Viral: ದೈವಾರಾಧನೆಗೆ ಅಪಮಾನ; ದೈವದ ವೇಷ ಹಾಕಿ ವೇದಿಕೆ ಮೇಲೆ ನರ್ತನ ಮಾಡಿದ ಯುವಕ

ತುಳುನಾಡಿನ ದೈವಾರಾಧನೆ, ಭೂತಾರಾಧನೆಗೆ ಅದರದ್ದೇ ಆದ ನಿಯಮ, ಕಟ್ಟು ಪಾಡುಗಳಿವೆ. ಆದರೆ ಕಾಂತಾರ ಸಿನಿಮಾ ಬಂದ ಬಳಿಕ ಪಂಜುರ್ಲಿ ದೈವವನ್ನು, ದೈವಾರಾಧನೆ ಕಲೆಯನ್ನು ಅಣಕಿಸುವವರ, ದೈವದ ನೃತ್ಯ ಮಾಡಿ ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದ್ದು, ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಕೋಲದ ಅನುಕರಣೆ ಮಾಡುವ ಮೂಲಕ ಯುವಕರಿಬ್ಬರು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral: ದೈವಾರಾಧನೆಗೆ ಅಪಮಾನ; ದೈವದ ವೇಷ ಹಾಕಿ ವೇದಿಕೆ ಮೇಲೆ ನರ್ತನ ಮಾಡಿದ ಯುವಕ
ವೈರಲ್​​ ವಿಡಿಯೋ
Edited By:

Updated on: Mar 17, 2025 | 5:34 PM

ದೈವಾರಾಧನೆ, ಭೂತಾರಾಧನೆ ತುಳುನಾಡಿನ (Tulunadu) ಜನರ ನಂಬಿಕೆ (belief) ಎಂದ್ರೆ ತಪ್ಪಾಗಲಾರದು. ಇಲ್ಲಿನ ಜನ ಭಯ ಭಕ್ತಿಯಿಂದ ದೈವ-ದೇವರನ್ನು ಆರಾಧಿಸುತ್ತಾರೆ. ಜೊತೆಗೆ ದೈವಾರಾಧನೆಗೆ (daivaradhane) ಅದರದ್ದೇ ಆದ ಗೌರವ, ನಿಯಮ, ಕಟ್ಟು ಪಾಡುಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮನೋರಂಜನೆಗಾಗಿ ಜನ ರೀಲ್ಸ್‌ ಹಾಗೂ ವೇದಿಕೆಯ ಮೇಲೆ ದೈವವನ್ನು, ದೈವಾರಾಧನೆ ಕಲೆಯನ್ನು ಅಣಕಿಸುವವರ ಸಂಖ್ಯೆ ಹೆಚ್ಚಾಗಿತ್ತು. ಒಂದಷ್ಟು ಸಂಘಟನೆಗಳು ನಮ್ಮ ದೈವವನ್ನು ಅನುಕರಣೆ ಮಾಡಿ ಧಾರ್ಮಿಕ ಭಾವನೆ ಧಕ್ಕೆ ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ವಿಪರ್ಯಾಸ ಏನಂದ್ರೆ ದೈವಕೋಲದ ಅನುಕರಣೆ ಮಾಡಿ ಅಪಮಾನ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೌದು ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಯಾವುದೋ ಕಾರ್ಯಕ್ರಮದಲ್ಲಿ ಯುವಕರಿಬ್ಬರು ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಾರಾಧನೆ ಅನುಕರಣೆ ಮಾಡಿ, ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.

ಯಾವುದೋ ಕಾರ್ಯಕ್ರಮದಲ್ಲಿ ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಕೋಲದ ಅನುಕರಣೆ ಮಾಡುವ ಮೂಲಕ ಯುವಕರಿಬ್ಬರು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಆದರೆ ಇದು ಎಲ್ಲಿ ನಡೆದದ್ದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಈ ಕುರಿತ ವಿಡಿಯೋವನ್ನು vijeshetty ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ದಯವಿಟ್ಟು ದೇವರ ಹೆಸರಲ್ಲಿ ಈ ಅಸಂಬದ್ಧತೆಗಳನ್ನು ಮಾಡುವುದನ್ನು ನಿಲ್ಲಿಸಿ, ದೈವಾರಾಧನೆ ತುಳುನಾಡಿನ ಒಂದು ನಂಬಿಕೆ ಮತ್ತು ಒಂದು ಪವಿತ್ರ ಆಚರಣೆಯಾಗಿದೆ. ಇದಕ್ಕೆ ಅಪಮಾನ ಮಾಡದಿರಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ದೈವದ ವೇಷ ತೊಟ್ಟ ಯುವಕರಿಬ್ಬರು ವೇದಿಕೆಯ ಮೇಲೆ ದೈವಕೋಲದ ಅನುಕರಣೆ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಶಾಲೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಕುಡುಕ ಮಹಾಶಯ; ಆಘಾತಕಾರಿ ದೃಶ್ಯ ವೈರಲ್‌

ಮಾರ್ಚ್‌ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 74 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಂಬಿಕೆಯನ್ನು ಅಪಹಾಸ್ಯ ಮಾಡುವುದು ಸ್ವೀಕಾರಾರ್ಹವಲ್ಲʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಿನಿಮಾದಿಂದಾಗಿ ಜನ ಹೀಗೆಲ್ಲಾ ಹುಚ್ಚಾಟ ಮೆರೆಯುತ್ತಿದ್ದಾರೆ, ದೈವಾರಾಧನೆ ಆಗುತ್ತಿರುವ ಈ ಅಪಮಾನಕ್ಕೆ ಹೊಣೆ ಯಾರುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮ ಸಂಪ್ರದಾಯ ಆಚರಣೆಗೆ ಅಗೌರವ ತೋರಿದ್ದು ಎಷ್ಟು ಸರಿʼ ಎಂದು ಕಿಡಿ ಕಾರಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ