Online Order : ಆನ್ಲೈನ್ ಪ್ಲ್ಯಾಟ್ಫಾರ್ಮಗಳ ತ್ವರಿತ ಸೇವೆಯಿಂದಾಗಿ ದಿನಸಿ ಸಾಮಾನು, ಔಷಧಿ, ತಿಂಡಿತಿನಿಸು ಮತ್ತು ದಿನಬಳಕೆ ವಸ್ತುಗಳು ಮನೆಗೇ ತಲುಪುತ್ತವೆಯಾದ್ದರಿಂದ ಜನರಿಗೆ ಇದರಿಂದ ಹೆಚ್ಚು ಅನುಕೂಲವಾಗಿದೆ. ಆದರೆ ಆರ್ಡರ್ ಮಾಡುವಾಗ ಸ್ವಲ್ಪ ಗಮನ ಆಚೀಚೆ ಆಯಿತೋ ಯಡವಟ್ಟು ಕಟ್ಟಿಟ್ಟ ಬುತ್ತಿ! ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಗಮನಿಸಿ. ಇಲ್ಲಿ ಆಗಿರುವ ಯಡವಟ್ಟಿಗೆ ಮುಜುಗರವೂ ಸಣ್ಣ ನಗುವೂ ಒಟ್ಟಿಗೇ ಹೊಮ್ಮುತ್ತದೆ. ಎಲೆನಾ ಎಂಬಾಕೆ ತನ್ನ ಸಹೋದರ ಮಾಡಿದ ಈ ಯಡವಟ್ಟನ್ನು ಟ್ವೀಟ್ (Tweet) ಮಾಡಿ ಬಹಿರಂಗಗೊಳಿಸಿದ್ದಾಳೆ.
Looks like my brother forgot to change the address because my mom just received his instamart order?? pic.twitter.com/BmZbLyEAtr
ಇದನ್ನೂ ಓದಿ— elena (@elena4yo) July 4, 2023
ಸಾಮಾನ್ಯವಾಗಿ ಸ್ವಿಗ್ಗಿ, ಬ್ಲಿಂಕಿಟ್, ಅಮೇಝಾನ್, ಇನ್ಸ್ಟಾಮಾರ್ಟ್, ಝೆಪ್ಟೋ ಮುಂತಾದ ಆನ್ಲೈನ್ ಪ್ಲ್ಯಾಟ್ಫಾರ್ಮ್ನಲ್ಲಿ ನೀವೇ ನಿಮ್ಮ ಮನೆಯ ವಿಳಾಸವನ್ನು ಸೇವ್ ಮಾಡಿರುತ್ತೀರಿ. ಕೆಲವೊಮ್ಮೆ ನಿಮ್ಮ ಆಫೀಸ್, ಸ್ನೇಹಿತರ ಮನೆಯ ವಿಳಾಸವನ್ನೂ ಸೇವ್ ಮಾಡಿರುತ್ತೀರಿ. ಅಂದರೆ ನೀವು ಎಲ್ಲಿರುತ್ತೀರೋ ಅಲ್ಲಿಗೆ ನಿಮ್ಮ ಆರ್ಡರ್ ಬಂದು ತಲುಪಲಿ ಎನ್ನುವ ಉದ್ದೇಶದಿಂದ. ಆದರೆ ಎಲೆನಾಳ ಸಹೋದರ ಮನೆಯ ಅಡ್ರೆಸ್ ಬದಲಾಯಿಸದೇ ಕಾಂಡೋಮ್ ಆರ್ಡರ್ ಮಾಡಿಬಿಟ್ಟಿದ್ದಾನೆ. ಅದು ಆತನ ತಾಯಿಗೆ ತಲುಪಿದೆ!
ಇದನ್ನೂ ಓದಿ : Viral: ಬಾರ್ಬಿರೇಖಾ ”ಇಲ್ಲಿ ನೋಡಿ ಸರ್” ಅಮಿತಾಬ್ರನ್ನು ಟ್ಯಾಗ್ ಮಾಡುತ್ತಿರುವ ನೆಟ್ಟಿಗರು
‘ನನ್ನ ಸಹೋದರ ಆರ್ಡರ್ ಮಾಡುವಾಗ ವಿಳಾಸವನ್ನು ಬದಲಾಯಿಸುವುದನ್ನು ಮರೆತನೋ ಏನೋ. ಏಕೆಂದರೆ ಆರ್ಡರ್ ನನ್ನ ತಾಯಿಯನ್ನು ತಲುಪಿದೆ” ಎಂದಿದ್ದಾರೆ ಎಲೆನಾ. ಈ ಪೋಸ್ಟ್ ಅನ್ನು ಜುಲೈ 4 ರಂದು ಇವರು ಟ್ವೀಟ್ ಮಾಡಿದ್ದಾರೆ. ಸುಮಾರು 7.8 ಲಕ್ಷ ಜನರು ಇದನ್ನು ನೋಡಿದ್ದಾರೆ. 5,500ಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ನೆಟ್ಟಿಗರು ಪ್ರತಿಕ್ರಿಯಿಸಿ ಮುಂದೇನಾಯಿತು, ಈ ವಿಷಯವಾಗಿ ನಿಮ್ಮ ಸಹೋದರ ನಿಮ್ಮ ತಾಯಿಗೆ ಏನೆಂದು ಉತ್ತರಿಸಿದರು? ಎಂದು ಕೇಳಿದ್ದಾರೆ.
— elena (@elena4yo) July 4, 2023
ಇದೊಂದು ಕೆಟ್ಟ ಕನಸು. ಫೋನ್ ಸ್ವಿಚ್ಆಫ್ ಮಾಡಿರಬಹುದು. ಜೀವನದಲ್ಲಿ ನನಗೆ ಇಂಥ ಸಮಸ್ಯೆಗಳು ಬೇಕು, ಅಂದರೇನೇ ಮಜಾ… ಅಂತೆಲ್ಲ ಊಹಿಸಿಕೊಂಡು ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು. ನಂತರ ವಾಟ್ಸಪ್ ಫ್ಯಾಮಿಲಿ ಗ್ರೂಪ್ನಿಂದ ತಾಯಿ ಮಗನನ್ನು ಹೊರಹಾಕಿದ್ದಾರೆ. ಎಲೆನಾ ತನ್ನ ಸಹೋದರನನ್ನು ಮತ್ತೆ ಸೇರಿಸಿದ್ದಾರೆ. ಮತ್ತೆ ತಾಯಿ ಆತನನ್ನು ಹೊರಹಾಕಿದ್ದಾರೆ. ಈ ಸ್ಕ್ರೀನ್ ಶಾಟ್ ಅನ್ನೂ ಎಲೆನಾ ಟ್ವೀಟ್ ಮಾಡಿದ್ದಾರೆ.
ಆನ್ಲೈನ್ ಡೆಲಿವರಿಯ ಅನುಭಗಳು ನಿಮ್ಮ ಬಳಿಯೂ ಇರಬಹುದು, ಹಂಚಿಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:38 am, Sat, 8 July 23