Viral Video: ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಮೀನನ್ನು ನೀವು ಎಂದಾದರೂ ನೋಡಿದ್ದೀರಾ?

| Updated By: ಅಕ್ಷತಾ ವರ್ಕಾಡಿ

Updated on: Feb 04, 2024 | 6:38 PM

ಈ ಪ್ರಕೃತಿಯಲ್ಲಿ ಅದೆಷ್ಟೋ ಅಚ್ಚರಿಯ ಅದ್ಭುತ ಸಂಗತಿಗಳು ನಡೆಯುತ್ತಿರುತ್ತವೆ. ಇಂತಹ ವಿಸ್ಮಯ ಘಟನೆಗಳು ನಮ್ಮೆಲ್ಲರನ್ನು ಬೆರಗುಗೊಳಿಸುತ್ತದೆ. ಸದ್ಯ ಅಂತಹದ್ದೇ ವಿಸ್ಮಯಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ದೃಶ್ಯಾವಳಿಯಲ್ಲಿ ನೀರಿನಲ್ಲಿ ಹಾಯಾಗಿ ಈಜಾಡುತ್ತಿರುವ ಮೀನು ಗೋಸುಂಬೆಯಂತೆ ಬಣ್ಣವನ್ನು ಬದಲಾಯಿಸುವುದನ್ನು ಕಾಣಬಹುದು.

Viral Video: ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಮೀನನ್ನು ನೀವು ಎಂದಾದರೂ ನೋಡಿದ್ದೀರಾ?
Tilefish
Image Credit source: Pinterest
Follow us on

ಪ್ರಕೃತಿ ಬಹುದೊಡ್ಡ ರಹಸ್ಯಗಳ ಕಣಜ. ಆಗೊಮ್ಮೆ ಈಗೊಮ್ಮೆ ಈ ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಅಚ್ಚರಿಯ ಅದ್ಭುತ ಸಂಗಂತಿಗಳು ನಡೆಯುತ್ತಿರುತ್ತವೆ. ಇಂತಹ ಅದ್ಭುತಗಳು ನಮ್ಮೆಲ್ಲರನ್ನು ಬೆರಗುಗೊಳಿಸುತ್ತವೆ. ಅದರಲ್ಲೂ ಈ ಬೆರಗುಗೊಳಿಸುವ ಅಪರೂಪದ ಜೀವಸಂಕುಲಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಹೀಗೆ ಅವುಗಳ ವಿಶೇಷತೆಯ ಕಾರಣದಿಂದಲೇ ಗಮನ ಸೆಳೆಯುವ ಇಂತಹ ಜೀವಿಗಳನ್ನು ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಈ ವಿಚಿತ್ರ ಜೀವಿಗಳ ಗುಂಪಿನಲ್ಲಿ ಊಸರವಳ್ಳಿಯಂತೆ ತನ್ನ ಬಣ್ಣವನ್ನು ಬದಲಾಯಿಸುವ ಮೀನು ಕೂಡಾ ಸೇರಿದೆ.

ಹೌದು ನೀವೆಲ್ಲರೂ ಗೋಸುಂಬೆಗಳು ಬಣ್ಣವನ್ನು ಬದಲಾಯಿಸುವುದನ್ನು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಈ ವಿಶಿಷ್ಟ ಮೀನು ಕೂಡಾ ಕ್ಷಣಕ್ಕೊಂದು ಬಣ್ಣವನ್ನು ಬದಲಾಯಿಸುತ್ತದೆ. ಈ ಮೀನನ್ನು ʼಟೈಲ್ಫಿಶ್ʼ ಅಂತ ಕರಿತಾರೆ. ಕೇವಲ ಗೋಸುಂಬೆ ಮಾತ್ರವಲ್ಲ ಈ ಟೈಲ್ಫಿಶ್ ಕೂಡಾ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಈ ಮೀನನ್ನು ನೋಡಿದರೆ ನೀವೂ ಕೂಡಾ ಬೆರಗಾಗುವುದು ಗ್ಯಾರಂಟಿ.

ವೈರಲ್​ ವಿಡಿಯೋ ಇಲ್ಲಿದೆ:

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀರಿನಲ್ಲಿ ಈಜುತ್ತಿರುವ ಟೈಲ್ಫಿಶ್ ಮೀನು ಕ್ಷಣ ಕ್ಷಣಕ್ಕೆ ಹೇಗೆ ಬಣ್ಣವನ್ನು ಬದಲಾಯಿಸುತ್ತದೆ ಎಂಬುದನ್ನು ಕಾಣಬಹುದು. ಈ ವಿಡಿಯೋವನ್ನು @ThebestFigen ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬಣ್ಣವನ್ನು ವೇಗವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಟೈಲ್ ಫಿಶ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ವೈರಲ್ ವಿಡಿಯೋದಲ್ಲಿ ನೀರು ತುಂಬಿದ ಬಾಕ್ಸ್ ಒಂದರಲ್ಲಿ ಟೈಲ್ಫಿಶ್ ಮೀನು ಹಾಯಾಗಿ ಈಜಾಡುತ್ತಿರುವ ದೃಶ್ಯವನ್ನು ಕಾಣಬಹುದು. ಇದ್ರಲ್ಲಿ ವಿಶೇಷ ಏನಪ್ಪಾ ಅಂದ್ರೆ, ಅತ್ತಿಂದ ಇತ್ತ ಈಜಾಡುತ್ತ ಹೋಗುವ ಸಂದರ್ಭದಲ್ಲಿ ಈ ಮೀನು ತನ್ನ ಬಣ್ಣವನ್ನು ಸಹ ಬದಲಾಯಿಸುತ್ತದೆ. ಮೊದಲಿಗೆ ಆಕಾಶನೀಲಿ ಬಣ್ಣದಲ್ಲಿದ್ದ ಮೀನು ಒಂದೇ ಕ್ಷಣಕ್ಕೆ ಹಳದಿ ಬಣ್ಣಕ್ಕೆ ತಿರುಗುತ್ತದೆ, ಮತ್ತೊಂದು ಕ್ಷಣ ನೋಡಿದಾಗ ಈ ಮೀನು ಹಸಿರು ಬಣ್ಣಕ್ಕೆ ತಿರುಗಿರುತ್ತದೆ. ಗೋಸುಂಬೆಯಂತೆ ಕ್ಷಣ ಕ್ಷಣಕ್ಕೆ ಬಣ್ಣವನ್ನು ಬದಲಾಯಿಸುವ ಈ ಮೀನನ್ನು ಕಂಡು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ಫೆಬ್ರವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಓಹ್ ವ್ಹಾವ್! ಇದು ತುಂಬಾ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಕೃತಿಯು ನಿಜವಾಗಿಯೂ ಅದೆಷ್ಟೋ ಅದ್ಭುತಗಳ ತಾಣವಾಗಿದೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹದ್ದೊಂದು ಮೀನನ್ನು ಈ ಮೊದಲು ನಾನು ನೋಡೆ ಇರ್ಲಿಲ್ವೇʼ ಅಂತ ಹೇಳಿದ್ದಾರೆ. ಇನ್ನೂ ಅನೇಕರು ಇದು ನಿಜಕ್ಕೂ ವಿಸ್ಮಯಕಾರಿಯಾಗಿದೆ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:54 pm, Sun, 4 February 24