Trending : ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆಹಾರ ಪದಾರ್ಥಗಳನ್ನು ಸಂರಕ್ಷಿಸುವ ವಿಧಾನಗಳಿಗೆ ನಾವೆಲ್ಲ ಬಹಳ ಸುಲಭವಾಗಿ ಮೊರೆ ಹೋಗಿದ್ದೇವೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ನೈಸರ್ಗಿಕ ಸಂಪನ್ಮೂಲಗಳ ಸಹಾಯದಿಂದ ಆಹಾರ ಪದಾರ್ಥಗಳನ್ನು ತಾಜಾ ಉಳಿಸಿಕೊಳ್ಳುವ ಉಪಾಯಗಳನ್ನೇ ಪಾಲಿಸುತ್ತಿದ್ದಾರೆ. ಇದೀಗ ಟ್ವೀಟರ್ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಹಂಚಿಕೊಂಡವರು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್. ಹಳ್ಳಿಯ ಮನೆಗಳಲ್ಲಿ ಇಡೀ ದಿನ ಹಾಲನ್ನು ತಾಜಾ ಇರುವಂತೆ ಮಾಡಲು ಏನು ಉಪಾಯ ಕಂಡುಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ.
मेरे घर के इन चूल्हों का कॉन्सेप्ट सीधा है। सुबह दूध के भरे बड़े पतीले (20-25 kg) यहाँ रखे जाते हैं। पूरे दिन धीमी आँच पे पकते हैं। आज भी जारी है। आपने कहीं देखा है ऐसा सिस्टम। pic.twitter.com/GNIkbuUapW
ಇದನ್ನೂ ಓದಿ— Parveen Kaswan, IFS (@ParveenKaswan) October 4, 2022
ನನ್ನ ಮನೆಯಲ್ಲಿರುವ ಈ ಒಲೆಗಳ ಸರಳ ಪರಿಕಲ್ಪನೆಯನ್ನು ಗಮನಿಸಿ. ಸುಮಾರು 20-25 ಲೀಟರ್ ಹಾಲು ತುಂಬಿದ ಪಾತ್ರೆಗಳನ್ನು ಇಲ್ಲಿ ಬೆಳಗ್ಗೆಯೇ ಇಡಲಾಗುತ್ತದೆ. ದಿನವಿಡೀ ಕಡಿಮೆ ಶಾಖದಲ್ಲಿ ಹಾಲು ಕಾಯುತ್ತಲೇ ಇರುತ್ತದೆ. ಇದು ಇಂದಿಗೂ ಮುಂದುವರಿದುಕೊಂಡುಬಂದಿದೆ.’ ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಹಂಚಿಕೊಂಡಿದ್ದಾರೆ ಕಸ್ವಾನ್.
ಇವರ ಇನ್ನೊಂದು ಪೋಸ್ಟ್ನೊಳಗೆ, ಪಂಜರದಂಥ ಸಾಧನದೊಳಗೆ ಕಾಯ್ದ ಹಾಲಿನ ಪಾತ್ರೆಯನ್ನು ಇಟ್ಟಿರುವುದನ್ನು ನೋಡಬಹುದಾಗಿದೆ. ‘ಗೃಹ ತಂತ್ರಜ್ಞಾನ ಬಹಳ ಸರಳವಾಗಿದೆ. ರಾತ್ರಿ ಕರೆಂಟ್ ಇಲ್ಲದಿದ್ದರೂ ಹಾಲು ಚೆನ್ನಾಗಿರಬೇಕು. ಅದಕ್ಕೆ ಹಾಲಿನ ದೊಡ್ಡ ಪಾತ್ರೆಯನ್ನು ಈ ಪಂಜರದಲ್ಲಿ ಇಡಲಾಗುತ್ತದೆ. ಇಂದಿಗೂ ನನ್ನ ತಾಯಿ ಇದೇ ರೀತಿ ಹಾಲನ್ನು ಸಂರಕ್ಷಿಸುತ್ತಿರುವುದು’ ಎಂಬ ಒಕ್ಕಣೆಯನ್ನು ಈ ಪೋಸ್ಟ್ಗೆ ಬರೆದಿದ್ದಾರೆ.
ಅನೇಕರು ಅನೇಕ ರೀತಿಯಲ್ಲಿ ಪ್ರಶ್ನಿಸಿ, ಪ್ರತಿಕ್ರಿಯಿಸಿದ್ದಾರೆ. ಈ ವಿಧಾನ ಬಹಳ ಚೆನ್ನಾಗಿದೆ. ನನ್ನ ಮಕ್ಕಳನ್ನು ರಜೆಗೆ ಅಜ್ಜಿಯ ಮನೆಗೆ ಕಳಿಸಿ ಇಂಥ ಸಹಜ ಸರಳ ವಿಧಾನಗಳನ್ನು ಗಮನಿಸುವಂತೆ ಹೇಳುತ್ತೇನೆ ಎಂದಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು. ಅರೆ ಹಾಲು ಒಡೆಯುವುದಿಲ್ಲವಾ? ಎಂದಿದ್ದಾರೆ ಮತ್ತೊಬ್ಬರು. ನಮ್ಮ ಮನೆಯಲ್ಲಿಯೂ ಇದೇ ವಿಧಾನವನ್ನು ಅನುಸರಿಸುತ್ತೇವೆ ಎಂದಿದ್ದಾರೆ ಮತ್ತೊಬ್ಬರು.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:01 pm, Thu, 6 October 22