210 ಕೋಟಿ ರೂ.ಗಳ ವಿದ್ಯುತ್ ಬಿಲ್ ನೋಡಿ ತಲೆತಿರುಗಿ ಬಿದ್ದ ಉದ್ಯಮಿ

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮದ ಮಾಲೀಕರು 210 ಕೋಟಿ ರೂ.ಗಳ ವಿದ್ಯುತ್ ಬಿಲ್​ ಪಡೆದಿದ್ದಾರೆ. ಬಿಲ್ ನೋಡಿದ ಉದ್ಯಮ ಮಾಲೀಕರು ಗೊಂದಲಕ್ಕೊಳಗಾದರು. ಕೂಡಲೇ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದರು. 2,10,42,08,405 ರೂಪಾಯಿ ವಿದ್ಯುತ್ ಬಿಲ್ ನೋಡಿ ಉದ್ಯಮಿ ಬೆಚ್ಚಿಬಿದ್ದಿದ್ದಾರೆ.

210 ಕೋಟಿ ರೂ.ಗಳ ವಿದ್ಯುತ್ ಬಿಲ್ ನೋಡಿ ತಲೆತಿರುಗಿ ಬಿದ್ದ ಉದ್ಯಮಿ
Bill
Image Credit source: Etv Bharat

Updated on: Jan 10, 2025 | 10:32 AM

ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಅವರ ತವರು ಜಿಲ್ಲೆ ಹಮೀರ್‌ಪುರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯುತ್ ಇಲಾಖೆ ಮಹಿಳಾ ಉದ್ಯಮಿಯೊಬ್ಬರಿಗೆ 210 ಕೋಟಿ ರೂ.ಗಳ ಬೃಹತ್ ಬಿಲ್ ಕಳುಹಿಸಿದೆ. ಬಿಲ್ ನೋಡಿದ ಉದ್ಯಮಿ ಕೆಲಕಾಲ ಪ್ರಜ್ಞೆ ತಪ್ಪಿದರು. ಆದರೆ, ದೂರಿನ ನಂತರ ವಿದ್ಯುತ್ ಇಲಾಖೆ ಬಿಲ್ ಸರಿಪಡಿಸಿದೆ.

ಇದು ಹಮೀರ್‌ಪುರದ ಭೋರಂಜ್ ಉಪವಿಭಾಗದ ಬೆಹದ್ವಿನ್ ಜತ್ತನ್ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಇಲ್ಲಿ ಉದ್ಯಮಿ ಲಲಿತಾ ಧಿಮಾನ್ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮವನ್ನು ನಡೆಸುತ್ತಿದ್ದಾರೆ.
ಲಲಿತಾ ಅವರಿಗೆ ವಿದ್ಯುತ್ ಇಲಾಖೆ 210 ಕೋಟಿ ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಕಳುಹಿಸಿದೆ. ಈ ವೇಳೆ ಮಹಿಳಾ ಉದ್ಯಮಿ 2,10,42,08,405 ರೂಪಾಯಿ ಬಿಲ್ ನೋಡಿದಾಗ ದಿಗ್ಭ್ರಮೆಗೊಂಡಿದ್ದು, ಕೋಟ್ಯಂತರ ರೂಪಾಯಿ ಬಿಲ್ ನೋಡಿ ಲಲಿತ್ ಧಿಮಾನ್ ಗೆ ದೊಡ್ಡ ಶಾಕ್ ಆಗಿದೆ.

ವಿದ್ಯುಚ್ಛಕ್ತಿ ಮಂಡಳಿ ನೌಕರ ಅವರಿಗೆ ಕೋಟ್ಯಂತರ ರೂಪಾಯಿ ಬಿಲ್ ನೀಡಿದ್ದು, ಬಳಿಕ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಬಳಿಕ ಇದೀಗ 4,047 ರೂಪಾಯಿ ಬಿಲ್ ಬಂದಿದೆ.

ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್‌ ಮೊಸಳೆಗಳು; ವಿಡಿಯೋ ವೈರಲ್‌

ಕುರಿತು ವಿದ್ಯುತ್ ಮಂಡಳಿ ಭೋರಂಜ್‌ನ ಎಸ್‌ಡಿಒ ಅನುರಾಗ್ ಚಾಂಡೇಲ್ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಇಷ್ಟು ಬಿಲ್ ಬಂದಿದೆ. ದೂರು ಸ್ವೀಕರಿಸಿ ಬಿಲ್ ಸರಿಪಡಿಸಿ ಇದೀಗ ಗ್ರಾಹಕರಿಗೆ 4047 ರೂ. ಬಿಲ್ ನೀಡಲಾಗಿದೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಇದನ್ನು ವಿದ್ಯುತ್ ಸಬ್ಸಿಡಿಗೂ ಲಿಂಕ್ ಮಾಡಿದ್ದಾರೆ. ಜನರ ನಡುವೆಯೂ ಸಾಕಷ್ಟು ಚರ್ಚೆ ನಡೆಯಿತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us