Viral Video:ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ಮಿಲಿಯಮ್ಸ್‌; ಸಂಭ್ರಮ ಹೇಗಿತ್ತು ನೋಡಿ…

| Updated By: ಅಕ್ಷತಾ ವರ್ಕಾಡಿ

Updated on: Jun 09, 2024 | 11:58 AM

ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ಮಿಲಿಯಮ್ಸ್‌ ಹಾಗೂ ಅವರ ಸಹದ್ಯೋಗಿ ಬುಚ್‌ ವಿಲ್ಮೋರ್‌ ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಯಶಸ್ವಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. ಈ ಒಂದು ಖುಷಿಯ ಕ್ಷಣವನ್ನು ಸುನೀತಾ ವಿಲಿಯಮ್ಸ್‌ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದು, ಈ ಸಂಭ್ರಮದ ಕ್ಷಣವನ್ನು ನಾಸಾ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Viral Video:ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ಮಿಲಿಯಮ್ಸ್‌; ಸಂಭ್ರಮ ಹೇಗಿತ್ತು ನೋಡಿ...
Follow us on

ಬಾಹ್ಯಾಕಾಶ ನೌಕೆ ಬೋಯಿಂಗ್‌ ಸ್ಟಾರ್‌ಲೈನರ್‌ನಲ್ಲಿ ಮೂರನೇ ಬಾರಿಗೆ ಗಗನಕ್ಕೇರಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮತ್ತು ಅವರ ಸಹದ್ಯೋಗಿ ಬುಚ್‌ ವಿಲ್ಮೋರ್‌ ಯಶಸ್ವಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ್ದಾರೆ. ಸಂಭ್ರಮದಿಂದ ನರ್ತಿಸುತ್ತಾ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಸುನೀತಾ ವಿಲಿಯಮ್ಸ್‌ ಅವರ ವಿಡಿಯೋ ಒಂದನ್ನು ನಾಸಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವಿಶ್ವವಿಖ್ಯಾತ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಮೂರನೇ ಬಾರಿಗೆ ಯಶಸ್ವಿ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್‌ ವಿಲ್ಮೋರ್‌ ಮತ್ತು ಸುನೀತಾ ವಿಲಿಯಮ್ಸ್‌ ಅವರು 2024 ರ ಮೇ 07ರಂದು ಸಂಚರಿಸಿದ್ದ ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ ಗುರುವಾರ (ಜೂನ್.‌ 06) ದಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ ಸಂತೋಷದ ಕ್ಷಣವನ್ನು ಸುನೀತಾ ವಿಲಿಯಮ್ಸ್‌ ನೃತ್ಯದ ಮೂಲಕ ಸಂಭ್ರಮಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗಿದೆ.

ಈ ಕುರಿತ ವಿಡಿಯೋವೊಂದನ್ನು ನಾಸಾ ಸಂಸ್ಥೆ ತನ್ನ ಅಧೀಕೃತ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದೆ. ವೈರಲ್‌ ವಿಡಿಯೋದಲ್ಲಿ ಸುನೀತಾ ವಿಲಿಯಮ್ಸ್‌ ಮತ್ತು ಅವರ ಸಹದ್ಯೋಗಿಗಳು ಯಶಸ್ವಿಯಾಗಿ ಬಾಹ್ಯಾಕಾಶ ತಲುಪಿತ ಖುಷಿಯನ್ನು ಸಂಭ್ರಮಿಸುತ್ತಿರುವ ದೃಶ್ಯವನ್ನು ಕಾಣಬಹುದು. ಇಲ್ಲಿ ಸುನೀತಾ ವಿಲಿಯಮ್ಸ್‌ ನೃತ್ಯ ಮೂಡುವ ಮೂಲಕ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಸಿಗ್ನಲ್ ಜಂಪ್​; 4 ಪಲ್ಟಿ ಹೊಡೆದ ಕಾರು, ಭೀಕರ ಅಪಘಾತದ ವಿಡಿಯೋ ವೈರಲ್

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಯಶಸ್ವಿಯಾಗಿ ಬಾಹ್ಯಾಕಾಶ ತಲುಪಿದ ಗಗನಯಾತ್ರಿಗಳಿಗೆ ನೆಟ್ಟಿಗರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Sun, 9 June 24