Viral Video: ಪ್ರವಾಹ; ಐವರ ಸಾವು, ಆಟಿಕೆಗಳಂತೆ ತೇಲಿಹೋದ ಕಾರುಗಳು

|

Updated on: Jul 10, 2023 | 1:50 PM

Himachal Pradesh: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಈತನಕ ಐದು ಜನರು ಅಸುನೀಗಿದ್ದಾರೆ. ಅನೇಕರು ಮನೆಗಳನ್ನು, ವಾಹನಗಳನ್ನು ಕಳೆದುಕೊಂಡಿದ್ಧಾರೆ.

Viral Video: ಪ್ರವಾಹ; ಐವರ ಸಾವು, ಆಟಿಕೆಗಳಂತೆ ತೇಲಿಹೋದ ಕಾರುಗಳು
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಕಾರು
Follow us on

Flood : ಹಿಮಾಚಲ ಪ್ರದೇಶದ ಕುಲು (Kullu) ಜಿಲ್ಲೆಯ ಕಸೋಲ್​ನಲ್ಲಿ (Kasol) ಭಾರೀ ಮಳೆ ಬಿದ್ದ ಪರಿಣಾಮ ಅಲ್ಲಲ್ಲಿ ಭೂಕುಸಿಗಳು ಉಂಟಾಗಿವೆ. ಪರಿಣಾಮವಾಗಿ ಹಲವಾರು ಮನೆಗಳು ಜಖಂಗೊಂಡಿವೆ. ಜೊತೆಗೆ ಮಂಡಿ ಜಿಲ್ಲೆಯಲ್ಲಿರುವ ಬಿಯಾಸ್ ನದಿಯು ತುಂಬಿ ಹರಿಯುತ್ತಿರುವುದರಿಂದ ಆಟ್-ಬಂಜಾರ್‌ (Aut-Banjar)ನ ಸಂಪರ್ಕ ಸೇತುವೆ ಸೇತುವೆ ಸಂಪೂರ್ಣ ಕೊಚ್ಚಿಹೋಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

ಬಿಯಾಸ್​ ನಂದಿಯಿಂದ ಮಂಡಿ ಜಿಲ್ಲೆಯ ಪಾಂಡೋಹ್​ ಎಂಬ ಹಳ್ಳಿಗೆ ನೀರು ನುಗ್ಗಿ ಹಳ್ಳಿಗರೆಲ್ಲ ಪರದಾಡುವಂಥ ಪರಿಸ್ಥಿತಿ ಉಂಟಾಗಿದೆ. ಬಿಯಾಸ್ ನದಿಯು ಮೈದುಂಬಿ ಹರಿಯುತ್ತಿವ ಕಾರಣ ಪಂಚವಕ್ತ್ರ ದೇವಾಲಯ ಮತ್ತು ಮಂಡಿ ಜಿಲ್ಲೆಯೂ ನೀರಿನಲ್ಲಿ ಮುಳುಗಿದೆ.

ಇದನ್ನೂ ಓದಿ : Viral Video: ಮಮ್ಮೀ ನಾ ಡಿಗ್ರೀ ಪಾಸಾದೆ; ವೇದಿಕೆಯ ಮೇಲೆಯೇ ಕೂಗಿದ ಮಗರಾಯ

ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಕುಲು ಜಿಲ್ಲೆಯ ಚರುಡು ಗ್ರಾಮದಲ್ಲಿ ಮುಳುಗಿಹೋಗಿದ್ದ ಮನೆಯೊಂದರಿಂದ ಐವರನ್ನು ರಕ್ಷಿಸಿದೆ. ಬಿಯಾಸ್​ ನದಿಯ ಪಕ್ಕದಲ್ಲಿ ಸಿಕ್ಕಿಹಾಕಿಕೊಂಡಿರುವ ನಾಲ್ಕು ಜನರನ್ನು ರಕ್ಷಿಸುವ ಕಾರ್ಯಾಚರಣೆ ಇನ್ನೂ ಸಾಗಿದೆ ಎಂದು ಎನ್​ಡಿಆರ್​ಎಫ್​ ಅಧಿಕಾರಿಗಳು ಹೇಳಿದ್ಧಾರೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhwinder Singh Sukhu), ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಂಭವವಿದ್ದು, ನದಿಗಳ ಬಳಿ ಹೋಗದಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ಧಾರೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿದ ಮಳೆಯ ಪರಿಣಾಮ ಬಿಯಾಸ್​ನ ನೀರಿನ ಮಟ್ಟ ಹೆಚ್ಚಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ಪ್ರವಾಹ ಉಂಟಾಗಿದೆ. ಕುಲು-ಮನಾಲಿ ರಸ್ತೆಯಲ್ಲಿ ಕಲ್ಲುಬಂಡೆಗಳು ಉರುಳಿ ಬಿದ್ದಿರುವುದರಿಂದ ಕುಲು ಮತ್ತು ಮನಾಲಿ ನಡುವಿನ ಸಂಚಾರವನ್ನು ನಿಷೇಧಿಸಲಾಗಿದೆ.

ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯು ಜಲಾವೃತಗೊಂಡ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಸಂಚಾರಿ, ಪ್ರವಾಸಿ ಮತ್ತು ರೈಲ್ವೇ ಪೊಲೀಸರು ರೈಲುಗಳನ್ನು ರದ್ದುಗೊಳಿಸಿದ್ದಾರೆ. ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಕೋಟಿ ಮತ್ತು ಸನ್ವಾರ ರೈಲು ನಿಲ್ದಾಣಗಳ ನಡುವಿನ ರೈಲ್ವೆಮಾರ್ಗವನ್ನು ಬಂದ್ ಮಾಡಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:48 pm, Mon, 10 July 23