಗಳೇ ತಾಯಿಗೆ ಚಿತ್ರಹಿಂಸೆ ನೀಡಿದ್ದಾಳೆ. ಹೌದು ಅಮ್ಮನ ಜುಟ್ಟು ಹಿಡಿದು ಎಳೆದು, ತೊಡೆಗೆ ಕಚ್ಚಿ ಹಿಂಸಿಸಿದ್ದಾಳೆ. ಈ ಆಘಾತಕಾರಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ತಾಯಿಗೆ ಹಿಂಸೆ ನೀಡಿದ ಪಾಪಿ ಮಗಳ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral: ಜುಟ್ಟು ಹಿಡಿದು ಎಳೆದು, ಕಚ್ಚಿ ಹೆತ್ತ ತಾಯಿಗೆ ಚಿತ್ರಹಿಂಸೆ ನೀಡಿದ ಪಾಪಿ ಮಗಳು; ಆಘಾತಕಾರಿ ದೃಶ್ಯ ವೈರಲ್‌
ವೈರಲ್​​ ವಿಡಿಯೋ
Edited By:

Updated on: Feb 28, 2025 | 11:45 AM

ಹರಿಯಾಣ, ಫೆ. 28: ಹೆತ್ತ ತಾಯಿಗೆ ತನ್ನ ಮಕ್ಕಳೇ ಎಲ್ಲಾ ಆಗಿರುತ್ತಾರೆ. ಆಕೆ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ತನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಾಳೆ. ಮಕ್ಕಳಿಗೂ ಅಷ್ಟೇ ತಾಯಿ ಎಂದ್ರೆ ತುಸು ಹೆಚ್ಚೇ ಪ್ರೀತಿ. ಅಲ್ಲದೆ ಹೆತ್ತ ತಾಯಿ ತಂದೆಯನ್ನು ಹಿಂಸಿಸುವ ಪಾಪಿ ಮಕ್ಕಳು ಕೂಡಾ ಈ ಭೂಮಿ ಮೇಲೆ ಇದ್ದಾರೆ. ತಂದೆ-ತಾಯಿಯನ್ನು ಹಿಂಸಿಸಿ ಮನೆಯಿಂದ ಹೊರ ಹಾಕಿದ ಕಟುಕ ಮಕ್ಕಳ ಕಥೆಯ ಬಗ್ಗೆ ಕೇಳಿರುತ್ತೀರಿ ಅಲ್ವಾ, ಇಲ್ಲೊಂದು ಅಂತಹದ್ದೇ ನಾಚಿಕೆಗೇಡಿನ ಘಟನೆ ನಡೆದಿದ್ದು, ಮಗಳೇ ತಾಯಿಗೆ ಚಿತ್ರಹಿಂಸೆ ನೀಡಿದ್ದಾರೆ. ಜುಟ್ಟು ಹಿಡಿದು ಎಳೆದು, ತೊಡೆಯ ಭಾಗಕ್ಕೆ ಕಚ್ಚಿ, ಹೊಡೆದು ಬಡಿದು ತಾಯಿಯನ್ನು ಹಿಂಸಿಸಿದ್ದಾಳೆ. ಈ ಆಘಾತಕಾರಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ತಾಯಿಗೆ ಹಿಂಸೆ ನೀಡಿದ ಪಾಪಿ ಮಗಳ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹೃದಯವಿದ್ರಾವಕ ಘಟನೆ ಹರಿಯಾಣದಲ್ಲಿ ನಡೆದಿದ್ದು, ಮಗಳೊಬ್ಬಳು ಜುಟ್ಟು ಹಿಡಿದು ಎಳೆದು, ತೊಡೆಯ ಭಾಗಕ್ಕೆ ಕಚ್ಚಿ, ಹೊಡೆದು ಬಡಿದು ತಾಯಿಗೆ ಚಿತ್ರಹಿಂಸೆ ನೀಡಿದ್ದಾಳೆ. ವೃದ್ಧ ತಾಯಿ ಹೊಡಿಬೇಡ ಮಗಳೇ ಎಂದು ಕೇಳಿಕೊಂಡರೂ ಕರುಣೆಯೇ ಇಲ್ಲದ ಮಗಳು ತಾಯಿಯ ಜುಟ್ಟು ಹಿಡಿದು ಎಳೆದಿದ್ದಾಳೆ.

ಇದನ್ನೂ ಓದಿ
ಪರೀಕ್ಷಾ ಕೊಠಡಿಯಲ್ಲಿ ಬೋರ್ಡ್​ ಮೇಲೆ ಉತ್ತರಗಳ ಬರೆದ ಶಿಕ್ಷಕಿ, ಅಮಾನತು
ಕುಂಭಮೇಳದಲ್ಲಿ 37 ವರ್ಷಗಳ ಬಳಿಕ ಮುಖಾಮುಖಿಯಾದ ಸ್ನೇಹಿತರು
5 ವರ್ಷ ವಯಸ್ಸಿನ ಬಾಲಕನಿಗೆ ಗುದ್ದಿ ಕಾರು ಸಮೇತ ಎಸ್ಕೇಪ್‌ ಆದ ಮಹಿಳೆ
ಪ್ರೇಮಿಗಳ ದಿನದಂದು ಗಂಡ ಕೊಟ್ಟ ಪೋಷೆ ಕಾರು ಬೇಡ ಎಂದ ಪತ್ನಿ

ಶೋನಿ ಕಪೂರ್‌ ಎಂಬವರು (ShoneeKapoor) ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನನಗೆ ಆಘಾತವಾಗಿದೆ, ಸ್ವಂತ ತಾಯಿಗೆ ಹಿಂಸೆ ನೀಡಿದ ಮಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಮತ್ತು ಮಗಳು ಹಾಸಿಗೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಅಳುತ್ತಾ ಕುಳಿತಿದ್ದ ತಾಯಿ ನನಗೇನು ಮಾಡಬೇಡ ಮಗಳೇ ಎಂದು ಬೇಡಿಕೊಳ್ಳುತ್ತಿದ್ದರೂ, ಕಿಂಚಿತ್ತೂ ಕರುಣೆ ತೋರದ ಮಗಳು ಆ ಬಡ ತಾಯಿಯ ಜುಟ್ಟು ಹಿಡಿದು ಎಳೆದು, ತೊಡೆಯ ಭಾಗಕ್ಕೆ ಕಚ್ಚಿ ಹೊಡೆದು ಬಡಿದು ಅತೀ ಕ್ರೂರವಾಗಿ ಕಿರುಕುಳ ನೀಡಿದ್ದಾಳೆ.

ಇದನ್ನೂ ಓದಿ: ಪರೀಕ್ಷಾ ಕೊಠಡಿಯಲ್ಲಿ ಬೋರ್ಡ್​ ಮೇಲೆ ಉತ್ತರಗಳ ಬರೆದ ಶಿಕ್ಷಕಿ, ಅಮಾನತು

ಫೆಬ್ರವರಿ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ಹೃದಯವಿದ್ರಾವಕವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆದಷ್ಟು ಬೇಗ ಇವಳನ್ನು ಅರೆಸ್ಟ್‌ ಮಾಡಿʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಯ್ಯೋ ದೇವ್ರೆ ಇಂತಹ ಪಾಪಿ ಮಕ್ಕಳು ಕೂಡಾ ಇರ್ತಾರಾʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ