ನಿಮ್ಮ ಗುರಿ ತಲುಪಲು ನೀವು ಯಾವ ಏಣಿಯನ್ನು ಏರಿದರೆ ಸೂಕ್ತ ಎನ್ನಿಸುತ್ತದೆ?

| Updated By: ಶ್ರೀದೇವಿ ಕಳಸದ

Updated on: Nov 10, 2022 | 4:00 PM

Consistency : ಐಎಎಸ್​ ಅಧಿಕಾರಿ ಅವನೀಶ ಶರಣ ಈ ಚಿತ್ರದ ಮೂಲಕ ಬದುಕಿನ ಗುರಿಗೆ ಸಂಬಂಧಿಸಿದ ಒಂದು ಗುಟ್ಟನ್ನು ಹೇಳಿದ್ದಾರೆ. ಇಲ್ಲಿರುವ ಎರಡು ಏಣಿಗಳಲ್ಲಿ ಯಾವ ಏಣಿಯನ್ನು ಯಾಕೆ ಏರಬೇಕು ಎನ್ನುವುದನ್ನು ತಿಳಿಸಿದ್ದಾರೆ.

ನಿಮ್ಮ ಗುರಿ ತಲುಪಲು ನೀವು ಯಾವ ಏಣಿಯನ್ನು ಏರಿದರೆ ಸೂಕ್ತ ಎನ್ನಿಸುತ್ತದೆ?
IAS officer shares a powerful life-lesson about consistency
Follow us on

Viral Video : ಇಲ್ಲಿ ಎರಡು ಏಣಿಗಳಿವೆ. ಇಬ್ಬರು ವ್ಯಕ್ತಿಗಳು ಆಯಾ ಏಣಿಯನ್ನು ಏರುತ್ತಿದ್ದಾರೆ. ಒಬ್ಬ ಇನ್ನೂ ಏರುವ ಹಂತದಲ್ಲಿದ್ದಾನೆ. ಇನ್ನೊಬ್ಬ ಆಗಲೇ ಏರಿ ಗುರಿ ತಲುಪುವ ಹಂತದಲ್ಲಿದ್ದಾನೆ. ಆದರೆ ಏಣಿಗಳಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ ಗಮನಿಸಿದ್ದೀರಾ? ಒಂದು ಏಣಿಗೆ ಕಡಿಮೆ ಮೆಟ್ಟಿಲುಗಳಿದ್ದು ಅವುಗಳ ಅಂತರ ಹೆಚ್ಚಾಗಿದೆ. ಇನ್ನೊಂದೆಡೆ ಜಾಸ್ತಿ ಮೆಟ್ಟಿಲುಗಳಿದ್ದು ಅವುಗಳ ಅಂತರ ಕಡಿಮೆಯಾಗಿದೆ. ಈ ಚಿತ್ರದ ಮೂಲಕ ಬದುಕಿನಲ್ಲಿ ‘ಸ್ಥಿರತೆ’ ಎನ್ನುವುದು ಎಷ್ಟು ಮುಖ್ಯ ಮತ್ತು ಅದಕ್ಕಾಗಿ ಸಣ್ಣಸಣ್ಣ ಮೆಟ್ಟಲುಗಳನ್ನು ಏರುವುದು ಎಷ್ಟು ಮಹತ್ವಪೂರ್ಣ ಎಂಬುದನ್ನು ಐಎಎಸ್​ ಅಧಿಕಾರಿ ನೆಟ್ಟಿಗರಿಗೆ ತಿಳಿಸಿಕೊಟ್ಟಿದ್ದಾರೆ.

ಐಎಎಸ್​ ಅಧಿಕಾರಿ ಅವನೀಶ್ ಶರಣ್ ಆಗಾಗ ಇಂಥ ಪೋಸ್ಟ್​ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಮಗುವಿನಂತೆ ಸಣ್ಣ ಸಣ್ಣ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿ ನಿಮ್ಮ ಗುರಿ ತಲುಪುವುದು ಸಾಧನೆಯ ಏಕೈಕ ಮಾರ್ಗ ಎಂಬುದನ್ನು ಈ ಚಿತ್ರದ ಮೂಲಕ ಅವರು ನೆನಪಿಸಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್​ ಮೆಚ್ಚಿದ್ದಾರೆ. 400ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಸರ್, ಮೂರು ಸಲ ನಾನು ಯುಪಿಎಸ್​ಸಿ ಪರೀಕ್ಷೆ ಬರೆದೆ. ಪ್ರಥಮ ಹಂತವನ್ನೇ ಇನ್ನೂ ಪಾಸಾಗಿಲ್ಲ, ದಯವಿಟ್ಟು ಮಾರ್ಗದರ್ಶನ ಮಾಡಿ ಎಂದು ಒಬ್ಬರು ಕೇಳಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಬಹಳ ಮಹತ್ತರವಾದ ಪಾಠವನ್ನು ನೀಡಿದ್ದೀರಿ ಸರ್​ ಧನ್ಯವಾದ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಚಿತ್ರವನ್ನು ಪ್ರಿಂಟ್ ಮಾಡಿ ಗೋಡೆಗೆ ಅಂಟಿಸಿಕೊಳ್ಳುತ್ತೇನೆ, ಇದು ನನ್ನನ್ನು ಉತ್ತೇಜನಗೊಳಿಸುತ್ತಿದೆ ಎಂದಿದ್ಧಾರೆ ಇನ್ನೂ ಒಬ್ಬರು. ಸಣ್ಣ ಹೆಜ್ಜೆಗಳು ಆದರೆ ದೃಢವಾದ ಹೆಜ್ಜೆಗಳು ಎಂದಿದ್ದಾರೆ ಮಗದೊಬ್ಬರು. ಆದರೆ, ಇದೊಂದು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದಿದ್ದಾರೆ ಯಾರೋ ಒಬ್ಬರು.

ನಿಮಗೇನು ಅನ್ನಿಸುತ್ತೆ ಈ ಚಿತ್ರವನ್ನು ನೋಡುತ್ತಿದ್ದರೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 3:59 pm, Thu, 10 November 22