Viral: ಮನೆಯಲ್ಲಿ ಹಾಲು ಮಿಕ್ಕರೆ ಅದನ್ನು ವೇಸ್ಟ್‌ ಮಾಡುವ ಬದಲು ಹೀಗೆ ಉಪಯೋಗಿಸಿ

ಕೆಲವೊಂದು ಬಾರಿ ಹಾಲು ತೆಗೆದುಕೊಂಡು ಬಂದ್ರೆ ಅದು ಖಾಲಿಯಾಗದೆ ಫ್ರಿಡ್ಜ್‌ನಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಮತ್ತು ಅದು ಹಾಳಾಗಿ ವೇಸ್ಟ್‌ ಆಗಿ ಬಿಡುತ್ತದೆ. ಹಾಗಿರುವಾಗ ಹಾಲನ್ನು ವ್ಯರ್ಥ ಮಾಡುವ ಬದಲು ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದು. ಹೌದು ಏನಾದ್ರೂ ಹಾಲು ಮಿಕ್ಕರೆ ಅದರಿಂದ ಮನೆಯಲ್ಲಿಯೇ ಸುಲಭ ರೀತಿಯಲ್ಲಿ ಸೂಪರ್‌ ಟೇಸ್ಟಿ ಪನೀರ್‌ ತಯಾರಿಸಬಹುದು. ಬ್ಲಾಗರ್‌ ಒಬ್ರು ಸೋಷಿಯಲ್‌ ಮೀಡಿಯಾದಲ್ಲಿ ಈ ಸಿಂಪಲ್‌ ಟಿಪ್ಸ್‌ ಶೇರ್‌ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಮನೆಯಲ್ಲಿ ಹಾಲು ಮಿಕ್ಕರೆ ಅದನ್ನು ವೇಸ್ಟ್‌ ಮಾಡುವ ಬದಲು ಹೀಗೆ ಉಪಯೋಗಿಸಿ
ವೈರಲ್​ ವಿಡಿಯೋ
Edited By:

Updated on: Feb 04, 2025 | 3:19 PM

ವ್ಲಾಗರ್‌, ಬ್ಲಾಗರ್‌ಗಳು ಅಡುಗೆ, ಟ್ರಾವೆಲ್‌, ಲೈಫ್‌ಸ್ಟೈಲ್‌, ಮೇಕಪ್‌, ಕಿಚನ್‌ ಟಿಪ್ಸ್‌ ಅಂತೆಲ್ಲಾ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ರೀತಿಯ ಕಂಟೆಂಟ್‌ಗಳ ಬಗ್ಗೆ ವಿಡಿಯೋ ಅಪ್ಲೋಡ್‌ ಮಾಡುತ್ತಿರುತ್ತಾರೆ. ಹೀಗೆ ಬ್ಲಾಗರ್‌ಗಳು ನೀಡುವ ಅದೆಷ್ಟೋ ಟಿಪ್ಸ್‌ ಹಲವು ಮಂದಿಗೆ ಉಪಯೋಗಕ್ಕೆ ಬಂದಿದೆ. ಇದೀಗ ಇಲ್ಲೊಬ್ರು ಬ್ಲಾಗರ್‌ ಮನೆಯಲ್ಲಿ ಹಾಲು ಏನಾದ್ರೂ ಮಿಕ್ಕರೆ ಅದನ್ನು ವೇಸ್ಟ್‌ ಮಾಡದೆ ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂಬ ಟಿಪ್ಸ್‌ ಒಂದನ್ನು ನೀಡಿದ್ದಾರೆ. ಹೌದು ಮಿಕ್ಕ ಹಾಲಿನಿಂದ ಸುಲಭವಾಗಿ ಸೂಪರ್‌ ಟೇಸ್ಟಿ ಪನೀರ್‌ ತಯಾರಿಸಿ ಎಂದು ಹೇಳಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ನ್ಯೂಯಾರ್ಕ್‌ನ ಫುಡ್‌ ಬ್ಲಾಗರ್‌ ಆಗಿರುವಂತಹ ರಮ್ಯಾ ರಾವುರಿ (eatsbyramya) ಮನೆಯಲ್ಲಿ ಮಿಕ್ಕ ಹಾಲನ್ನು ವೇಸ್ಟ್‌ ಮಾಡದೆ ಅದರಿಂದ ಸುಲಭವಾಗಿ ಯಾವ ರೀತಿ ಪನೀರ್‌ ತಯಾರಿಸಬಹುದು ಎಂಬ ಸಿಂಪಲ್‌ ಟಿಪ್ಸ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ (ಕೃಪೆ: eatsbyramya)

ನಾನು ಇಲ್ಲಿ ಒಬ್ಬಳೇ ವಾಸಿಸುವುದರಿಂದ ಮನೆಗೆ ತಂದ ಹಾಲು ಖಾಲಿಯಾಗುವುದಿಲ್ಲ, ಆಗ ನಾನು ಪನೀರ್‌ ತಯಾರಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ, ಹಾಲು ಒಡೆದ ನಂತರ ಅದರಿಂದ ನೀರನ್ನು ಸೋಸಿ ಬಳಿಕ ಅದಕ್ಕೆ ಸ್ವಲ್ಪ ಮಸಾಲೆಗಳನ್ನು ಸೇರಿಸಿ ಮಿಕ್ಸ್‌ ಮಾಡಿ, ಅದನ್ನು ಬಿಗಿಯಾಗಿ ಕಟ್ಟಿಟ್ಟು ಸುಲಭವಾಗಿ ಪನೀರ್‌ ತಯಾರಿಸುತ್ತಾರೆ. ಹೀಗೆ ತಯಾರಿಸಿದ ಹೋಮ್‌ ಮೇಡ್‌ ಪನೀರ್‌ನಿಂದ ಪನೀರ್‌ ಬುರ್ಜಿಯನ್ನು ತಯಾರಿಸಿದ್ದಾರೆ.

ಇದನ್ನೂ ಓದಿ: ರೂಮ್‌ ಬುಕ್‌ ಮಾಡಿ ಕೊನೆಗೆ ರೈಲ್ವೆ ಸ್ಟೇಷನ್‌ನಲ್ಲಿ ಮಲಗಬೇಕಾಯಿತು; ಓಯೋದಲ್ಲಾದ ಕಹಿ ಅನುಭವ ಹಂಚಿಕೊಂಡ ಮಹಿಳೆ

ಜನವರಿ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಟಿಪ್ಸ್‌ ಬಹಳ ಕೂಲ್‌ ಆಗಿದೆ, ನಾನು ಕೂಡಾ ಇದನ್ನು ಟ್ರೈ ಮಾಡ್ತೇನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಾವ್ಹ್‌ ಪನೀರ್‌ ಮಾಡೋದು ಇಷ್ಟು ಸುಲಭ ಅಂತ ನನ್ಗೆ ಗೊತ್ತೇ ಇರ್ಲಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ