ಮೊಲಗಳು ಎಷ್ಟು ವೇಗವಾಗಿ ಓಡಿಕೊಂಡು ಹೋಗುತ್ತವೋ, ಇದಕ್ಕೆ ತದ್ವಿರುದ್ಧವಾಗಿ ಆಮೆಗಳು ಅಷ್ಟೇ ನಿಧಾನ ಗತಿಯಲ್ಲಿ ಚಲಿಸುತ್ತವೆ. ಈ ಆಮೆ ಮತ್ತು ಮೊಲದ ನಡಿಗೆಯ ಕುರಿತ ನೀತಿ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ, ಓಟದ ಸ್ಪರ್ಧೆಯಲ್ಲಿ ಮೊಲವು ನಾನೇ ಗೆಲ್ಲುತ್ತೇನೆ ಎಂದು ಜಂಬದಿಂದ ಓಡಿ ಹೋಗಿ ಆಮೆ ಇನ್ನು ಕೂಡಾ ಬಾರದೆ ಇರುವುದನ್ನು ಕಂಡು ಮೊಲವು ಅರ್ಧ ದಾರಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಮಲಗಿರುತ್ತದೆ, ಅಂತಿಮವಾಗಿ ತಾಳ್ಮೆ ಮತ್ತು ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸದಿಂದ ಆಮೆಯು ಓಟದ ಸ್ಪರ್ಧೆಯಲ್ಲಿ ಗೆದ್ದು, ತಾಳ್ಮೆ ಮತ್ತು ನಮ್ಮಲ್ಲಿ ನಾವು ಆತ್ಮವಿಶ್ವಾಸವಿಟ್ಟರೆ ಗೆಲುವು ಖಚಿತ ಎಂಬ ನೀತಿ ಪಾಠವನ್ನು ಕಲಿಸಿತ್ತು. ಆದರೆ ಆ ಕಥೆಯನ್ನೇ ಇಲ್ಲೊಂದು ಆಮೆ ಉಲ್ಟಾ ಮಾಡಿ ಬಿಟ್ಟಿದೆ. ಹೌದು, ನನಗೂ ಕೂಡಾ ಮೊಲದ ಹಾಗೆ ವೇಗವಾಗಿ ಓಡಲು ಬರುತ್ತೆ ಅಂತ ಈ ಆಮೆ ವೇಗವಾಗಿ ಓಡುತ್ತಾ ಹೋಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆಮೆ ಇಷ್ಟು ವೇಗವಾಗಿ ಓಡುವುದನ್ನು ನಾವು ಹಿಂದೆಂದೂ ನೋಡೆ ಇಲ್ಲ ಅಂತ ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.
ಈ ವಿಡಿಯೋವನ್ನು @pubity ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಆಮೆಯೊಂದು ವೇಗವಾಗಿ ಓಡಿಕೊಂಡು ಹೋಗುವಂತಹ ಆಶ್ಚರ್ಯಕರ ದೃಶ್ಯವನ್ನು ಕಾಣಬಹುದು.
ವಿಡಿಯೋದಲ್ಲಿ ಸರೋವರದ ಪಕ್ಕ ಕಟ್ಟಿದ್ದಂತಹ ಸಣ್ಣ ಬ್ರಿಡ್ಜ್ ದಾಟಲು, ಆಮೆಯೊಂದು ನಿಧಾನಕ್ಕೆ ನಿಧಾನಕ್ಕೆ ಚಲಿಸುತ್ತಾ ಬರುತ್ತದೆ. ಇನ್ನೇನೂ ಈ ಆಮೆ ಒಂದು ಗಂಟೆಯಾದರೂ ಬ್ರಿಡ್ಜ್ ದಾಟಲ್ಲ ಅಂತ ಅಂದುಕೊಳ್ಳುವಷ್ಟರಲ್ಲಿ, ಆಮೆಯು ಕ್ಷಣಾರ್ಧದಲ್ಲಿ ಓಡಿ ಹೋಗಿ ಬ್ರಿಡ್ಜ್ ದಾಟುವ ಆಶ್ಚರ್ಯಕರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಕ್ತರಿಗೆ ತೀರ್ಥ ಪ್ರಸಾದ ನೀಡಲು ಪುರೋಹಿತರೊಂದಿಗೆ ಕುಳಿತ ಶಿಷ್ಯ ಬೆಕ್ಕಣ್ಣ
ಡಿಸೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 83 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಬಹುಶಃ ಈ ಆಮೆಯು ಮೊಲದ ಬಳಿ ಓಟದ ತರಬೇತಿ ಪಡೆದಿರಬಹುದುʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಮೆಗಳೂ ಓಡಬಹುದು ಎಂದು ನಾನು ಊಹೆ ಕೂಡಾ ಮಾಡಿರಲಿಲ್ಲ, ಇದು ತುಂಬಾ ಆಶ್ಚರ್ಯಕರವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಮೆ ಮತ್ತು ಮೊಲದ ನೀತಿ ಕಥೆಯು ಫುಲ್ ಉಲ್ಟಾ ಹೊಡೆದಂಗಿದೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಆಮೆ ಓಡಿ ಹೋಗುವ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ