Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ

ಕಷ್ಟವಾದರೂ ಬಿಡದೇ ಚಾಣಾಕ್ಷತನದಿಂದ ಎತ್ತರದ ಕಬ್ಬಿಣದ ಗೇಟ್ ದಾಟುತ್ತಿರುವ ಆನೆಯನ್ನು ನೋಡಿ ಕೆಲವರು ಆಶ್ಚರ್ಯ ಪಟ್ಟಿದ್ದಾರೆ. ಇನ್ನು ಕೆಲವರು ಆನೆ ಕಷ್ಟಪಡುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ
ಕಬ್ಬಿಣದ ಬೇಲಿ ಏರುತ್ತಿರುವ ದೈತ್ಯ ಆನೆ
Edited By:

Updated on: Nov 19, 2021 | 11:35 AM

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ತುಂಟಾಟ, ಮೋಜು, ಮಸ್ತಿಯ ವಿಡಿಯೊಗಳು ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತಮಾಷೆಯ ದೃಶ್ಯಗಳಾಗಿದ್ದು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಏತನ್ಮಧ್ಯೆ, ಪ್ರಾಣಿಗಳ ಚಾಣಾಕ್ಷಣತನದ ದೃಶ್ಯಗಳೂ ಸಹ ಸಕತ್ ವೈರಲ್ (Viral video) ಆಗುತ್ತವೆ. ಅಂಥಹುದೇ ಒಂದು ವಿಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ. ಕೆಲವರು ಆನೆಯು (Elephant) ಕಬ್ಬಿಣದ ಬೇಲಿ (Iron Fence) ಏರುತ್ತಿರುವುದನ್ನು ನೋಡಿ ಅಶ್ಚರ್ಯಗೊಂಡಿದ್ದರೆ, ಇನ್ನು ಕೆಲವರು ಆನೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅರಣ್ಯದಲ್ಲಿ ಬೇಲಿ ಹಾಕಿರುವ ಉದ್ದೇಶವೇನು? ಎಂದು ಓರ್ವರು ಪ್ರಶ್ನಿಸಿದ್ದಾರೆ. ದೈತ್ಯ ಆನೆ ಉಪಾಯ ಮಾಡಿ ಕಷ್ಟವಾದರೂ ಬಿಡದೇ ಕಬ್ಬಿಣದ ಬೇಲಿ ದಾಟಿದೆ. ಹೇಗಂತೀರಾ? ಈ ವಿಡಿಯೊ ನೋಡಿ. 

ಆನೆಯು ತನ್ನ ಮುಂಭಾಗದ ಎರಡೂ ಕಾಲುಗಳನ್ನು ಕಬ್ಬಿಣದ ಬೇಲಿಯ ಮೇಲೆ ಇರಿಸಿದೆ. ನಂತರ ಚೂರು ಹತ್ತಿರಕ್ಕೆ ಸಾಗುತ್ತದೆ. ನಂತರ ಕಬ್ಬಿಣ ಬೇಲಿಯ ಮುಂದಕ್ಕೆ ತನ್ನ ಕಾಲುಗಳನ್ನು ಚಾಚುತ್ತಾ ಮುಂದೆ ಬಾಗುತ್ತದೆ. ಬಳಿಕ ಕಷ್ಟ ಪಟ್ಟು ಹೇಗೋ ತನ್ನ ಹಿಂಬದಿಯ ಎರಡೂ ಕಾಲುಗಳನ್ನು ಎತ್ತಿ ಬೇಲಿಯನ್ನು ದಾಟಿದೆ. ಕಷ್ಟವಾದರೂ ಬಿಡದೇ ಚಾಣಾಕ್ಷತನದಿಂದ ಎತ್ತರದ ಕಬ್ಬಿಣದ ಗೇಟ್ ದಾಟುತ್ತಿರುವ ಆನೆಯನ್ನು ನೋಡಿ ಕೆಲವರು ಆಶ್ಚರ್ಯ ಪಟ್ಟಿದ್ದಾರೆ. ಇನ್ನು ಕೆಲವರು ಆನೆ ಕಷ್ಟಪಡುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್​ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಸ್ಪೀಚ್​ಲೆಸ್​ ಎಂಬ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹರಿಬಿಟ್ಟಿದ್ದಾರೆ. ಆನ್ಲೈನ್​ನಲ್ಲಿ ವಿಡಿಯೊ ಪೋಸ್ಟ್ ಮಾಡಿದ ಬಳಿಕ ಸುಮಾರು 18 ಸಾವಿರಕ್ಕೂ ಹೆಚ್ಚಿನ ಲೇಕ್ಸ್​ಗಳನ್ನು ಪಡೆದುಕೊಂಡಿದೆ. 2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿವೆ. ವಿಡಿಯೊ ನೋಡಿದ ನೆಟ್ಟಿಗರು ದೈತ್ಯ ಆನೆಯು ಕಬ್ಬಿಣದ ಗೇಟ್ ಏರುತ್ತಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಮಗುವಿನಂತೆಯೆ ಬಲು ತುಂಟ ಎನ್ನುತ್ತಾ ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಹೂವಿನ ಟೋಪಿ ಧರಿಸಿ ನಿದ್ರಿಸುತ್ತಿರುವ ಮುದ್ದಾದ ಬಾತುಕೋಳಿ; ಕ್ಯೂಟ್ ವಿಡಿಯೊ ನೋಡಿ

Viral Video: ವೇಗವಾಗಿ ಓಡಿ ಬಂದು ಆಸ್ಪತ್ರೆಯ ಎಸ್ಕಲೇಟರ್ ಏರಿದ ಗಾಯಾಳು ಜಿಂಕೆ!