
ಎಲ್ಲರಂತೆ ನಾವು ಕೂಡ ಬದುಕಬೇಕು, ಅಂದುಕೊಂಡದ್ದು ಖರೀದಿಸಬೇಕು, ಹೀಗೆ ನೂರಾರು ಆಸೆಗಳಿರುತ್ತದೆ. ಈ ಎಲ್ಲಾ ಆಸೆ ಕನಸುಗಳನ್ನು ಪೂರೈಸಿಕೊಳ್ಳಲು ಉದ್ಯೋಗವೊಂದು (education) ಕೈಯಲ್ಲಿದ್ದರೆ ಚಂದ. ಆದರೆ ಕೆಲವರು ತಾವು ಉದ್ಯೋಗ ಮಾಡುತ್ತಿರುವ ಕ್ಷೇತ್ರದಲ್ಲಿ ಎಷ್ಟೇ ಅನಿವಾರ್ಯವಾದರೂ ದುಡಿಯುತ್ತಾರೆ. ಅಧಿಕ ಒತ್ತಡವೆಂದಾಗ ಆ ಉದ್ಯೋಗ ತೊರೆದು ಬೇರೆ ಉದ್ಯೋಗ ಹುಡುಕುತ್ತಾರೆ. ಆದರೆ ಚೆನ್ನಾಗಿ ಓದಿಕೊಂಡಿದ್ದರೆ ಉದ್ಯೋಗ ಹುಡುಕಬಹುದು, ಓದಿಲ್ಲವೆಂದಾದರೆ ಉದ್ಯೋಗ ಸಿಗುವುದೇ ಕಷ್ಟ. ಹೌದು, ಚೀನಾದ (China) ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುತ್ತಿರುವ ಯುವಕನ ಪರಿಸ್ಥಿತಿಯು ಹೀಗೆಯೇ ಆಗಿದೆ. ಓದುವ ವಯಸ್ಸಿನಲ್ಲಿ ಓದದೇ, ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ ಇದೀಗ ತಾನು ಡೆಲಿವರಿ ಬಾಯ್ ಆಗಿ ಎಷ್ಟು ಕಷ್ಟಪಡುತ್ತಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ.
chinaminutes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಯುವಕನು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಹೋರಾಟದ ಬದುಕನ್ನು ನೆನೆದು ಕಣ್ಣೀರು ಹಾಕಿದ್ದಾನೆ. ನನಗೆ ಓದಲು ಇಷ್ಟವಿರಲಿಲ್ಲ. ಹೀಗಾಗಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಿಲ್ಲ. ಶಿಕ್ಷಕರು ತನ್ನನ್ನು ಚೆನ್ನಾಗಿ ಓದು, ಅರ್ಧಕ್ಕೆ ಶಿಕ್ಷಣವನ್ನು ಬಿಡಬೇಡ ಎಂದು ಎಷ್ಟು ಹೇಳಿದರೂ ನಾನು ಕೇಳಲಿಲ್ಲ. ಸಣ್ಣ ವಯಸ್ಸಿನಲ್ಲಿ ಉದ್ಯೋಗ ಪಡೆದು ಬದುಕಿನಲ್ಲಿ ಗೆಲ್ಲುವೆ ಎನ್ನುವ ಭರವಸೆಯಿಂದ ಓದು ತ್ಯಜಿಸಿದೆ. ಆದರೆ ತಾನು ಈ ಬದುಕಿನಲ್ಲಿ ಸೋತಿದ್ದೇನೆ. ಈಗ ಎಷ್ಟು ಶಿಕ್ಷಣ ಎಷ್ಟು ಮುಖ್ಯ ಎನ್ನುವುದು ನನಗೆ ಈಗ ತಿಳಿಯುತ್ತಿದೆ ಎಂದಿದ್ದಾನೆ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೂ ಈ ಕ್ಷೇತ್ರದಲ್ಲಿ ತಾನು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಬದುಕು ದಿನನಿತ್ಯ ಹೋರಾಟ. ನಾನು ಹತ್ತು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನಾಯಿಯಂತೆ ದಣಿದಿದ್ದೇನೆ. ನಾನು ಒಂದು ಕ್ಷಣವು ಸುಮ್ಮನೆ ಕೂರುವ ಪ್ರಯತ್ನ ಮಾಡಿಲ್ಲ. ನಾನು ಹಾಗೆ ಕುಳಿತುಕೊಂಡರೆ ತನ್ನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಇದುವೇ ನನ್ನ ಜೀವನದ ದೊಡ್ಡ ಚಿಂತೆಯಾಗಿದೆ. ನನ್ನನ್ನು ಹೆತ್ತು ಬೆಳೆಸಿದ ನನ್ನ ಹೆತ್ತವರಿಗೆ ಒಳ್ಳೆಯ ಮಗನಾಗಲಿಲ್ಲ. ಅವರಿಗೆ ಒಳ್ಳೆಯ ಜೀವನ ನೀಡಲು ಸಾಧ್ಯವಾಗಿಲ್ಲ ಎನ್ನುವ ಬೇಜಾರು ನನಗೆ ಇದೆ ಎಂದು ಹೇಳಿ ಕಣ್ಣೀರು ಹಾಕಿದ್ದಾನೆ.
ಇದನ್ನೂ ಓದಿ: Viral: 7.3 ಕಿ.ಮೀ ಕ್ರಮಿಸಲು ನನಗೆ 73 ನಿಮಿಷಗಳು ಬೇಕೇ ಬೇಕು; ಇದು ನನ್ನ ದಿನನಿತ್ಯದ ಪಾಡು
ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೂ ಈ ಯುವಕನ ಕಷ್ಟ ನೋಡಿ ಮರುಗಿದ್ದಾರೆ. ಬಳಕೆದಾರರೊಬ್ಬರು, ದಯವಿಟ್ಟು ಕಣ್ಣೀರು ಹಾಕಬೇಡಿ, ಡಿಗ್ರಿ ಪಡೆದುಕೊಂಡಿವರು ಕೂಡ ದಿನನಿತ್ಯ ಹೋರಾಟ ನಡೆಸುತ್ತಲೇ ಇದ್ದಾರೆ, ಹೆಚ್ಚು ಚಿಂತಿಸಬೇಡಿ ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ನಾನು ಒಳ್ಳೆಯ ಶಿಕ್ಷಣ ಪಡೆದುಕೊಂಡಿದ್ದೇನೆ. ಆದರೆ ನನ್ನ ಪರಿಸ್ಥಿತಿ ಕೂಡ ನಿಮ್ಮಂತೆಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಬದುಕಿನಲ್ಲಿ ಯಾವುದೇ ಚಿಂತೆ ಬೇಡ. ನಿಮ್ಮಿಂದ ಎಲ್ಲವೂ ಸಾಧ್ಯ. ಯಾವುದರ ಬಗ್ಗೆ ಯೋಚನೆ ಮಾಡದೇ ಮುನ್ನುಗ್ಗಿ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ