
ಇತ್ತೀಚಿಗಂತೂ ರಸ್ತೆ ಬದಿಗಳಲ್ಲಿ, ಕಂಡ ಕಂಡ ಸ್ಥಳಗಳಲ್ಲಿ ಕಸ ಎಸೆದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರೂ ಮಾತ್ರ ಜನ ಇದಕ್ಕೆಲ್ಲ ಕ್ಯಾರೇ ಅನ್ನುತ್ತಿಲ್ಲ. ಮಾತು ಕೇಳದ ಜನರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ಹುಬ್ಬಳ್ಳಿಯ (Hubli) ರಸ್ತೆ ಬದಿಯಲ್ಲಿ, ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ವಿಶಿಷ್ಟ ಬ್ಯಾನರ್ (unique banner) ಹಾಕಲಾಗಿದೆ. ವ್ಯಕ್ತಿಯೊಬ್ಬ ವಿಡಿಯೋ ಹಂಚಿಕೊಂಡು ಪೌರ ಕಾರ್ಮಿಕರ ಕಷ್ಟವನ್ನು ಇಲ್ಲಿ ವಿವರಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿದ್ಯಾವಂತರೆನಿಸಿಕೊಂಡವರಿಗೆ ನಾಗರಿಕ ಪ್ರಜ್ಞೆಯೇ ಇಲ್ಲ ಎಂದು ಟೀಕಿಸಿದ್ದಾರೆ.
ನಾಣಿ ಬಿ ಜಿ (Nani B G) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಯುವಕನೊಬ್ಬ ಹುಬ್ಬಳ್ಳಿಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಬದಿಯಲ್ಲಿ ಹಾಕಿದ್ದ ಬ್ಯಾನರ್ ಗಮನಿಸಿದ್ದಾನೆ. ವಿಡಿಯೋ ಮಾಡಿಕೊಂಡು ಪೌರ ಕಾರ್ಮಿಕರ ಕಷ್ಟವನ್ನು ವಿವರಿಸಿದ್ದಾನೆ.
ಈ ಬ್ಯಾನರ್‌ನಲ್ಲಿ, ಇಲ್ಲಿ ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಈ ಕಸದಂತೆ ನಿಮ್ಮ ಜೀವನವು ಆದಷ್ಟು ಬೇಗನೆ ಕೊಳೆತು ಹೋಗಲಿ ನೊಂದ ಪೌರಕಾರ್ಮಿಕರು’ ಎಂದು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: “22,000 ರೂ. ಖರ್ಚಾಗಿದೆ, ಕ್ಷಮಿಸಿ”: ಕದ್ದ ಚಿನ್ನ-ಹಣ ವಾಪಸ್ ತಂದು ಸಾರಿ ಪತ್ರವಿಟ್ಟ ಕಳ್ಳರು
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಲ್ಲಾ ತಿಳ್ಕೊಳ್ಳಿ, ನಮ್ಮ ಹುಬ್ಬಳ್ಳಿಯನ್ನು ಸ್ವಚ್ಛವಾಗಿಡಿ ಎಂದು ಬರೆದಿದ್ದಾರೆ. ಮತ್ತೊಬ್ಬರು, ಕಸ ಹಾಕುವವರಿಗೆ ಈ ಬ್ಯಾನರ್ ಓದುವ ತಾಳ್ಮೆ ಇಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪೌರ ಕಾರ್ಮಿಕರನ್ನು ನೋಡುವಾಗ ತುಂಬಾ ಬೇಜಾರ್ ಆಗುತ್ತೆ, ಆದರೆ ಈ ಜನಗಳಿಗೆ ಬುದ್ಧಿನೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Wed, 26 August 26