Viral: ವಯಸ್ಸು 45 ಆದ್ರೂ ಯಾಕಿನ್ನು ಮದುವೆಯಾಗಿಲ್ಲ ಎಂದು ಕೇಳಿದ್ದಕ್ಕೆ ನೆರಮನೆಯವನನ್ನೇ ಕೊಂದ ವ್ಯಕ್ತಿ
ಹುಡುಗರಿಗೆ 30 ವಯಸ್ಸು ಆಗ್ತಾ ಇದ್ದಂಗೆ ಸಂಬಂಧಿಕರು, ನೆರೆಹೊರೆಯವರು ಯಾವಗಪ್ಪಾ ಮದುವೆ, ಇನ್ನೇನು ವಯಸ್ಸಾಯ್ತಲ್ಲ ಬೇಗ ಒಂದು ಮಾದುವೆಯಾಗ್ಬಿಡು ಅಂತೆಲ್ಲಾ ಹೇಳುತ್ತಿರುತ್ತಾರೆ. ಇನ್ನೂ ಕೆಲವರು ವಯಸ್ಸಿಗೆ ಸರಿಯಾಗಿ ಮದುವೆಯಾಗದಿದ್ರೆ ತಮಾಷೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯ ಜೊತೆಯು ಆತನ ನೆರೆಮನೆಯವನೊಬ್ಬ ವಯಸ್ಸು 45 ಆಯ್ತು, ಬೇಗ ಮದುವೆಯಾಗು ಎಂದು ಪದೇ ಪದೇ ಅದೇ ವಿಷಯವನ್ನು ಹೇಳಿ ತಲೆ ತಿನ್ನುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಆ ವ್ಯಕ್ತಿ ನೆರೆಮನೆಯವನ ಕಥೆಯನ್ನೇ ಮುಗಿಸಿದ್ದಾನೆ.
ಹುಡುಗಿಯರಿಗೆ 22 ವರ್ಷ ತುಂಬಿದ್ರೆ ಹಾಗೂ ಹುಡುಗರು 30-35 ವರ್ಷ ದಾಟಿದರೂ ಮದುವೆಯಾಗದಿದ್ರೆ ನೆರೆಹೊರೆಯವರು, ಸಂಬಂಧಿಕರು ಇನ್ನೇನು ವಯಸ್ಸಾಯ್ತಲ್ಲ ಯಾವಾಗಪ್ಪ ಮದುವೆ, ಬೇಗ ಒಂದು ಮದುವೆಯಾಗು ಅಂತೆಲ್ಲಾ ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಿರುತ್ತಾರೆ. ಇಲ್ಲವೇ ಚುಚ್ಚು ಮಾತುಗಳನ್ನು ಆಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೂ ಆತನ ನೆರೆಮನೆಯವರೊಬ್ಬ ವಯಸ್ಸು 45 ದಾಟುತ್ತಾ ಬಂತು ಇನ್ಯಾವಾಗ ಮದುವೆ ಎಂದು ಪದೆ ಪದೇ ಪ್ರಶ್ನೆ ಕೇಳಿ ಕಿರಿಕಿರಿ ಉಂಟು ಮಾಡುತ್ತಿದ್ದ. ಈ ಪ್ರಶ್ನೆಗಳ ಸುರಿಮಳೆಯಿಂದ ಬೇಸತ್ತು ಆ ವ್ಯಕ್ತಿ ನೆರೆ ಮನೆಯವನ ಕಥೆಯನ್ನೇ ಮುಗಿಸಿದ್ದಾನೆ. ಈ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಸ್ಟ್ರೈಟ್ಸ್ ಟೈಮ್ಸ್ ವರದಿಯ ಪ್ರಕಾರ ಈ ಘಟನೆ ಇಂಡೋನೇಷ್ಯಾದ ದಕ್ಷಿಣ ತಪನುಲಿ ಪ್ರಾಂತ್ಯದಲ್ಲಿ ನಡೆದಿದ್ದು, ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿ, ತಮಾಷೆ ಮಾಡುತ್ತಿದ್ದ ನೆರೆಮನೆಯವನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 45 ವರ್ಷ ವಯಸ್ಸಿನ ಸಿರ್ಗಾರ್ ಎಂಬವನು ಅಸಗಿಮ್ ಇರಿಯಾಂಟೊ ಎಂಬ 60 ವರ್ಷ ವಯಸ್ಸಿನ ನೆರೆಮನೆಯವನ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಜುಲೈ 29 ರ ರಾತ್ರಿ ಸಿರ್ಗಾರ್ ದೊಣ್ಣೆಯಿಂದ ನೆರೆಯ ಮನೆಯವನಾದ ಅಸಗಿಮ್‌ನ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: ರಾಜಾರೋಷವಾಗಿ ದೇವಾಲಯದ ಬಳಿ ಡ್ರಗ್ಸ್ ಸೇವನೆ; ಎತ್ತ ಸಾಗುತ್ತಿದೆ ನಮ್ಮ ಯುವ ಸಮಾಜ
ವಯಸ್ಸಾಗುತ್ತಾ ಬಂತಲ್ವಾ ಯಾವಾಗ ಮದುವೆ ಎಂದು ಪದೇ ಪದೇ ಅಸಗಿಮ್ ನನ್ನನ್ನು ಪ್ರಶ್ನಿಸುತ್ತಿದ್ದನು ಜೊತೆಗೆ ತಮಾಷೆ ಮಾಡ್ತಿದ್ದ ಇದರಿಂದ ಕೋಪಗೊಂಡು ನಾನು ಆತನನ್ನು ಕೊಲ್ಲುವ ನಿರ್ಧಾರ ಮಾಡಿದೆ ಎಂದು ಸಿರ್ಗಾರ್ ಪೊಲೀಸ್ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾರೆ. ಈ ಆಘಾತಕಾರಿ ಘಟನೆ ಇಂಡೋನೇಷ್ಯಾದಾದ್ಯಂತ ತಲ್ಲಣ ಮೂಡಿಸಿದ್ದು, ಅಲ್ಲಾ ಒಂದು ಸಣ್ಣ ಮಾತು ಕೂಡಾ ಕೊಲೆಗೆ ಕಾರಣವಾಗುತ್ತಾ ಎಂದು ನೆಟ್ಟಿಗರು ಈ ಸುದ್ದಿಯನ್ನು ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ