Viral: ಈ ಬೈಕ್​ನಲ್ಲಿ ಎಷ್ಟು ಜನರು ಸವಾರಿ ಮಾಡುತ್ತಿದ್ದಾರೆ? ಇದು ಭ್ರಮಾತ್ಮಕ ಚಿತ್ರವಲ್ಲ!

|

Updated on: Aug 10, 2023 | 2:27 PM

Biking : ತಲೆಬರಹ ನೋಡಿ ಇದು ಆಪ್ಟಿಕಲ್ ಇಲ್ಲ್ಯೂಷನ್​ ಎಂದುಕೊಂಡಿರಾ? ಖಂಡಿತ ಅಲ್ಲ, ಇದು ಉತ್ತರ ಪ್ರದೇಶದ ಅಪ್ರಾಪ್ತಬಾಲಕರ ಬೈಕ್ ಸವಾರಿ ದೃಶ್ಯ. ಕಾನೂನು ಉಲ್ಲಂಘಿಸಿರುವ ಈ ಹುಡುಗರ ಬಗ್ಗೆ ನೆಟ್ಟಿಗರು ಕೋಪಗೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ಧಾರೆ. ನೋಡಿ ಈ ವಿಡಿಯೋ.

Viral: ಈ ಬೈಕ್​ನಲ್ಲಿ ಎಷ್ಟು ಜನರು ಸವಾರಿ ಮಾಡುತ್ತಿದ್ದಾರೆ? ಇದು ಭ್ರಮಾತ್ಮಕ ಚಿತ್ರವಲ್ಲ!
ಎಷ್ಟು ಹುಡುಗರು ಈ ಬೈಕ್​ ಮೇಲೆ ಸವಾರಿ ಮಾಡುತ್ತಿದ್ದಾರೆ.
Follow us on

Uttar Pradesh: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಉತ್ತರ ಪ್ರದೇಶದ ಹಾಪುರ್ (Hapur)ನದ್ದು. ನಮ್ಮ ದೇಶದಲ್ಲಿ ದ್ವಿಚಕ್ರವಾಹನದ ಮೂಲಕ ಇಬ್ಬರು ಮಾತ್ರ ಚಲಿಸಬಹುದು. ಬಹಳವೆಂದರೆ ಮೂರು ಜನ. ಆದರೆ ಈ ವಿಡಿಯೋ ನೋಡಿ. ಒಂದಲ್ಲ ಎರಡಲ್ಲ ಬರೋಬ್ಬರಿ… ಎಷ್ಟು? ನೀವೇ ಲೆಕ್ಕ ಹಾಕಿ. ಇವರ ಈ ಬೈಕ್​ಹುಚ್ಚಾಟವನ್ನು ನೋಡಿದ ಕಾರಿನಲ್ಲಿರುವ ವ್ಯಕ್ತಿ ಆಘಾತಕ್ಕೆ ಬಿದ್ದು ಇದನ್ನು ವಿಡಿಯೋ ಮಾಡಿದ್ದಾರೆ. ಈ ಹುಡುಗರ ಹುಚ್ಚುಸಾಹಸಕ್ಕೆ ನೆಟ್ಟಿಗರು ಕಣ್​ಕಣ್​ಬಿಟ್ಟು ನೋಡುತ್ತಿದ್ದಾರೆ.

ಈ ವಿಡಿಯೋ ಅನ್ನು ಆ.9 ರಂದು ಟ್ವೀಟ್ ಮಾಡಲಾಗಿದೆ. ಇದರಲ್ಲಿ ಇನ್ನೂ ಆಘಾತಕಾರಿ ಸಂಗತಿಯೆಂದರೆ ಈ ಬೈಕ್​ನಲ್ಲಿ ಪ್ರಯಾಣಿಸುವವರೆಲ್ಲರೂ ಅಪ್ರಾಪ್ತ ವಯಸ್ಸಿನವರು. ಹುಚ್ಚುಕುದುರೆಯ ಬೆನ್ನೇರಿ ಇವರು ತಮ್ಮ ಜೀವನವನ್ನು ಅಪಾಯಕ್ಕೆ ತಳ್ಳಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಎಲ್ಲಕ್ಕಿಂತ ಮೇಲಾಗಿ ಇವರುಗಳು ಕಾನೂನನ್ನು ಉಲ್ಲಂಘಿಸಿದ್ದಾರೆ.

ಇದನ್ನೂ ಓದಿ : Viral Video: ಮಹಾರಾಷ್ಟ್ರ: ‘ ಬುದ್ಧಿ ಇದೆಯೇ ನಿನಗೆ?’  ಭಯೋತ್ಪಾದಕನಿಗೆ ಕಪಾಳಮೋಕ್ಷ, ಮುಂದೆ?

ಈ ಏಳು ಜನರು ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ಗೆ ಅರ್ಹರಾಗಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆಲವರು ಹೇಳಿದ್ದಾರೆ. ಇಂತವರನ್ನು ಜೈಲಿಗೆ ಹಾಕಿದರೆ ಮಾತ್ರ ಪಾಠ ಕಲಿಯುತ್ತಾರೆ ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral: ಆಸ್ಟ್ರೇಲಿಯಾ; 247 ಮಿಲಿಯನ್​ ವರ್ಷಗಳ ಹಿಂದೆ ಹಲ್ಲಿಜಾತಿಗೆ ಸೇರಿದ್ದ ಜೀವಿಯ ಪಳಿಯುಳಿಕೆ ಪತ್ತೆ

ಭಾರತ ಕೆಂದ್ರ ಮೋಟಾರು ವಾಹನ ಕಾಯಿದೆ 1988ರ ಪ್ರಕಾರ ದ್ವಿಚಕ್ರವಾಹನದ ಮೇಲೆ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಅಕಸ್ಮಾತ್ ಈ ಕಾನೂನನ್ನು ಉಲ್ಲಂಘಿಸಿದಲ್ಲಿ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ : Viral: ಮದುವೆಗೆ ಕರೆಯದೇ ಬಂದ ಅತಿಥಿ; ದಿಗ್ಭ್ರಾಂತಗೊಂಡ ನವದಂಪತಿ

ಉತ್ತರ ಪ್ರದೇಶದ ಪೊಲೀಸರನ್ನು ಟ್ಯಾಗ್ ಮಾಡಿ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲವರು ಮನವಿ ಮಾಡಿಕೊಂಡಿದ್ದಾರೆ. ಒಂದು ಎಸ್​ಯುವಿ ಕಾರಿನಲ್ಲಿ ಹೋಗಬೇಕಾದ ಮಂದಿ ಬೈಕಿನ ಮೇಲೆ ಹೋಗುತ್ತಿದ್ದಾರೆ ಎಂದು ಮತ್ತೊಬ್ಬರು ಒಬ್ಬರು ಹೇಳಿದ್ದಾರೆ. ಇದಕ್ಕಿಂತ ಎತ್ತಿನಬಂಡಿಯೇ ಮೇಲು, ಸುರಕ್ಷಿತವಾಗಿ ಮತ್ತು ಕಾನೂನಿನ ತೊಡಕಿಲ್ಲದೆ ನೀವು ಪ್ರಯಾಣಿಸುತ್ತಿದ್ದಿರಿ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ