ಐಷಾರಾಮಿ ಮನೆಗಿಂತ ಸಣ್ಣ ಅಪಾರ್ಟ್ಮೆಂಟ್ ಗಳೇ ಬೆಸ್ಟ್, ಅಸಲಿ ವಿಚಾರ ಬಹಿರಂಗ ಪಡಿಸಿದ ಭಾರತೀಯ ಮಹಿಳೆ

ಈಗಿನ ಕಾಲದಲ್ಲಿ ಬಹುತೇಕರಿಗೆ ಸ್ವಂತ ಹಾಗೂ ದೊಡ್ಡ ಮನೆಯಿರಬೇಕು ಎನ್ನುವ ಆಸೆಯಿರುತ್ತದೆ. ತಮ್ಮ ಕನಸಿನ ಮನೆ ಅಥವಾ ಅಪಾರ್ಟ್ಮೆಂಟ್ ಖರೀದಿಸಲು ತಾವು ದುಡಿದ ಅಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಪುಟಾಣಿ ಮಕ್ಕಳೊಂದಿಗೆ ಲಂಡನ್ ನಲ್ಲಿರುವ ಸಣ್ಣ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದು, ತಮ್ಮಂತೆಯೇ ಬದುಕು ನಡೆಸುತ್ತಿರುವ ಅದೆಷ್ಟೋ ಜನರಿಗೆ ಇದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ. ಈ ಮಹಿಳೆಯ ಮಾತು ಕೇಳುತ್ತಿದ್ದಂತೆ ಎಲ್ಲರೂ ಮೆಚ್ಚಿಕೊಂಡಿದ್ದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಐಷಾರಾಮಿ ಮನೆಗಿಂತ ಸಣ್ಣ ಅಪಾರ್ಟ್ಮೆಂಟ್ ಗಳೇ ಬೆಸ್ಟ್, ಅಸಲಿ ವಿಚಾರ ಬಹಿರಂಗ ಪಡಿಸಿದ ಭಾರತೀಯ ಮಹಿಳೆ
ವೈರಲ್ ವಿಡಿಯೋ
Image Credit source: Instagram

Updated on: May 11, 2025 | 9:53 AM

ಒಂದು ಸುಂದರವಾದ ಮನೆ (house) ಯಿರಬೇಕು, ಸಣ್ಣ ಮನೆಯಿದ್ದರೆ ನಮ್ಮ ಸಂಬಂಧಿಕರು ನೋಡುವ ದೃಷ್ಟಿಯೇ ಬೇರಾಗುತ್ತದೆ. ಹೀಗಾಗಿ ಆರ್ಥಿಕವಾಗಿ ಸದೃಢವಾಗಿಲ್ಲದಿದ್ದರೂ ಸಾಲ ಮಾಡಿ ಅಪಾರ್ಟ್ಮೆಂಟ್ ಖರೀದಿಸಿ ಇಲ್ಲವಾದರೆ ಮನೆ ಕಟ್ಟಿ ತಮ್ಮ ಕನಸ್ಸನ್ನು ಈಡೇರಿಸಿಕೊಳ್ಳುವವರನ್ನು ನೋಡಿರಬಹುದು. ಆದರೆ ಬಾಡಿಗೆ ಮನೆಯಲ್ಲಿ ವಾಸವಿರುವವರು ಅಥವಾ ಸಣ್ಣ ಮನೆ ಹೊಂದಿರುವವರು ಮನೆಯಿಲ್ಲ ಎಂದು ಕೊರಗುವುದನ್ನು ನೋಡಿರಬಹುದು. ಲಂಡನ್ (landon) ನಲ್ಲಿ ವಾಸವಿರುವ ಭಾರತೀಯ ಮೂಲದ ಮಹಿಳೆ (indian women) ಯೊಬ್ಬರು ತನ್ನ ಏಳು ತಿಂಗಳ ಮಗುವಿನೊಂದಿಗೆ ಲಂಡನಿನ ಸಣ್ಣ ಅಪಾರ್ಟ್ಮೆಂಟ್ ನಲ್ಲಿ ಹೇಗೆ ವಾಸಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಸಣ್ಣ ಅಪಾರ್ಟ್ಮೆಂಟ್ ಹಾಗೂ ಮನೆ ಹೊಂದಿರುವವರಿಗೆ ಸಲಹೆ ನೀಡಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ.

tasgilouu ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು ನತಾಶಾ ಎನ್ನುವ ಮಹಿಳೆ ಸಣ್ಣ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು  ವಿವರಿಸುತ್ತಿರುವುದನ್ನು ಕಾಣಬಹುದು. ನತಾಶಾ ಎಂಬ ಯುವತಿ ಇಂತಹ ಸಣ್ಣ ಮನೆಗಳಲ್ಲಿ ವಾಸಿಸುವ ಸಕಾರಾತ್ಮಕ ಅಂಶಗಳ ಬಗ್ಗೆ ಮಾತನಾಡಿದ್ದು, ಸ್ಥಳಾವಕಾಶದ ಮಿತಿಯಿಂದಾಗಿ, ಮನೆಗೆ ಬೇಕಾದ ಪ್ರತಿಯೊಂದು ವಸ್ತುವನ್ನು ಎಚ್ಚರಿಕೆಯಿಂದ ಖರೀದಿಸುತ್ತೇನೆ. ಹೀಗೆ ಮಾಡಿದರೆ ಹೆಚ್ಚು ಹಣ ಉಳಿಸಬಹುದು. ಈ ಹಣವನ್ನು ಕುಟುಂಬದೊಂದಿಗೆ ಟ್ರಿಪ್ ಹೋಗಲು ಅಥವಾ ಬೇರೆ ಏನನ್ನಾದರೂ ಖರೀದಿಸಲು ಬಳಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ
ಬಲುಬುದ್ಧಿವಂತ ಪಾಕ್ ರಕ್ಷಣಾ ಸಚಿವ, ಅಸಲಿ ವಿಚಾರ ಇಲ್ಲಿದೆ
ಹಾಡು ಹಾಡಿ ದಾಂಪತ್ಯ ಉಳಿಸಿಕೊಂಡ ಪತಿ, ಲಾಯರ್ ಶಾಕ್ ದಂಪತಿ ರಾಕ್
ಹೆಚ್ಚುವರಿ ದರ ವಸೂಲಿ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ
ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂಧೂರ, ಕಲಾವಿದರ ಮೈರೋಮಾಂಚನಕಾರಿ ಮಾತುಗಳು

ಇದನ್ನೂ ಓದಿ : ಜೋಕರಾದ ಪಾಕ್ ರಕ್ಷಣಾ ಸಚಿವ: ಭಾರತಕ್ಕೆ ನಾವಿರುವ ಸ್ಥಳ ಗೊತ್ತಾಗುತ್ತದೆ, ಅದಕ್ಕೆ ಅವರ ಡ್ರೋನ್​​ಗಳನ್ನು ತಡೆಯುತ್ತಿಲ್ಲ

ಸಣ್ಣ ಮನೆಯಿರುವುದರಿಂದ ಹೆಚ್ಚು ಸ್ಥಳವಿರುವುದಿಲ್ಲ. ಹೀಗಾಗಿ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕಾಗುತ್ತದೆ.  ಚಿಕ್ಕ ಮನೆಯಾದ್ದರಿಂದ, ಯಾವಾಗಲೂ ಮಕ್ಕಳ ಪಕ್ಕದಲ್ಲೇ ಇರುತ್ತೇವೆ, ಅವರಿಗೆ ಬೇಗನೆ ಹತ್ತಿರವಾಗಬಹುದು ಎಂದು ಹೇಳುವುದನ್ನು ನೋಡಬಹುದು. ಸ್ಥಳವಕಾಶವು ಕಡಿಮೆ ಇರುವ ಕಾರಣ ಮನೆ ಮಂದಿಯೆಲ್ಲಾ ಒಟ್ಟಿಗೆ ಇರಲು ಸಾಧ್ಯ. ದೊಡ್ಡದಾದ ಮನೆಗಳಲ್ಲಿ ಎಲ್ಲಾ ಅನುಕೂಲಗಳಿದ್ದರೂ ಕೂಡ ಈ ರೀತಿ ಪ್ರಯೋಜನಗಳಿಲ್ಲ. ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಅನೇಕರಿಗೆ ಇದನ್ನು ಹೇಳುತ್ತಿದ್ದೇನೆ ಎಂದು ಹತ್ತು ಹಲವು ಪ್ರಯೋಜನಗಳನ್ನು ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದು ತಿಳಿದೇ ಇರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ. ಮತ್ತೊಬ್ಬರು, ‘ಈಗಿನ ಕಾಲದಲ್ಲಿ ಎಲ್ಲರೂ ದೊಡ್ಡ ದೊಡ್ಡ ಸವಲತ್ತು ಇರುವ ಮನೆಯೇ ಬೇಕು, ಅಂತಹ ಮನೆ ಅಥವಾ ಅಪಾರ್ಟ್ಮೆಂಟ್ ಹೊಂದಲು ಶ್ರಮವಹಿಸಿ ದುಡಿಯುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ದುಬಾರಿ ದುನಿಯಾದಲ್ಲಿ ಸಣ್ಣ ಅಪಾರ್ಟ್ಮೆಂಟ್ ಗಳನ್ನು ಹೊಂದುವುದು ಅಷ್ಟೇ ದುಬಾರಿ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ